– ದೇಶದಲ್ಲಿ ಬಿಡುಗಡೆಯಾಗದೇ ಇದ್ದರೂ ಈ ಮಾರುಕಟ್ಟೆಯಲ್ಲಿ ಲಭ್ಯ
ನವದೆಹಲಿ: ಒಟ್ಟು 13 ಲಕ್ಷ ರೂ. ಮೌಲ್ಯದ ಕ್ಸಿಯೋಮಿ ಕಂಪನಿಯ ನಕಲಿ ಉತ್ಪನ್ನಗಳನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಕಲಿ ಎಂಐ ಪವರ್ ಬ್ಯಾಂಕ್, ನೆಕ್ ಬ್ಯಾಂಡ್, ಕೇಬಲ್ ಜೊತೆಗೆ ಟ್ರಾವೆಲ್ ಅಡಾಪ್ಟರ್, ಇಯರ್ ಫೋನ್ ಮತ್ತು ಹೆಡ್‍ಸೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ದೇಶದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗದೇ ಇದ್ದರೂ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದನ್ನು ಕಂಡು ಕ್ಸಿಯೋಮಿ ಕಂಪನಿ ದೂರು ನೀಡಿತ್ತು.
Advertisement
Advertisement
ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕರೋಲ್ ಬಾಗ್‍ನ ಗಫೂರ್ ಮಾರುಕಟ್ಟೆ ಮೇಲೆ ದಾಳಿ ನಡೆಸಿ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
Advertisement
ಗಫೂರ್ ಮಾರುಕಟ್ಟೆ ದೆಹಲಿಯ ಪ್ರಸಿದ್ಧ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರುಕಟ್ಟೆಯಾಗಿದ್ದು ಕಡಿಮೆ ಬೆಲೆಯಲ್ಲಿ ಚೀನಾ ವಸ್ತುಗಳು ದೊರಕುತ್ತಿವೆ. ವಿಚಾರಣೆ ವೇಳೆ 4 ಮಂದಿ ವಿತರಕರು ಕ್ಸಿಯೋಮಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. 2015ರಲ್ಲಿ ದೆಹಲಿ ಪೊಲೀಸರು 30 ನಕಲಿ ಐಫೋನ್ 5 ಮತ್ತು ಐಫೋನ್ 6 ಮಾದರಿಯನ್ನು ವಶಪಡಿಸಿಕೊಂಡಿದ್ದರು.
ದೆಹಲಿ ಮಾರುಕಟ್ಟೆಯಲ್ಲಿ ಎಷ್ಟು ಕಡಿಮೆಗೆ ಉತ್ಪನ್ನಗಳು ಸಿಗುತ್ತದೆ ಎಂದರೆ ಕೇವಲ 11 ಸಾವಿರ ರೂ.ಗೆ ಐಫೋನ್6 ದೊರೆಯುತ್ತದೆ. ಈ ಫೋನಿಗೆ ಆನ್‍ಲೈನ್ ಶಾಪಿಂಗ್ ತಾಣದಲ್ಲಿ 25,749 ರೂ. ದರ ನಿಗದಿಯಾಗಿದೆ.