ಉಡುಪಿ: ಇಲ್ಲಿನ ರಾಜೀವ ನಗರದಲ್ಲಿ (Rajeev Nagar) ನಕಲಿ ಮತದಾನ (Fake Vote) ಗೊಂದಲದ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ (Udupi) ಡಿ.ಸಿ. ಡಾ.ವಿದ್ಯಾಕುಮಾರಿ (Dr Vidyakumari) ಸ್ಪಷ್ಟನೆ ನೀಡಿದ್ದು, ನಕಲಿ ಮತದಾನ ನಡೆದಿಲ್ಲ ಎಂದು ತಿಳಿಸಿದ್ದಾರೆ.
ರಾಜೀವ ನಗರದಲ್ಲಿ ಯಾವುದೇ ನಕಲಿ ಮತದಾನ ನಡೆದಿಲ್ಲ. ಮಣಿಪಾಲದ ಅರ್ಬಿ ನಿವಾಸಿ ಕೃಷ್ಣ ನಾಯ್ಕ್ ಹೆಸರಲ್ಲಿ ಮತದಾನ ನಡೆದಿದ್ದು, ಒಂದೇ ಹೆಸರಿನ ಇಬ್ಬರು ಇರೋದರಿಂದ ಗೊಂದಲ ಉಂಟಾಗಿದೆ. ಒಂದೇ ಮತಗಟ್ಟೆಯಲ್ಲಿ ಕೃಷ್ಣ ನಾಯ್ಕ ಹೆಸರಿನ ಇಬ್ಬರು ಮತದಾರರು ಇದ್ದ ಕಾರಣ ವೋಟರ್ ಸ್ಲಿಪ್ ಅದಲು ಬದಲಾಗಿ ಗೊಂದಲ ಉಂಟಾಗಿದೆ ಎಂದರು. ಇದನ್ನೂ ಓದಿ:
Advertisement
Advertisement
ನಡೆದಿದ್ದು ಏನು?
ಮತ ಚಲಾಯಿಸಲೆಂದು ಮಣಿಪಾಲದ ಅರ್ಬಿ ನಿವಾಸಿ ಕೃಷ್ಣ ನಾಯ್ಕ್ ಮತಗಟ್ಟೆಗೆ ಆಗಮಿಸಿದ ವೇಳೆ ತನ್ನ ಹೆಸರಲ್ಲಿ ಬೇರೊಬ್ಬರು ಮತ ಚಲಾಯಿಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಎರಡೂ ಪಕ್ಷಗಳ ಮತಗಟ್ಟೆ ಏಜೆಂಟ್‌ಗಳಿಂದ ವಿರೋಧ ವ್ಯಕ್ತವಾಗಿದ್ದು, ಮತಗಟ್ಟೆ ಅಧಿಕಾರಿಗಳನ್ನು ಬೂತ್ ಏಜೆಂಟ್‌ಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಮಣಿಪಾಲದ ರಾಜೀವ ನಗರ ಮತಗಟ್ಟೆಯಲ್ಲಿ ಘಟನೆ ನಡೆದಿದ್ದು, ನಕಲಿ ಮತದಾನ ಮಾಡಿದವರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಲಾಗಿತ್ತು. ಇದನ್ನೂ ಓದಿ:
Advertisement