ಬೆಂಗಳೂರು: ನಕಲಿ ಚುನಾವಣಾ ಚೀಟಿಗಳನ್ನು ಮುದ್ರಣ ಮಾಡುತ್ತಿದ್ದ ಆರೋಪದಲ್ಲಿ ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ 14 ಜನರ ವಿರುದ್ಧ ಎಫ್‍ಐಆರ್ ದಾಖಲು ಮಾಡಿದ್ದಾರೆ.
ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ದೇರಾಜು ಎಂಬವರಿಂದ ದೂರು ಪಡೆದು ಐಪಿಸಿ ಸೆಕ್ಷನ್ 171 ಬಿ ಮತ್ತು ಪ್ರಜಾ ಪ್ರತನಿಧಿ ಕಾಯ್ದೆ 127 ಎ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಸೋಮವಾರ ಪೊಲೀಸರು ಎನ್‍ಸಿಆರ್ ದಾಖಲಿಸಿದ್ರು. ಬಳಿಕ ಇಂದು 5ನೇ ಎಸಿಎಂಎಂ ಕೋರ್ಟ್ ನ ಅನುಮತಿ ಪಡೆದು ಎಫ್‍ಐಆರ್ ದಾಖಲು ಮಾಡಲಾಗಿದೆ.
Advertisement
ಏನಿದು ಪ್ರಕರಣ: ಸೋಮವಾರ ರಾತ್ರಿ ನಗರದ ಉಪ್ಪಾರಪೇಟೆಯ ಪ್ರಭಾತ್ ಕಾಂಪ್ಲೆಕ್ಸ್ ಮೇಲೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ್ದರು. ನಕಲಿ ಮತದಾರರ ಚೀಟಿಗಳನ್ನು ಮುದ್ರಣ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿದ ಪರಿಣಾಮ ದಾಳಿ ನಡೆಸಲಾಗಿತ್ತು. ನಕಲಿ ಕೇಂದ್ರದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ನಕಲಿ ಮತದಾರರ ಪಟ್ಟಿ, ಸೀಲ್‍ಗಳು, ಇನ್ನಿತರ ವಸ್ತುಗಳು ಪತ್ತೆಯಾಗಿತ್ತು. ನಗರದ ಕೆಜಿ ರಸ್ತೆಯ ಪ್ರಭಾತ್ ಕಾಂಪ್ಲೆಕ್ಸ್ ನಲ್ಲಿ ತೆರೆಯಲಾಗಿದ್ದ ಈ ಕಚೇರಿ ಖಲೀಲುಲ್ಲಾ ಎಂಬವರಿಗೆ ಸೇರಿದೆ.
Advertisement
Congress Exposed
Youth Cong Nation Secretary Ibrahim Khaleelulla has been arrested after being caught printing fake Voters ID cards.
18 people involved in printing fake Voter ID cards have been arrested
Bengaluru central candidate @ArshadRizwan is behind this racket.
— BJP Karnataka (@BJP4Karnataka) April 15, 2019