ಕಲಬುರಗಿ: ಪ್ರತಿಷ್ಠಿತ ಕಂಪನಿಯ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಟೀ ಪುಡಿ ಇದೀಗ ಕಲಬುರಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
Advertisement
ಒಂದು ವೇಳೆ ನಕಲಿ ಟೀ ಪೌಡರ್‍ನ ಟೀ ಕುಡಿದ್ರೆ ಮಾರಕ ಕ್ಯಾನ್ಸರ್ ರೋಗ ಬರುತ್ತದೆಯಂತೆ. ಈ ಬಗ್ಗೆ ಖುದ್ದು ಕಲಬುರಗಿ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ ನಕಲೀ ಟೀ ಪೌಡರಿನ ಜಾಲವನ್ನು ಬಯಲಿಗೆ ತಂದಿದ್ದಾರೆ.
Advertisement
Advertisement
ಮುಂಬೈ ನಗರದ ಹೋಟೆಲ್‍ಗಳಲ್ಲಿ ಬಳಕೆಯಾದ ಟೀ ಪುಡಿಯನ್ನು ಕಡಿಮೆ ದರಕ್ಕೆ ಖರೀದಿಸಿ ನಂತರ ಅದನ್ನು ನಮ್ಮ ರಾಜ್ಯಕ್ಕೆ ಮೂಟೆಗಟ್ಟಲೆ ಮಾರಾಟ ಮಾಡಲಾಗುತ್ತಿದೆ. ಆ ಕಳಪೆ ಟೀ ಪೌಡರಿನಲ್ಲಿ ವಿಷಯುಕ್ತ ಬಣ್ಣ ಬೆರೆಸಿ ಪ್ರತಿಷ್ಠಿತ ಕಂಪೆನಿಯೊಂದರ ಲೇಬಲ್ ಹಚ್ಚಿ ಕಲಬುರಗಿ ಮಾರಾಟ ಮಾಡುತ್ತಿದ್ದರು. ಈ ಕುರಿತು ಕಲಬುರಗಿಯ ಆಹಾರ ಸುರಕ್ಷತಾ ಇಲಾಖೆಗೆ ಸಾರ್ವಜನಿಕರಿಂದ ದೂರು ಆಧರಿಸಿ, ನಗರದ ಹಾಗರಗಾ ಕ್ರಾಸ್ ಬಳಿ ಶೇಖಸಾಬ ಎಂಬ ಅಂಗಡಿಯ ಮೇಲೆ ದಾಳಿ ನಡೆಸಿದ್ದಾಗ 37 ಸಾವಿರ ಮೌಲ್ಯದ ನಕಲಿ ಟೀ ಪುಡಿಯನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾಗ ನಕಲಿ ಟೀ ಪೌಡರ್ ಅನ್ನು ಮಹಾರಾಷ್ಟ್ರದ ಮುಂಬೈನಿಂದ ಖರೀದಿಸಿರುವುದಾಗಿ ಹೇಳಿದ್ದಾನೆ.
Advertisement
ಇನ್ನು ಪ್ರಕರಣ ಸಂಬಂಧ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.