ಹಾವೇರಿ: ಕಾವಿ ತೊಟ್ಟು ಜನರನ್ನು ವಂಚಿಸುತ್ತಿದ್ದ ಇಬ್ಬರಿಗೆ ಧರ್ಮದೇಟು ನೀಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಬಳಿಯ ಜೇಕಿನಕಟ್ಟಿ ರಸ್ತೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆ ಮೂಲದ ಇಬ್ಬರು ವ್ಯಕ್ತಿಗಳು ಕಾವಿ ತೊಟ್ಟು ಮನೆಮನೆಗೆ ತೆರಳಿ ಜನರಿಂದ ಹಣ ಸಂಗ್ರಹಿಸುತ್ತಿದ್ದರು. ಬಳಿಕ ಗ್ರಾಮದ ಹೊರವಲಯಕ್ಕೆ ಬಂದು ಕಾವಿ ಕಳಚಿ ಬೇರೆ ಬಟ್ಟೆ ತೊಟ್ಟು ಓಡಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: 8 ಸಾವಿರ ಸಾಲ ಮಾಡಿ ಲಕ್ಷ ಲಕ್ಷ ಮರುಪಾವತಿ ಮಾಡಿದ ಖಾಸಗಿ ಬ್ಯಾಂಕ್ ನೌಕರ
Advertisement
Advertisement
ಈ ವಿಚಾರವನ್ನು ಗಮನಿಸಿದ ಗ್ರಾಮಸ್ಥರು ಇಬ್ಬರನ್ನು ಬೆನ್ನಟ್ಟಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಾವಿ ತೊಟ್ಟು, ಮನೆಮನೆಗೆ ತೆರಳಿ, ಜನರಿಗೆ ಇಲ್ಲಸಲ್ಲದ್ದು ಹೇಳಿ, ಹಣ ವಸೂಲಿ ಮಾಡುತ್ತಿದ್ದರು. ಕಾವಿ ತೊಟ್ಟು ಹಿಂದೂ ಧರ್ಮಕ್ಕೆ ಅವಮಾನ ಮಾಡುತ್ತಿದ್ದೀರಿ ಎಂದು ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಅವಿವಾಹಿತ ಮಗಳು ಪೋಷಕರಿಂದಲೇ ವಿವಾಹದ ವೆಚ್ಚ ಪಡೆಯಬಹುದು: ಹೈಕೋರ್ಟ್
Advertisement
ಮಾದಾಪುರ, ಕಾರಡಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾವಿ ತೊಟ್ಟು ಮನೆಮನೆಗೆ ಹೋಗಿ ಜನರಿಂದ ಹಣ ಸಂಗ್ರಹಿಸುತ್ತಿದ್ದರು. ಇದೀಗ ಗ್ರಾಮಸ್ಥರು ಅವರಿಗೆ ಧರ್ಮದೇಟು ನೀಡಿ, ಕಾವಿ ಕಳಚಿ, ಬೇರೆ ಬಟ್ಟೆ ಹಾಕಿಸಿ ಕಳುಹಿಸಿದ್ದಾರೆ. ಪ್ರಕರಣ ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.