– ಪೊಲೀಸರಿಗೂ 45 ಸಾವಿರ ರೂ. ವಂಚನೆ
ಕೊಪ್ಪಳ: ನಾನಾ ವೇಷ ತೊಟ್ಟು ಜನರಿಗೆ ಟೋಪಿ ಹಾಕಿದ್ದ ಸ್ವಾಮೀಜಿಯನ್ನು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಬಂಧಿಸಿದ್ದಾರೆ.
Advertisement
ಕಪಟ ಸ್ವಾಮೀಜಿ ಶಿವಾನಂದ ಕಡಿಯನ್ನು ಪೊಲೀಸರು ಬಂಧಿಸಿದ್ದು, ಮೂಲತಃ ಈತನ ಹೆಸರು ಸಿದ್ದರಾಮ ಆಗಿದ್ದು, ಕಲಬುರಗಿ ಜಿಲ್ಲೆಯ ಜೇವರ್ಗಿ ನಿವಾಸಿಯಾಗಿದ್ದಾನೆ. ನಾನು ಸ್ವಾಮೀಜಿ ಎಂದು ಸುಳ್ಳು ಹೇಳಿ ನೂರಾರು ಜನರಿಗೆ ವಂಚನೆ ಮಾಡಿದ್ದನು. ಅಲ್ಲದೆ ಅಪ್ರಾಪ್ತ ಬಾಲಕಿಗೂ ಸಹ ಈ ಸ್ವಾಮೀಜಿ ವಂಚನೆಯನ್ನು ಮಾಡಿದ್ದನು. ಬಾಲಕಿಯನ್ನು ಈತ ನಾನು ಟಿಕೆಟ್ ಕಲೆಕ್ಟರ್ ಎಂದು ವಂಚನೆ ಮಾಡಿದ್ದಾನೆ. ಈ ಹಿನ್ನೆಲೆ ಬಾಲಕಿ ತಂದೆ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮೆಟ್ರೋ ನಿಲ್ದಾಣದ ಗ್ರಿಲ್‍ನಲ್ಲಿ ಸಿಲುಕಿದ್ದ ಬಾಲಕಿ ರಕ್ಷಿಸಿದ CISF ಸಿಬ್ಬಂದಿ!
Advertisement
Advertisement
ಅಲ್ಲದೆ ಸಿದ್ದರಾಮ ಈ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದನು. ಈ ವಿಷಯ ತಿಳಿದ ಬಾಲಕಿ ತಂದೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿದ್ದರಾಮನ ಆಟ ಬಯಲಾಗಿದೆ. ಈ ಪರಿಣಾಮ ಸ್ವಾಮೀಜಿಯನ್ನು ಕೊಪ್ಪಳದ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Advertisement
ಪೊಲೀಸರಿಗೂ ಮೋಸ ಮಾಡಿದ ಈತ, ಪೊಲೀಸ್ ವಾಕಿ ಟಾಕಿಗೆ ಪೂಜೆ ಮಾಡುತ್ತೇನೆ ಎಂಬ ಹೆಸರಲ್ಲಿ 45 ಸಾವಿರ ಹಣ ವಸೂಲಿ ಮಾಡಿದ್ದಾನೆ. ಸಿದ್ದರಾಮ ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಪೋತಲಕಟ್ಟಿಯಲ್ಲಿ ಮಠ ಮಾಡಿಕೊಂಡಿದ್ದು, ಅಲ್ಲಿಗೆ ಬಂದ ಜನರಿಗೆ ವಂಚನೆ ಮಾಡುತ್ತಿದ್ದಾನೆ ಎಂಬುದು ತನಿಖೆ ಮೂಲಕ ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೆ ನಿಧಿ ತಗೆದುಕೊಡೋದಾಗಿ ಹೇಳಿ ನಿಧಿ ತಗೆಯೋದೆಲ್ಲಾ ವೀಡಿಯೋ ಮಾಡಿಸಿಕೊಂಡಿದ್ದಾನೆ ಈ ಕಪಟ ಸ್ವಾಮೀ. ‘ಮಂತ್ರದಿಂದ ಹಣ ಉದುರತ್ತೆ’ ಎಂದು ಜನರಿಗೆ ಟೋಪಿ ಹಾಕಿ ಲಕ್ಷಾಂತರ ಹಣ ವಂಚನೆ ಮಾಡಿದ್ದಾನೆ. ರಾಯಚೂರು, ಕೊಪ್ಪಳ ಮಾತ್ರವಲ್ಲದೆ ರಾಜ್ಯದ ನಾನಾ ಭಾಗದಲ್ಲಿ ಇವನು ಜನರನ್ನು ವಂಚನೆ ಮಾಡಿದ್ದು, ಈಗ ಪೊಲೀಸರ ಬಲೆ ಸಿಕ್ಕಿ ಬಿದ್ದಿದ್ದಾನೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ
ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಅಪ್ರಾಪ್ತ ಬಾಲಕಿ ತಂದೆಯ ದೂರಿನ ಆಧಾರದ ಮೇಲೆ ಕೊಪ್ಪಳ ಮಹಿಳಾ ಪೊಲೀಸರು ಕಳ್ಳ ಸ್ವಾಮೀಜಿಯನ್ನು ಬಂಧಿಸಿದ್ದಾರೆ.