ನವದೆಹಲಿ: ನೋಟು ನಿಷೇಧದಿಂದ ಖೋಟಾನೋಟಿಗೆ ಕಡಿವಾಣ ಬೀಳಲಿದೆ ಎಂದು ಪ್ರಧಾನಿ ಮೋದಿ ಹೋದಲ್ಲೆಲ್ಲಾ ಹೇಳುತ್ತಿದ್ದರು. ಆದರೆ ಪ್ರತಿಷ್ಠಿತ ಬ್ಯಾಂಕ್‍ಗಳ ಎಟಿಎಂನಿಂದಲೇ ಖೋಟಾನೋಟುಗಳು ಹೊರಬರ್ತಿವೆ.
ಹೌದು. ನೋಟಿನ ಕಂತೆಗಳ ನಡುವೆ ಖೋಟಾನೋಟು ಇಟ್ಟು ಚಲಾವಣೆಗೆ ಯತ್ನ ನಡೆಯುತ್ತಿದೆ. ದಕ್ಷಿಣ ದೆಹಲಿಯ ಸಂಗಮ್ ವಿಹಾರ್‍ನಲ್ಲಿರುವ ಎಸ್‍ಬಿಐ ಎಟಿಎಂನಲ್ಲಿ ಗ್ರಾಹಕರೊಬ್ಬರು ಡ್ರಾ ಮಾಡಿದಾಗ 2 ಸಾವಿರ ರೂಪಾಯಿ ಮುಖಬೆಲೆಯ ನಾಲ್ಕೈದು ಖೋಟಾನೋಟು ಪತ್ತೆಯಾಗಿದೆ.
Advertisement
ಮೊದಲ ನೋಟಕ್ಕೆ ಇದು ಅಸಲಿ ನೋಟಿನಂತೆ ಕಾಣುತ್ತದೆ. ಅಸಲಿ ನೋಟಿನಂತೆ ಬಹುತೇಕ ಎಲ್ಲಾ ಲಕ್ಷಣಗಳು ಖೋಟಾ ನೋಟಿನಲ್ಲಿವೆ. ಆದರೆ ಅಸಲಿ ನೋಟಲ್ಲ. ಭಾರತೀಯ ಮನೋರಂಜನ್ ಬ್ಯಾಂಕ್ ಹೆಸರಲ್ಲಿರುವ ನೋಟುಗಳಲ್ಲಿ `ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಜಾಗದಲ್ಲಿ `ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಅಚ್ಚೊತ್ತಲಾಗಿದೆ.
Advertisement
ಚಿಲ್ಡ್ರನ್ ಗೌರ್ಮೆಂಟ್ ಗ್ಯಾರಂಟಿ ಎಂದು ನೋಟಿನ ಮೇಲೆ ನಮೂದಾಗಿದೆ. ಬ್ಯಾಂಕ್ ಸೀಲ್ ಬದಲು ನೋಟಿನ ಮೇಲೆ ಪಿಕೆ ಸಿನಿಮಾದ ಇಮೇಜ್ ಇದೆ. ಇನ್ನು ತನಿಖೆ ಮಾಡಲು ಹೋದ ಸಬ್‍ಇನ್ಸ್ ಪೆಕ್ಟರ್‍ಗೂ ಖೋಟಾನೋಟುಗಳೇ ಸಿಕ್ಕಿವೆ.
Advertisement
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಎಸ್‍ಬಿಐ ವಕ್ತಾರರೊಬ್ಬರು ಪ್ರತಿಕ್ರಿಯಿಸಿ ಖೋಟಾ ನೋಟು ಬಂದ ಹಿನ್ನೆಲೆಯಲ್ಲಿ ತಂಡವನ್ನು ಕಳುಹಿಸಿ ತನಿಖೆ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
Advertisement
ಈ ನೋಟುಗಳು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಪ್ಲಾನ್ ಮೂರೇ ತಿಂಗಳಿಗೆ ಠುಸ್ ಆಯ್ತಾ? ನೋಟು ನಿಷೇಧದ ಉದ್ದೇಶವೇ ಬುಡಮೇಲಾಯ್ತಾ ಎನ್ನುವ ಪ್ರಶ್ನೆಯನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದಾರೆ.
ಸಂಜೆ ಎಸ್‍ಬಿಐ ಬ್ಯಾಂಕ್ ನಮ್ಮ ಶಾಖೆಯ ಎಟಿಎಂನಲ್ಲಿ ಯಾವುದೇ ನಕಲಿ ನೋಟು ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದೆ.