ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗ ಅಸಲಿ ವರ್ಸಸ್ ನಕಲಿ ಬಾಡಿಗೆ ವಾಹನಗಳ ಫೈಟ್ ತಾರಕಕ್ಕೇರಿದೆ. ಆಟೋ ಮತ್ತು ರ್ಯಾಪಿಡೋ ಬೈಕ್ ಫೈಟ್ ಒಂದು ಕಡೆಯಾದರೆ, ವೈಟ್ ಬೋರ್ಡ್ ಐಷಾರಾಮಿ ಕಾರುಗಳು ಬಾಡಿಗೆ ಓಡಿಸೋದ್ರಿಂದ ತೆರಿಗೆ ಕಟ್ಟುತ್ತಿರುವ ಹಳದಿ ಬೋರ್ಡ್ ಚಾಲಕರು ಈಗ ಬೀದಿಗೆ ಬರುವಂತಾಗಿದೆ.
Advertisement
ಆಡಿ, ಬೆಂಜ್, ರೇಂಜ್ ರೋವಾರ್ ಫಾರ್ಚುನರ್ ಹೀಗೆ ಸಾಲಾಗಿ ನಿಂತಿರುವ ಐಷಾರಾಮಿ ಕಾರುಗಳು ಅಸಲಿಗೆ ಬಾಡಿಗೆ ಗಾಡಿಗಳು. ಆದರೆ ವೈಟ್ ಬೋರ್ಡ್ ಹಾಕಿಕೊಂಡು ಸರ್ಕಾರಕ್ಕೂ ತೆರಿಗೆ ವಂಚಿಸಿ, ಇತ್ತ ನಿಯತ್ತಾಗಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಿ ಹಳದಿ ಫಲಕ ಹಾಕಿಕೊಂಡ ಬಾಡಿಗೆ ಚಾಲಕರಿಗೂ ದೋಖಾ ಮಾಡಿ, ಆಪ್ ಮೂಲಕ ಸೈಲೆಂಟ್ ಆಗಿ ಬೆಂಗಳೂರಿನಲ್ಲಿ ಕಾರ್ಯಾಚರಣೆ ಮಾಡುತ್ತಿದೆಯಂತೆ. ಹೀಗಾಗಿ ರೊಚ್ಚಿಗೆದ್ದ ಚಾಲಕರೇ ಖುದ್ದು ಈ ಐಷಾರಾಮಿ ವಾಹನದ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟು ದಾಳಿ ಮಾಡಿಸಿದ್ದಾರೆ. ಕೋರಮಂಗಲ ಹೆಚ್‍ಎಸ್‍ಆರ್ ಲೇಔಟ್ ಭಾಗದಲ್ಲಿ ರೇಡ್ ನಡೆದಿದ್ದು,, ಸುಮಾರು 17ಕ್ಕೂ ಅಧಿಕ ವಾಹನವನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಸೀಝ್ ಮಾಡಿದ್ದಾರೆ.
Advertisement
Advertisement
ರ್ಯಾಪಿಡೋ ಬೈಕ್ ಹಾವಳಿಯ ವಿರುದ್ಧ ಕಿಡಿಕಾರಿರುವ ಬೆಂಗಳೂರು ಆಟೋ ಚಾಲಕರು, ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾವೇ ರ್ಯಾಪಿಡೋ ಬೈಕ್‍ಗಳನ್ನು ಆರ್‍ಟಿಓ ಅಧಿಕಾರಿಗಳಿಗೆ ಹಿಡಿದು ಕೊಟ್ಟಿದ್ದಾರೆ. ರ್ಯಾಪಿಡೋ ಹಾವಳಿಯಿಂದ ನಮ್ಗೆ ಬಾಡಿಗೆ ಬರೋದು ಕಡಿಮೆಯಾಗಿದೆ ಅಂತಾ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ರ್ಯಾಪಿಡೋ ಸವಾರರ ಜೊತೆ ಆಟೋ ಚಾಲಕರು ಮಾತಿನ ಚಕಮಕಿ ಕೂಡ ನಡೆಸಿದ್ರು. ಇದನ್ನೂ ಓದಿ: ನೋ ಪಾರ್ಕಿಂಗ್ ಹಾವಳಿ ತಪ್ಪಿಸಲು ವ್ಹೀಲಿಂಗ್ ಕ್ಲಾಂಪ್ ಮೊರೆ- ಸ್ಥಳದಲ್ಲೇ ದಂಡ ವಸೂಲಿಗೆ ಪ್ಲಾನ್!
Advertisement
ಅಸಲಿಗೆ ಇದೆಲ್ಲವೂ ಸಾರಿಗೆ ಇಲಾಖೆಗೆ ಗೊತ್ತಿಲ್ಲದೇ ನಡೆಯೋದಕ್ಕೆ ಸಾಧ್ಯವೇ ಇಲ್ಲ. ಇಷ್ಟೆಲ್ಲ ರಾಜರೋಷವಾಗಿ ಇದೆಲ್ಲ ನಡೆಯುತ್ತಿರೋದು ನೋಡಿದ್ರೇ ಅಧಿಕಾರಿಗಳೇ ಇಂತಹ ಅಕ್ರಮಗಳಿಗೆಲ್ಲ ಕುಮ್ಮಕ್ಕು ಕೊಡ್ತಾ ಇದ್ದಾರೇನೋ ಅನ್ನೋ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.