– ಬಂಧಿತರಿಂದ 25 ಲಕ್ಷ ಮೌಲ್ಯದ ಒಟ್ಟು 6 ಬಂಡಲ್‍ಗಳು ವಶ
ಬಳ್ಳಾರಿ: ಅಸಲಿ 1 ಲಕ್ಷ ರೂಪಾಯಿ ಕೊಟ್ಟರೆ, ನಕಲಿ 5 ಲಕ್ಷ ರೂಪಾಯಿ ಕೊಡುವುದಾಗಿ ವಂಚಿಸುತ್ತಿದ್ದ ಆರೋಪಿಗಳನ್ನು ಹಗರಿಬೊಮ್ಮನಹಳ್ಳಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾನ್ವಿಯ ರಾಜೇಂದ್ರ ಹಾಗೂ ಯಲಬುರ್ಗಾದ ಅಂದಾನಿಗೌಡ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಹಗರಿಬೊಮ್ಮನಹಳ್ಳಿಯ ಹಲವು ವರ್ತಕರಿಗೆ ಕರೆ ಮಾಡಿ ನೀವು 1 ಲಕ್ಷ ರೂಪಾಯಿ ಅಸಲಿ ನೋಟುಗಳನ್ನು ಕೊಡಿ, ನಾವು ನಿಮಗೆ 5 ಲಕ್ಷ ರೂಪಾಯಿ ನಕಲಿ ನೀಡುತ್ತೇವೆ ಎಂದು ವಂಚಿಸುತ್ತಿದ್ದರು. ಈ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸುವಲ್ಲಿ ಸಫಲರಾಗಿದ್ದಾರೆ.
Advertisement
Advertisement
ಬಂಧಿತರಿಂದ 25 ಲಕ್ಷ ಮೌಲ್ಯದ ಒಟ್ಟು 6 ಬಂಡಲ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮೌಲ್ಯ ಒಟ್ಟು 1.5 ಕೋಟಿ ರೂಪಾಯಿ ಆಗಿದ್ದು, ಇದಲ್ಲದೇ ಒಂದು ಬೈಕ್ ಸೇರಿದಂತೆ 3 ಮೊಬೈಲ್‍ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಖೋಟಾ ನೋಟು ಚಲಾವಣೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ವ್ಯಾಪಕ ವಿಚಾರಣೆ ನಡೆಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv