ದೇಶಾದ್ಯಂತ ಸಂಚಲನ ಮೂಡಿಸಿದ್ದ ನಕಲಿ ನೋಟ್ ಹಾವಳಿ ಪ್ರಕರಣ – ಬಳ್ಳಾರಿ ಯುವಕನ ಬಂಧಿಸಿದ ಎನ್‍ಐಎ

Public TV
1 Min Read
NIA

ಬಳ್ಳಾರಿ: ದೇಶಾದ್ಯಾಂತ ಸಂಚಲನ ಮೂಡಿಸಿದ್ದ ನಕಲಿ ನೋಟ್ (Fake Note) ಮುದ್ರಣ ಮತ್ತು ಚಲಾವಣೆ ಪ್ರಕರಣದಲ್ಲಿ ಎನ್‍ಐಎ (NIA) ತಂಡ ಬಳ್ಳಾರಿ ಯುವಕ ಸೇರಿದಂತೆ ವಿವಿಧ ರಾಜ್ಯದ ನಾಲ್ವರನ್ನು ಬಂಧಿಸಿದೆ.

ಬಳ್ಳಾರಿಯಲ್ಲಿ (Ballari) ಬಂಧಿಸಲಾದ ಆರೋಪಿಯನ್ನು ಗೌತಮ ನಗರದ ಮಹೇಂದ್ರ (19) ಎಂದು ಗುರುತಿಸಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಉತ್ತರ ಪ್ರದೇಶದ ಮೂಲದ ಕಿಂಗ್‍ಪಿನ್‍ಗಳಾದ ರಾಹುಲ್ ತಾನಜಿ ಪಾಟೀಲ್, ಮಹಾರಾಷ್ಟ್ರದ ವಿವೇಕ್ ಠಾಕೂರ್, ಶಿವು ಪಾಟೀಲ್, ಬಿಹಾರದ ಶಶಿಭೂಷಣ್ ಎಂಬ ನಾಲ್ವರನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಗಲಾಟೆ – ಬೈಕ್ ಅಡ್ಡಗಟ್ಟಿ ಚಿಕ್ಕಪ್ಪನನ್ನೇ ಪೆಟ್ರೋಲ್ ಸುರಿದು ಸುಟ್ಟ ಮಗ

ಆರೋಪಿ ಮಹೇಂದ್ರನ ಮನೆಯಲ್ಲಿ 500 ರೂ. ಮುಖಬೆಲೆಯ ಅಚ್ಚಿನ ಮಾದರಿ ಮತ್ತು ಒಂದು ಮುದ್ರಣ ಯಂತ್ರವನ್ನು ಸೀಜ್ ಮಾಡಲಾಗಿದೆ. 10ನೇ ತರಗತಿಯವರೆಗೂ ಆಂಧ್ರದಲ್ಲಿ ವ್ಯಾಸಂಗ ಮಾಡಿದ್ದ ಮಹೇಂದ್ರ ಕಳೆದ ಎರಡು ವರ್ಷಗಳ ಹಿಂದೆ ಬಳ್ಳಾರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದ. ಯುವಕನ ಮನೆ ಪರಿಸ್ಥಿತಿ ಹಾಗೂ ಅಲ್ಲಿನ ವಾತಾವರಣ ನೋಡಿದರೆ ಯುವಕನಿಗೆ ಇಷ್ಟೊಂದು ದೊಡ್ಡ ಮಟ್ಟದ ಕಾಂಟ್ಯಾಕ್ಟ್ ಹೇಗೆ ಎಂಬುದು ಹಲವು ಶಂಕೆಗಳಿಗೆ ಕಾರಣವಾಗಿದೆ. ಆರೋಪಿ ಮಹೇಂದ್ರ ಕುಟುಂಬಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿದು ಬಂದಿದೆ.

ಆರೋಪಿ ಮಹೇಂದ್ರನ ತಂದೆ ರಾಮಣ್ಣ ಕಳೆದ ಎಂಟು ವರ್ಷದ ಹಿಂದೆಯೇ ಸಾವನ್ನಪ್ಪಿದ್ದು, ತಾಯಿ ರಾಜೇಶ್ವರಿ ಮೂರು ಮಕ್ಕಳೊಂದಿಗೆ ಜನತಾ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಆರೋಪಿ ಕುಟುಂಬದ ಹಿರಿಯ ಮಗನಾಗಿದ್ದು, ಆತ ಒಮ್ಮೆಯೂ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ರಾಜ್ಯಗಳಿಗೆ ಹೋಗಿಲ್ಲ ಎನ್ನಲಾಗಿದೆ. ಆತನಿಗೆ ಪ್ರಮುಖ ಆರೋಪಿಗಳ ಪರಿಚಯ ಹೇಗೆ ಆಗಿದೆ ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ: 6 ವರ್ಷದ ಬಾಲಕನಿಗೆ 11 ಕಡೆ ಕಚ್ಚಿ ಗಾಯಗೊಳಿಸಿದ ನಾಯಿ

Share This Article