ಚಿಕ್ಕಮಗಳೂರು: ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಚಿವೆ ಹಾಗೂ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಹೃದಯಾಘಾತದಿಂದ ಸಾವು ಎಂದು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.
ವೀರೇಂದ್ರ ಭಗತ್ ಎಂಬ ವ್ಯಕ್ತಿಯ ಹೆಸರಿನಿಂದ ಈ ಸಂದೇಶ ಶೇರ್ ಆಗಿದ್ದು, ಈ ಕುರಿತು ಮೂಡಿಗೆರೆ ಕಾಂಗ್ರೆಸ್ ವಕ್ತಾರ ಅನಂತ್ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೀವಂತವಾಗಿರುವ ವ್ಯಕ್ತಿಯನ್ನು ಸತ್ತಿದ್ದಾರೆಂದು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.
Advertisement
Advertisement
ಇದರಿಂದ ಕುಟುಂಬಸ್ಥರು ಹಾಗೂ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ. ಕೂಡಲೇ ಫೇಸ್‍ಬುಕ್‍ನಲ್ಲಿ ಸಂದೇಶ ರವಾನೆ ಮಾಡಿದ ವ್ಯಕ್ತಿ ವೀರೇಂದ್ರ ಭಗತ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅನಂತ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರೋ ಮೂಡಿಗೆರೆ ಪೊಲೀಸರು ವೀರೇಂದ್ರ ಭಗತ್ ಬಗ್ಗೆ ತನಿಖೆ ನಡೆಸಿ, ಆತನ ಫೇಸ್‍ಬುಕ್ ಖಾತೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.
Advertisement
ಚುನಾವಣೆ ಹೊತ್ತಲ್ಲಿ ಕಾರ್ಯಕರ್ತರು ತಮ್ಮ ವಿರೋಧ ಪಕ್ಷದ ಅಭ್ಯರ್ಥಿಗಳ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿ, ತಮ್ಮ ಅಭ್ಯರ್ಥಿಗಳನ್ನ ಹಾಡಿ ಹೊಗಳೋದು ಮಾಮೂಲಿ. ಆದರೆ ಓರ್ವ ಬದುಕಿರುವ ವ್ಯಕ್ತಿಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಾಯಿಸುವ ಮಟ್ಟಕ್ಕೆ ಆಧುನಿಕ ಸಮಾಜ ಬೆಳೆದು, ಸಮಾಜ ತಂತ್ರಜ್ಞಾನವನ್ನ ಹೇಗೆಲ್ಲಾ ಬಳಕೆ ಮಾಡಿಕೊಳ್ತಿದೆ ಎಂದು ಎಂದು ಮೋಟಮ್ಮ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.