ಬೆಂಗಳೂರು: ಪತ್ರಕರ್ತರು ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಡಲಾಗಿದ್ದು, ಪಬ್ಲಿಕ್ ಟಿವಿಯ(PUBLiC TV) ಮುಖ್ಯಸ್ಥರಾದ ಎಚ್ ಆರ್ ರಂಗನಾಥ್(HR Ranganath) ಅವರು ದೂರು ನೀಡಿದ್ದಾರೆ.
ಪತ್ರಕರ್ತರು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಪಟ್ಟಿ ಮಾಡಿ ಹೆಚ್.ಆರ್.ರಂಗನಾಥ್ ಅವರ ಹೆಸರನ್ನು ಹಾಕಿ ಆರೋಪ ಮಾಡಲಾಗಿದೆ. ಹಕ್ಕಿಗೂಡು ಪತ್ರಿಕೆಯ ಸಂಪಾದಕ ನರೇಂದ್ರ ತೂದಳ್ಳಿ ಎಂಬ ಹೆಸರಿನಲ್ಲಿ ಪತ್ರ ಹರಿಬಿಟ್ಟು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ಆಧಾರ ರಹಿತ ಆರೋಪ ಮಾಡಿ ವಾಟ್ಸಪ್(whatsapp) ಮತ್ತು ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಮಾಡಲಾಗುತ್ತಿತ್ತು. ಇದನ್ನೂ ಓದಿ: ಮೆಡಿಕಲ್ ಶಿಕ್ಷಣ ಲಾಭಗಳಿಸುವ ವ್ಯವಹಾರವಲ್ಲ – ಬೋಧನಾ ಶುಲ್ಕ ಕೈಗೆಟುಕುವಂತಿರಬೇಕು ಎಂದ ಸುಪ್ರೀಂ
Advertisement
Advertisement
ಹೀಗಾಗಿ ಪತ್ರ ಬರೆದವರು ಯಾರು? ವಾಟ್ಸಪ್ ಗ್ರೂಪ್‌ನಲ್ಲಿ ವೈರಲ್ ಮಾಡಿದ್ದು ಯಾರು? ಆಧಾರರಹಿತ ಸುದ್ದಿಯನ್ನು ಹಬ್ಬಿಸಿ ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಕಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ. ಯಶವಂತಪುರ(Yeshwanthpur) ಸೈಬರ್ ಕ್ರೈಂ ಪೊಲೀಸ್ ಠಾಣೆಗೆ(Cyber Crime Police Station) ದೂರು ನೀಡಲಾಗಿದ್ದು, ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.