ನವದೆಹಲಿ: ಪ್ರಮುಖ ಸುದ್ದಿವಾಹಿನಿಗಳ ಲೋಗೋ ಬಳಸಿ ಪ್ರಧಾನಿ ನರೇಂದ್ರ ಮೋದಿ (Narendra Modi) , ಸಿಜೆಐ ಡಿ.ವೈ ಚಂದ್ರಚೂಡ್ (DY Chandrachud) ಸೇರಿದಂತೆ ಪ್ರಮುಖ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ಒಟ್ಟು 33 ಲಕ್ಷ ಚಂದಾದಾರರನ್ನು ಹೊಂದಿದ್ದ 3 ಯೂಟ್ಯೂಬ್ (Youtube) ಚಾನೆಲ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Advertisement
ಸುಳ್ಳು ಸುದ್ದಿಗಳನ್ನು (Fake News) ಹರಡುತ್ತಿದ್ದ `ನ್ಯೂಸ್ ಹೆಡ್‌ಲೈನ್ಸ್, ಆಜ್ ತಕ್ ಲೈವ್ ಹಾಗೂ ಸರ್ಕಾರಿ ಅಪ್‌ಡೇಟ್’ ಹೆಸರಿನ ಯೂಟ್ಯೂಬ್ ಚಾನೆಲ್‌ಗಳನ್ನು ಪತ್ತೆಹಚ್ಚಲಾಗಿದೆ. ಸರ್ಕಾರದ ನೋಡೆಲ್ ಏಜೆನ್ಸಿಯಾದ ಪ್ರೆಸ್ ಇನ್ಫರ್ಮೇಶನ್ ಬ್ಯೂರೋದ (PIB) ಸತ್ಯ ಪರಿಶೀಲನಾ ಘಟಕವು ಇದರ ತನಿಖೆ ನಡೆಸಿದೆ. ಇದನ್ನೂ ಓದಿ: ಈ ದೇಶಕ್ಕಾಗಿ BJP ನಾಯಕನ ಮನೆ ನಾಯಿಯೂ ಸತ್ತಿಲ್ಲ – ಕೋಲಾಹಲ ಎಬ್ಬಿಸಿದ ಖರ್ಗೆ ಹೇಳಿಕೆ
Advertisement
YouTube channel “आज तक LIVE” is another den of #FakeNews. With over 65,000 subscribers, the YouTube channel spreads false claims about the death of various persons and misinformation about Government decisions. Here’s a thread by @PIBFactCheck busting some of its claims???? pic.twitter.com/91fyeToq5h
— PIB Fact Check (@PIBFactCheck) December 20, 2022
Advertisement
ಈ ಘಟಕವು 40ಕ್ಕೂ ಹೆಚ್ಚು ಫ್ಯಾಕ್ಟ್‌ಚೆಕ್‌ಗಳನ್ನು ನಡೆಸಿದ್ದು, ಪ್ರಧಾನಿ ಮೋದಿ, ಸಿಜೆಐ, ಸುಪ್ರೀಂ ಕೋರ್ಟ್ (Supreme Court), ಚುನಾವಣಾ ಆಯೋಗ ಹಾಗೂ ಇವಿಎಂ ಮತದಾನ ವ್ಯವಸ್ಥೆಯ ಬಗ್ಗೆ ಅನೇಕ ತಪ್ಪು ಮಾಹಿತಿ ಪ್ರಸಾರ ಮಾಡಿರುವುದನ್ನು ಕಂಡುಹಿಡಿದಿದೆ. 30 ಕೋಟಿಗೂ ಅಧಿಕ ಮಂದಿ ಹೆಚ್ಚು ಬಾರಿ ಈ ವೀಡಿಯೋಗಳನ್ನ ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಈ ಯೂಟ್ಯೂಬ್ ಚಾನೆಲ್‌ಗಳು ಪ್ರಮುಖ ಸುದ್ದಿ ವಾಹಿನಿಯ ಲೋಗೋ ಹಾಗೂ ಸುದ್ದಿ ನಿರೂಪಕರ ಚಿತ್ರಗಳನ್ನು ಬಳಸಿಕೊಂಡಿದ್ದವು. ಈ ಮೂಲಕ ತಮ್ಮ ವೀಕ್ಷಕರಿಗೆ ಸುದ್ದಿ ಅಧಿಕೃತ ಎಂದು ನಂಬುವಂತೆ ಮಾಡಿದ್ದವು. ತಪ್ಪು ಮಾಹಿತಿಯನ್ನು ಪ್ರಸಾರ ಮಾಡುವ ಮೂಲಕ ಹಣ ಗಳಿಸುತ್ತಿದ್ದವು ಎಂದು ಪಿಐಬಿ (ತನಿಖಾ ಘಟಕ) ಹೇಳಿದೆ.
Advertisement
A #YouTube channel ‘News Headlines’ with almost 10 lakh subscribers and 32 crore views has been found to be propagating #FakeNews about the Prime Minister, Supreme Court of India, Chief Justice of India, and the Election Commission of India pic.twitter.com/9qUR7xqBd9
— PIB Fact Check (@PIBFactCheck) December 20, 2022
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಳೆದ 1 ವರ್ಷದಲ್ಲಿ ತಪ್ಪು ಮಾಹಿತಿ ಪ್ರಸಾರದ ವಿರುದ್ಧ ಶಿಸ್ತುಕ್ರಮದ ಭಾಗವಾಗಿ 100ಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದೆ ಎಂದು ಹೇಳಿದೆ.