ಚೆನ್ನೈ: ತಮಿಳುನಾಡಿನಲ್ಲಿ (Tamilnadu) ನಡೆದ ನಕಲಿ ಎಸಿಸಿ ಶಿಬಿರದಲ್ಲಿ ಶಾಲಾ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹಲವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯ ತಂದೆ ಸಾವನ್ನಪ್ಪಿದ್ದಾರೆ.
ಗುರುವಾರ ರಾತ್ರಿ ದ್ವಿಚಕ್ರ ವಾಹನದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಅಶೋಕ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: Maharashtra | ಪುಣೆಯಲ್ಲಿ ಖಾಸಗಿ ಹೆಲಿಕಾಪ್ಟರ್ ಪತನ – ನಾಲ್ವರ ಪೈಕಿ ಮೂವರ ಸ್ಥಿತಿ ಗಂಭೀರ
8ನೇ ತರಗತಿಯ ಬಾಲಕಿ ಸೇರಿದಂತೆ 12 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದ ಮೃತ ಆರೋಪಿ ಶಿವರಾಮನ್ ಕೌಟುಂಬಿಕ ಸಮಸ್ಯೆಗಳಿಂದಾಗಿ ಬಂಧನಕ್ಕೂ ಮುನ್ನ ಇಲಿ ಪಾಷಾಣ ಸೇವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕೃಷ್ಣಗಿರಿಯಿಂದ ಸೇಲಂಗೆ ಸ್ಥಳಾಂತರಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗಿದೇ ಸೇಲಂನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಈಗಾಗಲೇ ಘಟನೆಯಲ್ಲಿ ಭಾಗಿಯಾಗಿದ್ದ ಖಾಸಗಿ ಶಾಲೆಯ ಇಬ್ಬರು ಶಿಕ್ಷಕರು, ಪ್ರಾಂಶುಪಾಲರು ಮತ್ತು ಅತಿಥಿಶಿಕ್ಷಕ ಸೇರಿದಂತೆ 11 ಜನರನ್ನು ಪೋಕ್ಸೊ (POCSO) ಕಾಯ್ದೆಯಡಿ ಬಂಧಿಸಲಾಗಿದೆ.
ಶಾಲೆಯ ಆವರಣದಲ್ಲಿ ನಡೆದ ನಕಲಿ ಎನ್‌ಸಿಸಿ ಶಿಬಿರವು ಶಾಲೆಗೆ ಎನ್‌ಸಿಸಿ ಘಟಕದ ಅರ್ಹತೆ ನೀಡುತ್ತದೆ ಎಂದು ಹೇಳಿಕೊಂಡಿತ್ತು. ಆದ್ರೆ ಈ ಗುಂಪಿನ ಬಗ್ಗೆ ಶಾಲೆಯು ಪರಿಶೀಲನೆ ನಡೆಸಿರಲಿಲ್ಲ ಹಾಗೂ ಶಿಬಿರದ ಮೇಲ್ವಿಚಾರಣೆಗೆ ಯಾವುದೇ ಶಿಕ್ಷಕರನ್ನು ನೇಮಿಸಿರಲಿಲ್ಲ. ಜೊತೆಗೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಶಾಲೆಗೆ ತಿಳಿಸಿದ ಮೇಲೆಯೂ, ಆಡಳಿತ ಮಂಡಳಿಯವರು ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ ಮತ್ತು ನಡೆದಿರುವ ದೌರ್ಜನ್ಯದ ಬಗ್ಗೆ ಯಾರೂ ಗಂಭೀರವಾಗಿ ಪರಿಗಣಿಸಬೇಡಿ ಎಂದು ಶಾಲೆಯು ವಿದ್ಯಾರ್ಥಿಗಳಲ್ಲಿ ಕೇಳಿಕೊಂಡಿರುವುದಾಗಿ ಆರೋಪಿಸಲಾಗಿದೆ.ಇದನ್ನೂ ಓದಿ: ಮೈಸೂರಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಶಂಕೆ – ಬಾಳೆ ತೋಟದಲ್ಲಿ ಶವ ಪತ್ತೆ
ಸದ್ಯ ನಕಲಿ ಎನ್‌ಸಿಸಿ ತರಬೇತುದಾರರು ಇತರ ಶಾಲೆಗಳಲ್ಲಿಯೂ ಶಿಬಿರ ಆಯೋಜನೆ ಮೂಲಕ ಲೈಂಗಿಕ ಅಪರಾಧಗಳನ್ನು ಎಸಗಿದ್ದಾರೆಯೇ ಅನ್ನೋ ಬಗ್ಗೆ ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಇದನ್ನು ಹೊರತುಪಡಿಸಿ ಮತ್ತೊಂದು ತಂಡವು ಲೈಂಗಿಕ ಅಪರಾಧಗಳಿಗೆ ಕಾರಣವನ್ನು ಹುಡುಕುವಲ್ಲಿ ನಿರತವಾಗಿದೆ.
ಈ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ತನಿಖೆ ಚುರುಕುಗೊಳಿಸುವಂತೆ ಮತ್ತು 60 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇದೇ ರೀತಿ ಆರೋಪಿಗಳು ಬೇರೆ ಶಾಲೆಗಳಲ್ಲೂ ನಕಲಿ ಶಿಬಿರ ನಡೆಸಿದ್ದಾರಾ? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.