ಗಗನಸಖಿಯರಿಗಾಗಿ ನಕಲಿ ಐಡಿ ತೋರಿಸಿ ಪ್ರಯಾಣ

Public TV
1 Min Read
Fake Pilot

-ಪೈಲಟ್ ಡ್ರೆಸ್ ಧರಿಸಿ 15 ಬಾರಿ ಹಾರಾಟ

ನವದೆಹಲಿ: ನಕಲಿ ಗುರುತಿನ ಚೀಟಿ ತೋರಿಸಿ ವಿಮಾನಯಾನ ಮಾಡುತ್ತಿದ್ದ ವ್ಯಕ್ತಿಯನ್ನು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3ರಲ್ಲಿ ಬಂಧಿಸಲಾಗಿದೆ.

ವಸಂತ್ ಕುಂಜ್ ಸೆಕ್ಟರ್-ಸಿ ನಿವಾಸಿ ರಾಜನ್ (48) ಬಂಧಿತ ವ್ಯಕ್ತಿ. ಜರ್ಮನಿ ವಿಮಾನ ಸಂಸ್ಥೆಯ ನಕಲಿ ಐಡಿ ಬಳಸಿ ಈ ಹಿಂದೆ 15 ಬಾರಿ ಪ್ರಯಾಣ ಮಾಡಿದ್ದೇನೆ ಎಂದು ರಾಜನ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

air hostess 1

ಪ್ರಯಾಣಿಕರ ಸಾಲಿನಲ್ಲಿ ನಿಂತುಕೊಳ್ಳುವದನ್ನು ತಪ್ಪಿಸಿಕೊಳ್ಳಲು ಮತ್ತು ಪ್ರಯಾಣದ ಸಂದರ್ಭದಲ್ಲಿ ಗಗನಸಖಿಯರನ್ನು ತನ್ನತ್ತ ಸೆಳೆಯಲು ರಾಜನ್ ನಕಲಿ ಐಡಿ ಮತ್ತು ಪೈಲಟ್ ಡ್ರೆಸ್ ಧರಿಸುತ್ತಿದ್ದನು. ಪೈಲಟ್ ಸಮವಸ್ತ್ರ ಧರಿಸಿ ವಿಮಾನದಲ್ಲಿ ಪ್ರಯಾಣಿಕರನ್ನು ತನ್ನತ್ತ ಆಕರ್ಷಿಸಿ, ವಿಐಪಿ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದನು ಎಂದು ವರದಿಯಾಗಿದೆ.

ಸಿಐಎಸ್‍ಎಪ್ ಅಧಿಕಾರಿಗಳು ರಾಜನ್ ನನ್ನು ಬಂಧಿಸಿ ದೆಹಲಿ ಪೊಲೀಸರ ವಶಕ್ಕೆ ನೀಡಿದ್ದಾರೆ. ವಿಮಾನಯಾನಕ್ಕೆ ಸಂಬಂಧಿಸಿದ ಪ್ರಕರಣವಾಗಿದ್ದರಿಂದ ಐಬಿ ಮತ್ತು ವಿಶೇಷ ತನಿಖಾ ತಂಡ ಬಂಧಿತನ ವಿಚಾರಣೆ ನಡೆಸುತ್ತಿದೆ.

IGI Airport

ನಿವೃತ್ತ ಸೇನಾಧಿಕಾರಿಯ ಪುತ್ರನೆಂದು ಹೇಳಿಕೊಂಡಿರುವ ರಾಜನ್, ಲುಫ್ಥಾನ್ಸ ಐಡಿ ಕಾರ್ಡ್ ಬ್ಯಾಂಕಾಕ್ ನಿಂದ ಖರೀದಿ ಮಾಡಿದ್ದೇನೆ ಎಂದು ರಾಜನ್ ಹೇಳಿದ್ದಾನೆ. ಪ್ರಯಾಣದಲ್ಲಿ ವಿಶೇಷ ಸೌಲಭ್ಯ ಪಡೆದುಕೊಳ್ಳುವ ಉದ್ದೇಶದಿಂದ ನಕಲಿ ಐಡಿ ಕಾರ್ಡ್ ಬಳಕೆ ಮಾಡಿರೋದು ಬೆಳಕಿಗೆ ಬಂದಿದೆ. ಬಂಧಿತ ರಾಜನ್ ಸೋಶಿಯಲ್ ಮೀಡಿಯಾದಲ್ಲಿ ಪೈಲಟ್ ಸಮವಸ್ತ್ರ ಧರಿಸಿರುವ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾನೆ.

ಬಂಧಿತನಿಂದ ವಶಪಡಿಸಿಕೊಂಡಿರುವ ಮೊಬೈಲ್ ಮತ್ತು ಲ್ಯಾಪ್‍ಟಾಪ್ ಪರಿಶೀಲನೆ ನಡೆಸಲಾಗುತ್ತಿದೆ. ಲುಫ್ಥಾಂಸ್ ವಿಮಾನ ಸಂಸ್ಥೆ ನೀಡಿದ ದೂರಿನ ಅನ್ವಯ ರಾಜನ್ ನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *