ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ವಡಗೋಲಾ ಗ್ರಾಮದಲ್ಲಿ ನಕಲಿ ದಾಖಲೆ ತಂದು ಉಳುಮೆ ಮಾಡುತ್ತಿರುವ ಜಮೀನು ನಮ್ಮದು ಎಂದುವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
Advertisement
ವಡಗೋಲಾ ಗ್ರಾಮದ 7 ಎಕರೆ 10 ಗುಂಟೆ ಜಮೀನನ್ನು ಅಣ್ಣಪ್ಪ ಖೋತ ಎಂಬವರು ಕಳೆದ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ ಏಕಾಏಕಿ ವಿನೋದ್ ರಾವಸಾಬ್ ಹಳಕರ್ ಎಂಬವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ನಾನು ಖರೀದಿ ಮಾಡಿದ್ದು ಎಂದು ಹೇಳಿ ಗೇಣಿ ಹಣ ಕೊಡಿ ಎಂದು ಅವಾಜ್ ಹಾಕಿದ್ದರು.
Advertisement
ಈ ಸಂದರ್ಭದಲ್ಲಿ ಅಣ್ಣಪ್ಪ ಮತ್ತು ವಿನೋದ್ ಇಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ಸದಲಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ವಿನೋದ್ ಹಾಗು 10 ಜನರು ಸೇರಿ ಸೃಷ್ಟಿ ಮಾಡಿರುವ ದಾಖಲೆಗಳು ನಕಲಿ ಎಂದು ಪತ್ತೆಯಾಗಿದೆ.
Advertisement
ಮೂಲತಃ ಜಮೀನು ಬಾಳಾ ಹರಿ ಟೊಣ್ಣೆ ಎಂಬುವುರಿಗೆ ಸೇರಿದ್ದಾಗಿದೆ. ಆದರೆ ಹಲವು ವರ್ಷಗಳಿಂದ ಕಾಣೆಯಾದ ಬಾಳಾ ಅವರ ಜಮೀನಿನಲ್ಲಿ ಅಣ್ಣಪ್ಪ ಕೃಷಿ ಮಾಡಿಕೊಂಡು ಬಂದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಿನೋದ್ ಕಬ್ಜಾ ಪಡೆದುಕೊಳ್ಳುವ ಸಂಚು ರೂಪಿಸಿದ್ದು ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ನ್ಯಾಯಾಂಗ ಬಂಧನದಲ್ಲಿ ಇದ್ದು 6 ಜನ ತಲೆ ಮರೆಸಿಕೊಂಡಿದ್ದಾರೆ.
Advertisement