– ಹಣ ನೀಡುವಂತೆ ಜೋಡಿಗೆ ಬೆದರಿಕೆ ಹಾಕಿದ್ದ ತಂಡ
ವಿಜಯಪುರ: ಬೆದಿರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಮೂವರು ನಕಲಿ ಪತ್ರಕರ್ತರ ಹೆಡೆಮುರಿಕಟ್ಟುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂವರು ಆರೋಪಿಗಳಾದ ಪ್ರಕಾಶ್ ಕೋಳಿ, ಝಾಕೀರ್ ಅಮೀನಗಡ, ದಶರಥ ಸೊನ್ನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ನಕಲಿ ಪತ್ರಕರ್ತರಿಂದ 24,000 ರೂ. ನಗದು, 1 ಕಾರು, ವಿಡಿಯೋ ಕ್ಯಾಮೇರಾ, ಲ್ಯಾಪ್‍ಟಾಪ್, ಸಿಪಿಯು, 8 ಮೊಬೈಲ್, ಐಡಿ ಕಾರ್ಡ್, ನಾನಾ ಬ್ಯಾಂಕುಗಳ ಎಟಿಎಂ ಕಾರ್ಡುಗಳನ್ನು ಪೊಲೀಸರು ವಶಪಡಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
Advertisement
ವಿಜಯಪುರದ ಕೀರ್ತಿ ನಗರದಲ್ಲಿ ತನ್ನ ಗೆಳತಿಯೊಂದಿಗೆ ಯುವಕ ಮನೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗ ನಾಲ್ವರು ನಕಲಿ ಪತ್ರಕರ್ತರು ಏಕಾಏಕಿ ಮನೆಗೆ ನುಗ್ಗಿದ್ದಾರೆ. ಮನೆಗೆ ನುಗ್ಗುತ್ತಿದ್ದಂತೆ ತಾವು ಪೊಲೀಸ್ ಎಂದು ಹೇಳಿಕೊಂಡಿದ್ದಾರೆ.
Advertisement
Advertisement
ನೀವು ವೇಶ್ಯಾವಾಟಿಕೆ ಮಾಡುತ್ತಿದ್ದೀರಿ ಎಂದು ಬೆದರಿಸಿ, ವಿಡಿಯೋ ಮಾಡಿದ್ದಾರೆ. ವಿಡಿಯೋ ಇಟ್ಟುಕೊಂಡು ಇಬ್ಬರನ್ನೂ ಬೆದರಿಸಿದ್ದಾರೆ. ಪ್ರಕರಣ ದಾಖಲಿಸಬಾರದೆಂದರೆ 1 ಲಕ್ಷ ರೂ. ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಈ ವಿಷಯ ಯಾರಿಗಾದರು ಹೇಳಿದರೆ ನಿಮ್ಮ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. ನಂತರ 60 ಸಾವಿರ ರೂ. ತಮ್ಮ ಎಸ್‍ಬಿಐ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
Advertisement
ನಂತರ ಸಂತ್ರಸ್ತರು ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕಾರ್ಯಚರಣೆ ನಡೆಸಿ, ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದ ಪೊಲೀಸರು ಎಂದು ಹೇಳಿಕೊಂಡಿದ್ದ ನಕಲಿ ಪತ್ರಕರ್ತರನ್ನು ಬಂಧಿಸಿದ್ದಾರೆ.