ಬೆಂಗಳೂರು: ಆರ್‌ಸಿಬಿ (RCB) ಕ್ರಿಕೆಟ್ ಅಭಿಮಾನಿಗಳಿಗೆ ಇಂದು ರಸದೌತಣ. ಫ್ಲೇಆಫ್ ಹಂತಕ್ಕೆ ಆರ್‌ಸಿಬಿ ಹೋಗಬೇಕಾದರೆ ಸಿಎಸ್‌ಕೆಯನ್ನು (CSK) ಟೂರ್ನಿಯಿಂದ ಹೊರಕ್ಕೆ ಹಾಕಲು ಇರುವ ಕೊನೆಯ ಅವಕಾಶ. ಚಿನ್ನಸ್ವಾಮಿಯಲ್ಲಿ (Chinnaswamy Stadium) ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ (Ticket) ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್ ನೀಡುತ್ತೇವೆ ಎಂದು ಹೇಳಿ ಸೈಬರ್ ಕಳ್ಳರು ಅಭಿಮಾನಿಗಳಿಗೆ ಮೋಸ ಮಾಡುತ್ತಿದ್ದಾರೆ.
ಇವತ್ತಿನ ಪಂದ್ಯದ ಮೇಲೆ ಎಲ್ಲರ ಚಿತ್ತವಿದ್ದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಖದೀಮರು ಆನ್‌ಲೈನ್‌ನಲ್ಲಿ ಮ್ಯಾಚ್ ಟಿಕೆಟ್ ಬೇಕಾದರೆ ಲಿಂಕ್ ಓಪನ್ ಮಾಡಿ ಟಿಕೆಟ್ ಬುಕ್ ಮಾಡಿಕೊಳ್ಳಿ ಎಂಬ ಪೋಸ್ಟ್ ಕಳುಹಿಸುತ್ತಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್ ಹುದ್ದೆಗೆ ಗೌತಮ್ ಗಂಭೀರ್ ಹೆಸರು ಪ್ರಸ್ತಾಪ!
Advertisement
Advertisement
Advertisement
ನಕಲಿ ಲಿಂಕ್‌ನಿಂದ ಟಿಕೆಟ್ ಬುಕ್ ಮಾಡಿಕೊಂಡವರು ಹಣವನ್ನ ಕಳೆದುಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗೆ ಬಂದ ಲಿಂಕ್‌ಮೇಲೆ ಕ್ಲಿಕ್ ಮಾಡಿ 3 ಟಿಕೆಟ್‌ಗೆ 3,600 ರೂ. ಪಾವತಿ ಮಾಡಿದ್ದ ಆಕಾಶ್ ಕುಮಾರ್ ಈಗ ಸೈಬರ್ ಠಾಣೆಗೆ ದೂರು ನೀಡಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫುಡ್ ಟೆಸ್ಟ್‌ಗೆ ಮುಂದಾದ ಸರ್ಕಾರ
Advertisement
ಸೈಬರ್ ಖದೀಮರು ರಿಯಲ್ ವೆಬ್‌ಸೈಟ್‌ಗೆ ಹೇಗೆ ಇದೆಯೇ ಅದೇ ರೀತಿ ಸೈಟ್ ಸೃಷ್ಟಿ ಮಾಡಿ ಟಿಕೆಟ್ ಬುಕ್ ಮಾಡುವವರ ಬಳಿ ಹಣ ಪೀಕುತ್ತಿದ್ದಾರೆ. ಅದೆಷ್ಟೋ ಜನ ಮ್ಯಾಚ್ ನೋಡುವ ಆತುರದಲ್ಲಿ ಹಣ ಕಳೆದುಕೊಂಡಿದ್ದಾರೆ. ಹೀಗೆ ಯಾರು ವಂಚನೆಗೊಳಗಾಗಬೇಡಿ ಆಕಾಶ್ ಮನವಿ ಮಾಡಿದ್ದಾರೆ.