ಚಿತ್ರದುರ್ಗ: ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಖೋಟಾ ನೋಟು ನೀಡುವ ಮೂಲಕ ವಂಚಿಸಿ ನಾಪತ್ತೆಯಾಗಿದ್ದ ಚಿತ್ರದುರ್ಗ ನಗರಸಭೆ ಸದಸ್ಯ ಚಂದ್ರಶೇಖರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ
ಚಂದ್ರಶೇಖರನ ಪತ್ನಿ ದೇವಿಕಾ, ಬಾಬು ಹಾಗೂ ಅರುಣ್ ಬಂಧಿತರು. ಈತ ಹಲವು ವರ್ಷಗಳಿಂದ ಖೋಟಾ ನೋಟು ದಂಧೆ ನಡೆಸುತ್ತಾ ಹಲವರನ್ನು ವಂಚಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಬಿಂದಾಸ್ ಆಗಿದ್ದನು. ವಾರ್ಡ್ ನಂ.4ರ JDS ನಗರಸಭೆ ಸದಸ್ಯ ಚಂದ್ರಶೇಖರ್ ಅಲಿಯಾಸ್ ಟೋಲಿ ಚಂದ್ರನನ್ನು ಚಿತ್ರದುರ್ಗ ಎಸ್‍ಪಿ ಜಿ.ರಾಧಿಕಾ ನೇತೃತ್ವದಲ್ಲಿ ಬಂಧಿಸಲಾಗಿದೆ.
Advertisement
Advertisement
ಡಿಸೆಂಬರ್ 6 ರಂದು 6ಲಕ್ಷ ನಗದು ಪಡೆದು 18 ಲಕ್ಷ ನೀಡುವುದಾಗಿ ನಂಬಿಸಿ ವಂಚಿಸಿದ್ದಾರೆಂಬ ಆರೋಪ ಕೇಳಿಬಂದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಚಿತ್ರದುರ್ಗ ಪೊಲೀಸರು ಆಂದ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ.ಇದನ್ನೂ ಓದಿ: ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್
Advertisement
Advertisement
ದೊಡ್ಡಬಳ್ಳಾಪುರದ ನಾಗರಾಜ್ ಅವರಿಂದ 6ಲಕ್ಷ ಅಸಲಿ ಹಣ ಪಡೆದು 18ಲಕ್ಷ ಹಣವಿದೆ ಎಂದು ಬ್ಯಾಗ್ ನೀಡಿ ಮೋಸ ಮಾಡಲಾಗಿತ್ತು. ಹೀಗಾಗಿ ಪ್ರಕರಣ ಧಾಖಲಿಸಿಕೊಂಡ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು, ಚಂದ್ರಶೇಖರ್ ಮತ್ತಿತರರ ವಿರುದ್ಧ ಕೇಸ್ ದಾಖಲಿಸಿಕೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸಿಪಿಐ ಶಂಖರಪ್ಪ ಸೇರಿದಂತೆ ಪ್ರಕರಣ ಭೇದಿಸಿದ ಎಲ್ಲಾ ಸಿಬ್ಬಂದಿ ಎಸ್‍ಪಿ ರಾಧಿಕಾ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ