ಚೆನ್ನೈ: ತಾನೊಬ್ಬ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ನಕಲಿ ಬಿಸಿನೆಸ್ ಕಾರ್ಡ್ ನೀಡಿದ್ದ ಆರೋಪಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿರುಗಂಬಾಕ್ಕಂ ನಿವಾಸಿ ಸುಬಾಷ್(27) ತಾನೊಬ್ಬ ಸರ್ಕಾರಿ ಜಂಟಿ ಕಾರ್ಯದರ್ಶಿಯಾಗಿದ್ದು, ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದ.
ಜನವರಿ 1 ರಂದು ಸುಬಾಷ್ ತನ್ನನ್ನು ನಾಲ್ವರು ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸುತ್ತಿದ್ದಾರೆ ಎಂಬುದಾಗಿ ಪೊಲೀಸರಿಗೆ ಫೋನ್ ಕರೆಯಲ್ಲಿ ದೂರು ನೀಡಿದ್ದ. ತಾನೊಬ್ಬ ಐಎಎಸ್ ಅಧಿಕಾರಿ, ನನಗೆ ರಕ್ಷಣೆ ಬೇಕು ಎಂಬುದಾಗಿ ಹೇಳಿಕೊಂಡಿದ್ದ ಸುಬಾಷ್‌ನ ಮಾತು ನಂಬಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಹಿಂಬಾಲಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದರು. ಇದನ್ನೂ ಓದಿ: ಅಕ್ರಮ ಆಸ್ತಿ ಖರೀದಿಸಿಲ್ಲ – 3 ಕೋಟಿ ಮಾನನಷ್ಟ ಕೇಸ್ ಹಾಕ್ತೀನಿ ಎಂದ ಚನ್ನಣ್ಣನವರ್
ನಂತರ ಪೊಲೀಸರು ಸುಬಾಷ್ ಹೇಳಿದ ಇಲಾಖೆಗೆ ಭೇಟಿ ನೀಡಿ ಸಂಪರ್ಕಿಸಲು ಮುಂದಾದಾಗ ಅಂತಹ ಯಾವುದೇ ಅಧಿಕಾರಿ ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯೊಂದಿಗೆ ಕೆಲಸ ಮಾಡುತ್ತಿಲ್ಲ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರಕ್ಕೆ ಕಳುಹಿಸಿ – ಕ್ರಿಮಿನಾಶಕ ಸೇವಿಸಿದ ಕೈದಿಗಳು
ಬಳಿಕ ಪೊಲೀಸರು ಸುಬಾಷ್‌ನ ಹುಡುಕಾಟದಲ್ಲಿದ್ದು, ಶನಿವಾರ ಆರೋಪಿ ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದಾನೆ.