ಬೆಂಗಳೂರು: ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದಯಾನಂದ್ (ADGP Dayananda) ಹೆಸರಲ್ಲಿ ಕಿಡಿಗೇಡಿಗಳು ನಕಲಿ ಫೇಸ್‌ಬುಕ್ (Facebook) ಖಾತೆಯನ್ನು ತೆರೆದಿದ್ದಾರೆ.
ಈ ಹಿಂದೆ ಮೂರು ಬಾರಿ ನಕಲಿ ಅಕೌಂಟ್ (Fake Account) ಓಪನ್ ಆಗಿರುವ ಬಗ್ಗೆ ದಯಾನಂದ್ ಸೈಬರ್ ಪೊಲೀಸರ (Cyber Crime Police) ಗಮನಕ್ಕೆ ತಂದಿದ್ದರು. ಆದರೂ ಸೈಬರ್ ಖದೀಮರು ಮುಂದುವರೆದು ಸೂಟ್ ಹಾಕಿರುವ ಹಾಗೂ ಮಕ್ಕಳ ಜೊತೆ ಇರುವ ಪೋಟೋ ಬಳಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಸದ್ಯ ಕಾರಾಗೃಹ ಎಡಿಜಿಪಿಯಾಗಿ ದಯಾನಂದ್ ಕರ್ತವ್ಯ ನಿರ್ವಹಿಸುತ್ತಿದ್ದು ಇತ್ತೀಚೆಗೆ ಜೈಲಿನ ಒಳಗಡೆ ಇರುವ ವಿಡಿಯೋ ವೈರಲ್ ಆಗಿತ್ತು. ದಯಾನಂದ್ ಅವರಿಗೆ ಕೆಟ್ಟ ಹೆಸರು ತರಲು ವಿಡಿಯೋ ವೈರಲ್ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬಂದಿತ್ತು. ಈಗ ನಕಲಿ ಎಫ್‌ಬಿ ಖಾತೆ ತೆರೆದುಹಲವು ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ ಬಗ್ಗೆ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

