– ಮಹಿಳೆಯರ ಹಕ್ಕು ರಕ್ಷಿಸಿ, ಗೌರವ ಕಾಪಾಡಬೇಕಾದ ಮಹಿಳಾ ಆಯೋಗದಿಂದಲೇ ಉದ್ಧಟತನ
– ಪಬ್ಲಿಕ್ ಟಿವಿ ಲೈವ್ ನಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯ ಉದ್ಧಟತನ
ಬೆಂಗಳೂರು: ರಾಯಚೂರು ಗ್ರಾಮಾಂತರ ಬಿಜೆಪಿ ಶಾಸಕ ತಿಪ್ಪರಾಜು ಹವಾಲ್ದಾರ್ ಜೊತೆ ಸಂಬಂಧ ಕಲ್ಪಿಸಿ ಮಹಿಳಾ ಪಿಎಸ್‍ಐ ಅವರ ಮಾನವನ್ನು ಮಹಿಳಾ ಆಯೋಗ ಹರಾಜು ಹಾಕಿದೆ.
Advertisement
ಸ್ವತಃ ತಿಪ್ಪರಾಜು ಪತ್ನಿ ಸೌಮ್ಯ ಅವರು ನನ್ನ ಗಂಡ ಎರಡನೇ ಮದುವೆ ಆಗಿಲ್ಲ. ನಾನು ಯಾರಿಗೂ ದೂರು ನೀಡಿಲ್ಲ ಹೇಳಿಕೆ ನೀಡಿದ್ದರೂ ಮಹಿಳಾ ಆಯೋಗಕ್ಕೆ ಈ ವಿಚಾರದಲ್ಲಿ ಇಷ್ಟೊಂದು ಆಸಕ್ತಿ ಯಾಕೆ ಎನ್ನುವ ಪ್ರಶ್ನೆ ಈಗ ಎದ್ದಿದೆ.
Advertisement
ಶಾಸಕ ತಿಪ್ಪರಾಜು 2013 ರಿಂದಲೂ ಪಿಎಸ್‍ಐ ಬೇಬಿ ವಾಲಿಕಾರ್ ಜೊತೆ ಒಡನಾಟ ಹೊಂದಿದ್ದು, ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಈ ವಿಚಾರವಾಗಿ ಸೌಮ್ಯ ಹೆಸರಿನಲ್ಲಿ ಪತ್ರ ಬಂದ ಹಿನ್ನೆಲೆಯಲ್ಲಿ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿ ತನಿಖೆಗೆ ಆದೇಶ ನೀಡಿದೆ.
Advertisement
ಸೌಮ್ಯ ಅವರು ನಾನು ಯಾರಿಗೂ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರನ್ನು ಸಂಪರ್ಕಿಸಿತು. ಈ ವಿಚಾರದಲ್ಲಿ ಯಾಕೆ ಇಷ್ಟೊಂದು ಆಸಕ್ತಿ ಎಂದು ಪಬ್ಲಿಕ್ ಟಿವಿ ಪ್ರಶ್ನಿಸಿದ್ದಕ್ಕೆ, ನನಗೆ ಪತ್ರ ಬರೆಯಬೇಕು ಅಂತ ಏನಿಲ್ಲ, ಒಂದು ಫೋನ್ ಕರೆ ಮಾಡಿ ತಿಳಿಸಿದರೂ ನಾನು ದೂರು ತೆಗೆದುಕೊಳ್ಳುತ್ತೇನೆ. ಮೇ 6ರಂದು ಪತ್ರದ ಮೂಲಕ ದೂರು ಬಂದಿದೆ. ಆ ಪತ್ರದಲ್ಲಿ ಮೂರು ವಿಳಾಸ ಇತ್ತು. ಹೀಗಾಗಿ ವಿಳಾಸ ಪತ್ತೆಹಚ್ಚುವುದು ಕಷ್ಟ ಆಯ್ತು. ಪೋಸ್ಟ್ ನಲ್ಲಿ ದೂರು ಬಂದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ದೂರು ತೆಗೆದುಕೊಳ್ಳುವ ಅಧಿಕಾರ ಇದ್ದು, ಶಾಸಕರಿಗೆ ನೋಟಿಸ್ ನೀಡಿದ್ದೇನೆ ಎಂದು ಹೇಳಿದರು.
Advertisement
ಆದರೆ ಶಾಸಕರ ಪತ್ನಿ ನಾನು ಯಾರಿಗೂ ಯಾವುದೇ ದೂರು ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ನೀವು ವಿಳಾಸವನ್ನು ಪರಿಶೀಲನೆ ಮಾಡದೇ ಮಾಧ್ಯಮಗಳಿಗೆ ಪತ್ರವನ್ನು ಸೋರಿಕೆ ಮಾಡಿದ್ದು ತಪ್ಪಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ಇಲ್ಲ ಈ ರೀತಿ ನೀವು ಹೇಳಿ ದಾರಿ ತಪ್ಪಿಸುತ್ತಿದ್ದೀರಿ. ನನ್ನ ಮೇಲೆ ಗೂಬೆ ಕೂರಿಸಬೇಡಿ. ಇದರಲ್ಲಿ ನೀವು ರಾಜಕೀಯ ಮಾಡುತ್ತಿದ್ದೀರಿ. ಬೆಳಗ್ಗೆಯಿಂದ ನಾನು ನೋಡುತ್ತಿದ್ದೇನೆ. ಬೇರೆ ವಾಹಿನಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಪಬ್ಲಿಕ್ ಟಿವಿ ಚೆಲ್ಲಾಟವಾಡುತ್ತಿದೆ ಎಂದು ದೂರಿ ಇಯರ್ ಫೋನ್ ಬೀಸಾಕಿ ಅರ್ಧದಲ್ಲೇ ಲೈವ್ ಮಾತುಕತೆಯನ್ನು ನಾಗಲಕ್ಷ್ಮಿ ಬಾಯಿ ನಿಲ್ಲಿಸಿದರು.
ಮಹಿಳಾ ಆಯೋಗಕ್ಕೆ ಪಬ್ಲಿಕ್ ಪ್ರಶ್ನೆಗಳು
– ನಾನು ದೂರು ಕೊಟ್ಟಿಲ್ಲ ತಿಪ್ಪರಾಜು ಪತ್ನಿ ಹೇಳ್ತಿದ್ರೂ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಕೇಸ್ ದಾಖಲಿಸಿಕೊಂಡಿದ್ಯಾಕೆ..?
– ಮಹಿಳಾ ಆಯೋಗಕ್ಕೆ ನಾನು ಪತ್ರ ಬರೆದಿಲ್ಲ ಅಂತಾ ಬಹಿರಂಗವಾಗಿ ಹೇಳ್ತಿದ್ರೂ ಈ ಕೇಸ್‍ನಲ್ಲಿ ಆಯೋಗ ಮೂಗು ತೂರಿಸೋದು ಸರೀನಾ..?
– ಇಬ್ಬರು ಹೆಣ್ಣು ಮಕ್ಕಳ ಮಾನ ಕಾಪಾಡೋದು ಬಿಟ್ಟು ತೇಜೋವಧೆ ಮಾಡ್ತಿದ್ಯಾ ಮಹಿಳಾ ಆಯೋಗ?
– ಈ ಕೇಸ್ ಬಗ್ಗೆ ಸಂಬಂಧ ಪಟ್ಟವರಿಗೆ ತಿಳಿಸದೇ ಮಹಿಳಾ ಆಯೋಗ ಮಾಧ್ಯಮಗಳಿಗೆ ಸುದ್ಧಿ ಲೀಕ್ ಮಾಡಿದ್ಯಾಕೆ..?
– ಶಾಸಕ ತಿಪ್ಪರಾಜು ಅವರನ್ನು ರಾಜಕೀಯವಾಗಿ ಮುಗಿಸಲು ನಡೆದಿದ್ಯಾ ಷಡ್ಯಂತ್ರ..?
ಪಬ್ಲಿಕ್ ಟಿವಿ ಗೆ ಪ್ರತಿಕ್ರಿಯೆ ನೀಡಿದ ಶಾಸಕ ತಿಪ್ಪರಾಜು ಹವಾಲ್ದಾರ್, ಇದೆಲ್ಲಾ ಸುಳ್ಳು. ಈ ಆರೋಪದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ನನ್ನ ಪತ್ನಿಯ ಜೊತೆಗೆ ಇದ್ದೇನೆ. ನನ್ನ ಹೆಂಡತಿ ಯಾವ ಆಯೋಗಕ್ಕೂ ದೂರು ನೀಡಿಲ್ಲ. ನನ್ನ ತೇಜೋವಧೆ ಬಗ್ಗೆ ನನ್ನ ಪತ್ನಿ ಜೊತೆ ದೂರು ನೀಡ್ತೇನೆ ಅಂದ್ರು.
ತಿಪ್ಪರಾಜು ಅವರ ಹೆಂಡತಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲಾ ಶುದ್ಧ ಸುಳ್ಳು. ನಾನು ನನ್ನ ಗಂಡನ ಜೊತೆಯೇ ಇದ್ದೇನೆ. ನನ್ನ ಹೆಸರಿನಲ್ಲಿ ಸುಳ್ಳು ದೂರು ನೀಡಿದ್ದಾರೆ. ನಾನು ಎಲ್ಲಿಯೂ ದೂರು ನೀಡಿಲ್ಲ. ನಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ನಡೀತಿದೆ. ನನ್ನ ಗಂಡನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸುಳ್ಳು ದೂರು ನೀಡಿದವರ ವಿರುದ್ಧ ನನ್ನ ಗಂಡನ ಜೊತೆ ಹೋರಾಡುತ್ತೇನೆ. ವಾಲಿಕಾರ್‍ಗೂ ನನ್ನ ಪತಿಗೂ ಯಾವುದೇ ಸಂಬಂಧವಿಲ್ಲ. ಕುತಂತ್ರಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದಿದ್ದಾರೆ.
ಪಿಎಸ್‍ಐ ವಾಲೇಕರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಹಿಳಾ ಆಯೋಗದ ವಿರುದ್ಧ ಕಿಡಿ ಕಾರಿದ್ದಾರೆ. ಇದೆಲ್ಲಾ ಸುಳ್ಳು. ನನ್ನ ತೇಜೋವಧೆ ಮಾಡಲಾಗ್ತಿದೆ. ಮಹಿಳಾ ಆಯೋಗದ ಅಧ್ಯೆಕ್ಷೆ ಒಬ್ಬ ಮಹಿಳೆಯಾಗಿ ಈ ರೀತಿ ಸುದ್ದಿ ಹಬ್ಬಿಸಿರೋದು ಖಂಡನೀಯ. ಈ ಬಗ್ಗೆ ನನಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಪಡೆಯಬಹುದಾಗಿತ್ತು. ನನ್ನ ತೇಜೋವಧೆ ಮಾಡಿದವರ ವಿರುದ್ಧ ದೂರು ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.
https://www.youtube.com/watch?v=Xo50AhQfHXU