ಕೋಲಾರ: ಜಿಲ್ಲೆಯ ಗಡಿ ಭಾಗದಲ್ಲಿ ನಕಲಿ ವೈದ್ಯರ (Doctor) ಹಾವಳಿ ಹೆಚ್ಚಾಗಿದೆ. 10ನೇ ತರಗತಿ ಕೂಡ ಪಾಸು ಮಾಡದ ಇವರು ರೋಗಿಗಳ (Patient) ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ.
ಮುಳಬಾಗಿಲು ತಾಲೂಕಿನ ತಾಯಲೂರು, ನಂಗಲಿ ಗ್ರಾಮದಲ್ಲಿ ನಕಲಿ ಕ್ಲಿನಿಕ್‍ಗಳು (Clinic) ಹೆಚ್ಚಿದೆ. ಕೈಯಲ್ಲಿ ಸ್ಟೆತಸ್ಕೋಪ್ ಇಟ್ಟುಕೊಂಡು, ರೋಗಿಗಳು ಯಾವುದೇ ರೋಗ ಎಂದು ಬಂದರೂ ಸ್ಟಿರಾಯ್ಡ್ ಇಂಜೆಕ್ಷನ್ ಹಾಕಿ, ಎಲ್ಲಾ ವಾಸಿಯಾಗುತ್ತೆ ಅಂತಾ ಕಡಿಮೆ ಹಣ (Money) ಪಡೆದು ಚಿಕಿತ್ಸೆ ನೀಡುತ್ತಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಮಕ್ಕಳ ಕಳ್ಳರೆಂದು ಮಹಿಳೆಯರಿಗೆ ಥಳಿತ
Advertisement
Advertisement
ಇಷ್ಟು ಮಾತ್ರವಲ್ಲದೆ ತೀರ ಜ್ವರ ಇದ್ದರೆ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಕೂಡ ಮಾಡಿ ರಿಪೋರ್ಟ್ ನೀಡಿ ಥೇಟ್ ವೈದ್ಯರಂತೆ ಚಿಕಿತ್ಸೆ ಕೊಡುತ್ತಾರೆ. ಇತ್ತ, ಪಬ್ಲಿಕ್ ಟಿವಿ ಕ್ಯಾಮೆರಾ ಕಾಣಿಸಿಕೊಳ್ಳುತ್ತಿದ್ದಂತೆ ಕಕ್ಕಾಬಿಕ್ಕಿಯಾದರು. ಇಷ್ಟೆಲ್ಲ ಗೋಲ್‍ಮಾಲ್ ನಡೆಯುತ್ತಿದ್ದರೂ ಜಿಲ್ಲಾ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿಲ್ಲ. ಇದನ್ನೂ ಓದಿ: PayCM ಪೋಸ್ಟರ್ ಅಂಟಿಸಲು ಕಾಲೇಜು ವಿದ್ಯಾರ್ಥಿಗಳ ಬಳಕೆ – ಸ್ಟೂಡೆಂಟ್ಸ್ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್