ವಿಜಯಪುರ: ನಾನು ಮನೆಯಲ್ಲೇ ಕುಳಿತು ಟೇಬಲ್ ಬಡಿದರೆ ಸಾಕು, ಹಾವು ಕಚ್ಚಿದವರು ದೇಶದ ಯಾವುದೇ ಮೂಲೆಯಲ್ಲಿದ್ರೂ ಥಟ್ಟನೆ ಗುಣಮುಖರಾಗ್ತಾರೆ ಎಂದು ಹೇಳುವ ಡೋಂಗಿ ವೈದ್ಯನೊಬ್ಬ ಸಿಕ್ಕಿ ಬಿದ್ದಿದ್ದಾನೆ.
ಲಾಲ್‍ಸಾಬ್ ಎಂಬಾತನೇ ಮುಗ್ಧ ಜನರನ್ನು ಮೋಸ ಮಾಡುತ್ತಿರುವ ನಕಲಿ ವೈದ್ಯ. ಲಾಲ್‍ಸಾಬ್ ಜಿಲ್ಲೆಯ ಇಟ್ಟಂಗಿಹಾಳದಲ್ಲಿ ನಿವಾಸಿಯಾಗಿದ್ದಾನೆ. ಕ್ಷಣಾರ್ಧದಲ್ಲಿ ಪಾರ್ಶ್ವವಾಯು ಗುಣಮುಖ ಮಾಡ್ತೀನಿ, ಸಕ್ಕರೆ ಕಾಯಿಲೆ ಸೇರಿದಂತೆ ಹಲವು ರೋಗಗಳನ್ನು ಸರಿಪಡಿಸ್ತೀನಿ ಅಂತ ಕುದಿಸಿದ ನೀರಿನಲ್ಲಿ ಒಂದಿಷ್ಟು ಪುಡಿ ಹಾಕಿ 21 ದಿನ ತೆಗೆದುಕೊಳ್ಳಿ ಅಂತ ಹೇಳಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾನೆ.
ಅದು ಹೇಗೆ ನೀವು ಹುಷಾರು ಮಾಡ್ತೀರಿ ಅಂತಾ ಕೇಳಿದ್ರೆ, ಗುರುಗಳ ಆಶೀರ್ವಾದದಿಂದ ನನಗೆ ಈ ಶಕ್ತಿ ಲಭಿಸಿದೆ ಎಂದು ಬೊಗಳೆ ಬಿಡುತ್ತಾನೆ. ಇದೇ ರೀತಿ ಬಾಗಲಕೋಟೆಯ ವಿಮಲಾಬಾಯಿ ಎಂಬವರು ಇವನ ಹತ್ತಿರ ಚಿಕಿತ್ಸೆ ಪಡೆದು ಗುಣಮುಖರಾಗದೇ 15 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ನಾಟಿ ವೈದ್ಯ ಹೆಸರಿನಲ್ಲಿ ಪ್ರತಿನಿತ್ಯ ಜನರನ್ನು ವಂಚಿಸಿ ಹಣ ಪೀಕೋದೇ ಇವನ ಕಸುಬಾಗಿದೆ.