ಮುಂಬೈ: ಮಹಾರಾಷ್ಟ್ರದ ಥಾಣೆಯಲ್ಲಿ ಮಕ್ಕಳಾಗುವಂತೆ ಮಾಡುತ್ತೇನೆ ಎಂದು ವಿವಾಹಿತ ದಂಪತಿಗೆ ತನ್ನ ಮುಂದೆಯೇ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ ನಕಲಿ ವೈದ್ಯನಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.
ನಪುಂಸಕತೆಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯ ಯೋಗೇಶ್ ಕುಪೇಕರ್ ಸಂತಾನ ಪ್ರಾಪ್ತಿಗೆ ಬಂದ ದಂಪತಿಗೆ ಇಂತಹ ಕೆಟ್ಟ ಸಲಹೆ ನೀಡಿದ್ದ. ಈತನ ವಿರುದ್ಧ ಪ್ರಕರಣ ದಾಖಲಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪಿ.ಪಿ ಜಾಧವ್, ಅಪರಾಧಿ ಯೋಗೇಶ್ ಕುಪೇಕರ್ ಗೆ 10 ವರ್ಷ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ವಿವಾಹಿತ ದಂಪತಿಗೆ ಮಕ್ಕಳಗಾದ ಹಿನ್ನೆಲೆಯಲ್ಲಿ 2014ರಲ್ಲಿ ಯೋಗೇಶ್ ಬಳಿ ಚಿಕಿತ್ಸೆಗಾಗಿ ಹೋಗಿದ್ದಾರೆ. ಆತನಿಂದ ಎರಡು ವರ್ಷ ಕಾಲ ಚಿಕಿತ್ಸೆ ಪಡೆದುಕೊಂಡರೂ ಅವರಿಗೆ ಮಕ್ಕಳಾಗಿರಲಿಲ್ಲ. ಬಳಿಕ ಯೋಗೇಶ್ ದಂಪತಿ ತಮಗೆ ಮಕ್ಕಳಾಗಲು ಏನು ಮಾಡಲೂ ಸಿದ್ಧರಾಗಿದ್ದಾರೆ ಎನ್ನುವುದನ್ನು ತಿಳಿದುಕೊಂಡಿದ್ದ.
Advertisement
2016ರಲ್ಲಿ ಯೋಗೇಶ್ ದಂಪತಿಗೆ ತನ್ನ ಮುಂದೆಯೇ ಲೈಂಗಿಕ ಕ್ರೀಯೆ ನಡೆಸುವಂತೆ ಒತ್ತಡ ಹೇರಿದ್ದಾನೆ. ನೀವು ಏನು ತಪ್ಪು ಮಾಡುತ್ತಿದ್ದೀರಿ ಎಂಬುದು ನನಗೆ ಗೊತ್ತಾಗಬೇಕು. ಆಗ ಮಾತ್ರ ನಾನು ಸೂಕ್ತ ಸಲಹೆ ನೀಡಲು ಸಾಧ್ಯವೆಂದು ಎಂದು ಹೇಳಿ ತನ್ನ ಸಲಹೆ ಆತ ಸಮರ್ಥನೆ ಬೇರೆ ಕೊಟ್ಟಿದ್ದ. ಅಷ್ಟೇ ಅಲ್ಲದೇ ಯೋಗೇಶ್ ದಂಪತಿಯಿಂದ ಚಿಕಿತ್ಸೆ ರೂಪದಲ್ಲಿ ಸುಮಾರು 10 ಸಾವಿರ ರೂಪಾಯಿಯನ್ನು ಪಡೆದುಕೊಂಡಿದ್ದ.
Advertisement
ವೈದ್ಯನ ಈ ಸಲಹೆಯಿಂದ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ 2016 ರಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ ಲೈಂಗಿಕ ಕಿರುಕುಳ ಮತ್ತು ಮಹಾರಾಷ್ಟ್ರದಲ್ಲಿ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯ್ದೆ(2013) ಅಡಿ ಪ್ರಕರಣ ದಾಖಲಾಗಿತ್ತು.
ಇದೊಂದು ವಿಶೇಷ ಪ್ರಕರಣವಾಗಿದ್ದು, ದಂಪತಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಎನ್ನುವುದನ್ನೇ ದುರ್ಬಳಕ್ಕೆ ಮಾಡಿಕೊಂಡು ಕೃತ್ಯಕ್ಕೆ ಪ್ರಚೋದನೆ ನೀಡಿದ್ದು ಅಪರಾಧ. ಒಬ್ಬಳು ಮಗಳು ಇದ್ದು, ಪತ್ನಿ ಶಿಕ್ಷಕಿಯಾಗಿದ್ದರೂ ಅಪರಾಧಿ ಈ ರೀತಿಯ ಅಪಾಯಕಾರಿ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ಹೀಗಾಗಿ ಈತ ಶಿಕ್ಷೆಗೆ ಅರ್ಹ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv