Connect with us

Bagalkot

ಐದನೇ ತರಗತಿ ಓದಿ ಆಸ್ಪತ್ರೆ ಚಲಾಯಿಸ್ತಿದ್ದ ವೈದ್ಯನ ಬಂಧನ

Published

on

ಬಾಗಲಕೋಟೆ: ಐದನೇ ತರಗತಿ ಓದಿದ್ದ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂದು ಹೇಳಿಕೊಂಡು ಜನರಿಗೆ ಮೋಸ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ನಡೆದಿದೆ.

ರಾಘವೇಂದ್ರ ಜಗನ್ನಾಥ ಕಾಟವಾ ಎಂಬವನು ನಕಲಿ ವೈದ್ಯನಾಗಿದ್ದು, ನಗರದ ಕಿಲ್ಲಾ ಓಣಿಯಲ್ಲಿ ಆಸ್ಪತ್ರೆಯನ್ನು ನಡೆಸುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನಿಂದ ಆಗಮಿಸಿದ ರಾಜ್ಯ ಅಬಕಾರಿ ವಿಚಕ್ಷಣಾದಳದ ಎಸ್.ಪಿ ಮೋತಿಲಾಲ್ ನೇತೃತ್ವದಲ್ಲಿ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಟ್ರೆಮಾಡೊಲ್ ಹೈಡ್ರೊಕ್ಲೊರೈಡ್, ಬಿಜೊಲಮ್ ಮೌಥ್ ಡಿಸಾಲ್ವಿಂಗ್ ಮಾತ್ರೆ ಸೇರಿ 52 ಬಗೆಯ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ನಕಲಿ ವೈದ್ಯ ರೋಗಿಗಳಿಗೆ ಹೈಡೋಸ್ ಮಾತ್ರೆಗಳನ್ನು ನೀಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ.

ಸದ್ಯ ಪೊಲೀಸರು ಎನ್‍ಡಿಪಿಎಸ್ ಆ್ಯಕ್ಟ್ 1985 ಕಾಯ್ದೆ ಅಡಿ ನಕಲಿ ವೈದ್ಯನನ್ನು ಬಂಧಿಸಿದ್ದಾರೆ. ಸಿಆರ್‍ಪಿಸಿ 154 ಕಲಂ ಅಡಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *