– ಬೀದಿಬದಿಯೇ ಕೊಡ್ತಾರೆ ಟ್ರೀಟ್‍ಮೆಂಟ್
– ಐದೇ ನಿಮಿಷದಲ್ಲಿ ಜೋಡಣೆಯಾಗುತ್ತೆ ಹಲ್ಲು
ಬೆಂಗಳೂರು: ರಾಜಧಾನಿಯಲ್ಲಿ ನಕಲಿ ದಂತ ವೈದ್ಯರ ಹಾವಳಿ ತಾಂಡವವಾಡುತ್ತಿದ್ದು, ಮಾತಲ್ಲೇ ಮರುಳು ಮಾಡಿ ಕಡಿಮೆ ಬೆಲೆಗೆ ಹಲ್ಲು ಜೋಡಿಸುತ್ತಾರೆ. ಸ್ವಲ್ಪ ಯಾಮಾರಿದರೂ ಈ ನಕಲಿ ಡೆಂಟಲ್ ಡಾಕ್ಟರ್ಸ್ ಸಾಯಿಸಿಬಿಡುತ್ತಾರೆ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ನಕಲಿ ವೈದ್ಯರ ಕರ್ಮಕಾಂಡ ಬೆಳಕಿಗೆ ಬಂದಿದೆ.
Advertisement
ಯಾವುದೇ ಇಲಾಖೆಯ ಅನುಮತಿ ಪಡೆಯದೇ ಈ ನಕಲಿ ಡಾಕ್ಟರ್ಸ್ ಫುಟ್ ಪಾತ್‍ನಲ್ಲೇ ಚಿಕಿತ್ಸೆ ಕೊಡುತ್ತಿದ್ದಾರೆ. ನಗರದ ಕೆ.ಆರ್ ಮಾರ್ಕೆಟ್ ನಲ್ಲಿ ಡೆಂಟಲ್ ಕ್ಲಿನಿಕ್ ಗಳನ್ನು ನಡೆಸುತ್ತಿದ್ದಾರೆ. ಇದನ್ನೆಲ್ಲ ಕುಲ ಕಸುಬನ್ನಾಗಿ ಮಾಡಿಕೊಂಡಿರುವ ಕೆಲ ಆಸಾಮಿಗಳು ಫುಟ್ ಪಾತ್ ನಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿ ಪ್ರತಿನಿಧಿ ನಕಲಿ ದಂತವೈದ್ಯರೊಂದಿಗೆ ನಡೆಸಿದ ಸಂಭಾಷಣೆ ಇಂತಿದೆ.
ಪ್ರತಿನಿಧಿ: ರೆಗ್ಯೂಲರ್ ಇರ್ತಿರಾ
ನಕಲಿ ಡಾಕ್ಟರ್: ಕಾರ್ಡ್ ತೊಗೊಂಡ್ರಾ..
ಪ್ರತಿನಿಧಿ: ಲಾಸ್ಟ್ ಟೈಮ್ ಮಾಡ್ಸಿದ್ದೆ. ಬಿಚ್ಚೋಗಿತ್ತು
ನಕಲಿ ಡಾಕ್ಟರ್: ಅದು ಕೆಲ್ಸ ಇದೆ ಮಾಡ್ಬೇಕು. ಅರ್ಧ ಘಂಟೆಯಲ್ಲಿ ಮಾಡ್ತೀನಿ. ಒಳಗಡೆ ಕಂಬಿ ಲಾಕ್ ಮಾಡಿ ಕೊಡ್ತೀನಿ
ಪ್ರತಿನಿಧಿ: ಎಷ್ಟಾಗುತ್ತೆ ಅಂತ ಹೇಳಿದ್ರಿ
ನಕಲಿ ಡಾಕ್ಟರ್: ಸಾವಿರ ರೂಪಾಯಿ
ಪ್ರತಿನಿಧಿ: ಬರೀ ಕ್ಯಾಪ್ ಅಷ್ಟೆ
ನಕಲಿ ಡಾಕ್ಟರ್: ಹಲ್ಲು ನೋಡಿಲ್ಲ ನಿಮ್ಗೆ. ಬರೀ ಹೋಲ್ಸ್ ಗೆ ಅಂತ. ಈ ಹಲ್ಲಿಗೆ ಫುಲ್ ಉಜ್ಜು ಬಿಟ್ಟು ಹಾಕಿಕೊಡ್ತೀನಿ
ಪ್ರತಿನಿಧಿ: ಕೊಡಿ.. ಯಾವುದು ಇದು
ನಕಲಿ ಡಾಕ್ಟರ್: ಸಿರಾಮಿಕ್ ಹಲ್ಲು. 28 ಹಲ್ಲು ಬರುತ್ತೆ.
ಪ್ರತಿನಿಧಿ: ನೀವು ಎಲ್ಲಿಂದ ತರ್ತೀರಿ
ನಕಲಿ ಡಾಕ್ಟರ್: ನಾವು ತರ್ಸೋದು ಅಣ್ಣ
ಪ್ರತಿನಿಧಿ: ಡೆಂಟಲ್ ಆಸ್ಪತ್ರೆಗೆ ಹೋದ್ರೆ
ನಕಲಿ ಡಾಕ್ಟರ್: ಅಲ್ಲಿ ನಿಮಗೆ ಸ್ಟೀಲ್ ಕ್ಯಾಪ್ ಹಾಕ್ತಾರೆ
ಪ್ರತಿನಿಧಿ: ನೀವು ಯಾವ ಪೌಡರ್ ಹಾಕ್ತೀರಿ.
ನಕಲಿ ಡಾಕ್ಟರ್: ನಮ್ದು ಏನಿದ್ರೂ ಅಶ್ವಿನಿ ಲಿಕ್ವಿಡ್ ಪೌಡರ್
ನಕಲಿ ಡಾಕ್ಟರ್: ನಾವು ನಿಮ್ಗೆ ಚೆನ್ನಾಗಿ ಮಾಡಿದ್ರೆ, ಬೇರೆಯವ್ರನ್ನ ಕಳಿಸ್ತೀರಾ. ಕೊಲ್ಕತ್ತಾದಿಂದ ಹುಡ್ಕೊಂಡು ಬರ್ತಾರೆ ನನ್ನ
ಪ್ರತಿನಿಧಿ: ಹೌದಾ..ಮೆಟರಿಯಲ್ ಬೇರೆ ಕಡೆಯಿಂದ ತರ್ತೀರಾ
ನಕಲಿ ಡಾಕ್ಟರ್: ನಾನೇ ಹೋಗಿ ತೊಗೊಂಡು ಬರ್ತೀನಿ. ಒಂದು ಕಡೆ ಬರುತ್ತೆ
ಪ್ರತಿನಿಧಿ: ಆಸ್ಪತ್ರೆಗಳಿಂದ ನಿಮಗೆ ಅನುಮತಿ ಇರುತ್ತಾ. ಅವ್ರಿಗೆ ನಿಮಗೆ ಪರಿಚಯ
ನಕಲಿ ಡಾಕ್ಟರ್: ಆ ರೀತಿ ಏನೂ ಇಲ್ಲ. ಅರ್ಜೆಂಟ್ ಮದುವೆ, ಸಮಾರಂಭಗಳಿಗೆ ಹೋಗಬೇಕಾದಾಗ ಹಾಕಿ, ತೆಗೆಯೋದು ಫಿಟ್ಟಿಂಗ್ ಮಾಡಿಕೊಡ್ತೀನಿ
ಪ್ರತಿನಿಧಿ: ನಾನು ಎರಡು ಸಲ ಮೋಸ ಹೋಗಿದ್ದೀನಿ ಭಾಯ್
ನಕಲಿ ಡಾಕ್ಟರ್: ಕುಂತು ಮಾಡೋಕೆ ಐದು ನಿಮಿಷನೂ ಆಗಲ್ಲ. ನಾನು ಕಾಸುಗೆ ಯೋಚನೆ ಮಾಡಿದ್ರೆ, ಯಾವಾಗೋ ಕಳಿಸಿದ್ದೆ ನಿಮಗೆ
ಪ್ರತಿನಿಧಿ: ನಿಮ್ಮ ಕೆಲಸದಲ್ಲಿ ನಂಬಿಕೆ ಅಷ್ಟೆ, ಎಟಿಎಂ ಗೆ ಹೋಗು ಬರೋಣ
ನಕಲಿ ಡಾಕ್ಟರ್: ಬನ್ನಿ ಸಾರ್. ಯಾವಾಗ ಟೈಮ್ ಇರುತ್ತೆ ಆಗ ಬನ್ನಿ.
ಪ್ರತಿನಿಧಿ: ಹುಮ್.
ನಕಲಿ ಡಾಕ್ಟರ್: ನಾಲ್ಕೈದು ಜನ ಇದ್ರೆ ನಿಮ್ ಮನೆಗೂ ಬರ್ತಿನಿ. ನಾಲ್ಕೈದು ಜನ ಲೇಡಿಸ್ ಇದ್ರುನೂ ಮನೆ ಹತ್ರನೇ ಬಂದು ಮಾಡಿ ಹೋಗ್ತೀನಿ
ಪ್ರತಿನಿಧಿ: ಎಕ್ಸ್ಟ್ರಾ ಚಾರ್ಜ್ ತೊಗೊತೀರಾ
ನಕಲಿ ಡಾಕ್ಟರ್: ಎಲ್ಲಾ ಲೆಕ್ಕ ಅಷ್ಟೆ. ಮೂರು ನೂರು, ನಾಲ್ಕು ನೂರು, ಐನೂರು. ಬನ್ನಿ ಅಣ್ಣ ಮಾಡಿಕೊಡ್ತೀನಿ
ಪ್ರತಿನಿಧಿ: ಸರಿ. ನಂಬರ್ ಇದೆ ಕಾಲ್ ಮಾಡ್ತೀನಿ
Advertisement
ಕೇವಲ ಫುಟ್ ಪಾತ್ ಮಾತ್ರವಲ್ಲದೇ ಮನೆಗೂ ಬಂದು ಚಿಕಿತ್ಸೆ ನೀಡುತ್ತೇವೆ ಎಂದು ನಕಲಿ ಡಾಕ್ಟರ್ಸ್ ಹೇಳುತ್ತಿದ್ದು, ನಾಲ್ಕೈದು ಜನ ಇದ್ದರೆ ಹೋಮ್ ಡೆಲಿವರಿ ಕೂಡ ಮಾಡ್ತಾರಂತೆ. ಒಬ್ಬರ ಬಾಯಿಗೆ ಇಟ್ಟಿರುವ ಸಲಕರಣೆಗಳನ್ನು ಸರಿಯಾಗಿ ಶುಚಿ ಮಾಡದೆ, ಮತ್ತೊಬ್ಬರ ಬಾಯಿಗೆ ಇಟ್ಟು ಹಲ್ಲು ಜೋಡಿಸುತ್ತಾರೆ. ಹೀಗೆ ಮಾಡುವುದರಿಂದ ಹೆಚ್‍ಐವಿ ಕೂಡ ಬರುವ ಸಾಧ್ಯತೆಗಳಿರುತ್ತೆ ಎಂದು ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಚಿಕಿತ್ಸೆ ನೀಡುವವರು ಕುಲ ಕಸುಬನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದು, ಯಾವುದೇ ಮೆಡಿಕಲ್ ಶಿಕ್ಷಣವನ್ನು ಪಡೆದಿಲ್ಲ. ಮುಖ್ಯವಾಗಿ ಕರ್ನಾಟಕ ಸ್ಟೇಟ್ ಡೆಂಟಲ್ ಕೌನ್ಸಿಲ್ ನಲ್ಲಿ ಅನುಮತಿ ಪಡೆದು ಡೆಂಟಲ್ ಕ್ಲಿನಿಕನ್ನು ಓಪನ್ ಮಾಡಬೇಕಾಗುತ್ತೆ. ಆದರೆ ಈ ಡಾಕ್ಟರ್ಸ್ ಯಾರ ಅನುಮತಿಯನ್ನೂ ಪಡೆದಿಲ್ಲ. ಆದ್ರೂ ರಾಜರೋಷವಾಗಿ ಬ್ಯೂಸಿನೆಸ್ ಮಾಡುತ್ತಿದ್ದಾರೆ. ನಗರದ ಕೆ.ಆರ್.ಮಾರ್ಕೆಟ್‍ನಲ್ಲಿರುವ ಮತ್ತೊಂದು ಡೆಂಟಲ್ ಕ್ಲಿನಿಕ್‍ನ ನಕಲಿ ಡೆಂಟಲ್ ಡಾಕ್ಟರ್ಸ್ ಮಾತು ಇಂತಿದೆ.
ಪ್ರತಿನಿಧಿ: ಹಲ್ಲು ಸ್ಪೇಸ್ ಇದೆ. ಹಾಕಿ ಕೊಡ್ತೀರಾ
ನಕಲಿ ಡಾಕ್ಟರ್: ಯಾರಿಗೆ
ಪ್ರತಿನಿಧಿ: ನಮ್ಗಲ್ಲ. ನಮ್ ಹುಡ್ಗನಿಗೆ
ನಕಲಿ ಡಾಕ್ಟರ್: ಎಲ್ಲಿದ್ದಾರೆ..?
ಪ್ರತಿನಿಧಿ: ಆ ಹುಡ್ಗ ಇಲ್ಲ. ಕರ್ಕೊಂಡು ಬರುತ್ತೀವಿ. ಎಷ್ಟಾಗುತ್ತೆ..?
ನಕಲಿ ಡಾಕ್ಟರ್: ಇನ್ನೂರು, ಮುನ್ನೂರು, ನಾನ್ನೂರು ಅಷ್ಟೆ.
ಪ್ರತಿನಿಧಿ: ನೀವೇ ಕೊಡುತ್ತೀರಾ..?
ನಕಲಿ ಡಾಕ್ಟರ್: ಕರ್ಕೊಂಡು ಬನ್ನಿ. ಮಾಡಿ ಕೊಡ್ತೀನಿ..
ಹಲ್ಲು ಜೋಡಿಸುವಾಗ, ತೆಗೆಯುವಾಗ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿಲ್ಲ. ಸ್ವಲ್ಪ ಎಡವಟ್ಟು ಆದ್ರು, ಹಲ್ಲಿನ ಚಿಗುರೇ ಛಿದ್ರ ಛಿದ್ರವಾಗುವ ಸಾಧ್ಯತೆಗಳಿವೆ. ಸಾಮಾನ್ಯವಾಗಿ ಅನುಮತಿ ಪಡೆದು ನಡೆಸುವ ಡೆಂಟಲ್ ಆಸ್ಪತ್ರೆಗಳಲ್ಲಿ ಹಲ್ಲು ಜೋಡಿಸುವಾಗ, ತೆಗೆಯುವಾಗ, ಅದರ ಮಾಪನ, ಅಳತೆಯನ್ನು ಲ್ಯಾಬ್‍ಗೆ ಕಳುಹಿಸಿ ಚಿಕಿತ್ಸೆ ಶುರು ಮಾಡುತ್ತಾರೆ. ಆದರೆ ಇಲ್ಲಿ ಮಾತ್ರ ಬರೀ ಐದೇ ನಿಮಿಷದಲ್ಲಿ ಗಮ್ ಲಿಕ್ವಿಡ್ ಹಾಕಿ ಹಲ್ಲು ಜೋಡಿಸಿ ಕೊಡುತ್ತಾರೆ. ಇದು ಅಕ್ರಮ ಅಂತ ಗೊತ್ತಿದ್ದರು ಸಂಬಂಧಪಟ್ಟ ಪಾಲಿಕೆಯ ಆರೋಗ್ಯಧಿಕಾರಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ. ಈ ನಕಲಿ ವೈದ್ಯರು ಪೊಲೀಸರಿಗೆ ಪ್ರತಿದಿನ ಮಾಮೂಲು ನೀಡಿ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪಕೊಳ್ಳಿ ಬಂದಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಲು ಎಚ್ಚೆತ್ತುಕೊಂಡು ಶಿಸ್ತು ಕ್ರಮ ಕೈಗೊಳ್ಳಬೇಕಿದೆ.