ರಾಯಚೂರಿನಲ್ಲಿ ಖೋಟಾ ನೋಟು ಜಾಲ ಪತ್ತೆ – ಎಎಸ್‌ಐ ಸೇರಿ ನಾಲ್ವರು ಅರೆಸ್ಟ್‌

Public TV
1 Min Read
Fake currency case Four arrested in Raichur

ರಾಯಚೂರು: ಜಿಲ್ಲೆಯಲ್ಲಿ (Raichur) ಖೋಟಾ ನೋಟಿನ (Fake Currency) ಜಾಲ ಪತ್ತೆಯಾಗಿದ್ದು, ಸಶಸ್ತ್ರ ಮೀಸಲು ಪಡೆಯ ಎಎಸ್‌ಐ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಎಎಸ್‌ಐ ಮರಿಲಿಂಗ, ಸದ್ದಾಂ, ರಮೇಶ್ ಮತ್ತು ಶಿವಲಿಂಗ ಎಂದು ಗುರುತಿಸಲಾಗಿದೆ. ನಗರದ ಶಾಂತಿ ಕಾಲೋನಿಯ ಸದ್ದಾಂನ ಮನೆಯನ್ನು ಬಾಡಿಗೆ ಪಡೆದಿದ್ದ ಮರಿಲಿಂಗ ಅಲ್ಲಿಂದಲೇ ದಂಧೆ ನಡೆಸುತ್ತಿದ್ದ. ಈ ವಿಚಾರ ತಿಳಿದು ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

Fake currency case Four arrested in Raichur 1

ಹೈದರಾಬಾದ್‌ನ ಕಿಂಗ್​ಪಿನ್​ ಒಬ್ಬನ ಮಾತಿನಂತೆ ಮರಿಲಿಂಗ ಟೀಂ ಈ ದಂಧೆಯನ್ನು ಮಾಡುತ್ತಿತ್ತು. ಇನ್ನೂ ಗ್ಯಾಂಗ್ ಸದ್ದಾಂನಿಂದ 10 ಲಕ್ಷ ರೂ. ಹಣ ಪಡೆದು 30 ಲಕ್ಷ ರೂ. ಖೋಟಾ ನೋಟು ನೀಡುವ ವ್ಯವಹಾರ ಕುದುರಿತ್ತು. ‌ಮೊದಲ ಹಂತವಾಗಿ ಸದ್ದಾಂ 4 ಲಕ್ಷ ರೂ. ನೀಡಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಕೆ.ಆರ್ ಮಾರ್ಕೆಟ್ ಫ್ಲೈಓವರ್ ಮೇಲೆ ಹಿಟ್& ರನ್ – ಆಟೋಗೆ ಕಾರು ಡಿಕ್ಕಿ, ಚಾಲಕನ ಕಾಲು ಮುರಿತ

ಖೋಟಾ ನೋಟು ತಯಾರಿಕೆಗೆ ಬೇಕಾಗುವ ವೈಟ್​ ಪೇಪರ್​ಗಳು ಕೆಲ ಕಚ್ಚಾ ವಸ್ತುಗಳನ್ನು ಗ್ಯಾಂಗ್ ನೀಡಿತ್ತು. ಬಾಡಿಗೆ ಪಡೆದ ಮನೆಯಲ್ಲೇ ಖೋಟಾ ನೋಟು ತಯಾರಿಕೆಗೆ ಸಿದ್ಧತೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ವೇಳೆ ವೈಟ್ ಪೇಪರ್​​ ಹಾಗೂ ಕಚ್ಚಾ ವಸ್ತುಗಳು, 4 ಲಕ್ಷ ರೂ. ನಗದು ಹಣ ಜಪ್ತಿ ಮಾಡಿದ್ದಾರೆ. ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ವರು ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಆಟವಾಡಲು ಕೆರೆಗೆ ಇಳಿದು ಉಸಿರು ಚೆಲ್ಲಿದ ಬಾಲಕಿ

Share This Article