– ರೆಡ್ಡಿ ಆಪ್ತ ಅಲಿಖಾನ್‍ಗೆ ಜಾಮೀನು
– ಅಲಿಖಾನ್ ವಕೀಲ ಚಂದ್ರಶೇಖರ್ ಗಂಭೀರ ಆರೋಪ
– ಜನಾರ್ದನ ರೆಡ್ಡಿಗೂ ಜಾಮೀನು ಸಿಗೋ ಸಾಧ್ಯತೆ?
ಬೆಂಗಳೂರು: ಅಂಬಿಡೆಂಟ್ ಕಂಪನಿ ಜೊತೆ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಬಚಾವ್ ಆಗಿದ್ದಾರೆ.
ಪ್ರಕರಣದ ಆರೋಪಿ ಅಲಿಖಾನ್ ಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ರೆಡ್ಡಿಗೂ ಬಿಗ್ ರಿಲೀಫ್ ಸಿಗೋ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
Advertisement
Advertisement
ಅಲಿಖಾನ್ ಪರ ವಕೀಲ ಚಂದ್ರಶೇಖರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಇದೊಂದು ಸುಳ್ಳು ಕೇಸ್ ಆಗಿದೆ. ಸಿಸಿಬಿಯವರು ಅಂಬಿಡೆಂಟ್ ಎಂಬ ಕೇಸನ್ನು ಉಪಯೋಗಿಸಿಕೊಂಡು ರಾಜಕೀಯ ಒತ್ತಡದಲ್ಲಿ ಇದನ್ನು ಅಲಿಖಾನ್ ಅವರನ್ನು ಸಿಕ್ಕಿಸಿಹಾಕಿದ್ದಲ್ಲದೇ ಜನಾರ್ದನ ರೆಡ್ಡಿಯವರ ಹೆಸರನ್ನೂ ಪ್ರಸ್ತಾಪ ಮಾಡಿದ್ದಾರೆ. ಯಾವುದೋ ಒಂದು ನಕಲಿ ಕೇಸ್ ನಲ್ಲಿ ಇವರ ಹೆಸರುಗಳನ್ನು ತರಬೇಕು ಅಂತ ಹೇಳಿ ಹುನ್ನಾರ ಹೂಡಿದ್ದಾರೆ ಅಂತ ಆರೋಪಿಸಿದ್ರು.
Advertisement
ಈ ಹುನ್ನಾರದ ವಿರುದ್ಧವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೆವು. ಇಂದು ಕೋರ್ಟ್ ಅಲಿಖಾನ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಬಂಧನದ ಭೀತಿಯಿಂದ ಅಲಿಖಾನ್ ಪಾರಾಗಿದ್ದಾರೆ. ಇದು ಅಂಬಿಡೆಂಟ್ ನಿರ್ದೇಶಕರುಗಳ ವಿರುದ್ಧ ಇರುವಂತಹ ಕೇಸ್ ಆಗಿದ್ದು, ಆರೋಪಿ ನಂಬರ್ 1,2,3 ಈ ಮೂವರು ಕೂಡ ಕಂಪನಿಯ ನಿರ್ದೇಶಕರಾಗಿದ್ದಾರೆ ಅಂತ ಹೇಳಿದ್ರು.
Advertisement
ಚಂದ್ರಶೇಖರ್ ಹೇಳಿದ್ದು ಏನು?
ಅಂಬಿಡೆಂಟ್ ಕಂಪನಿಯವರು ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದರು. ಅವರು ಸಾರ್ವಜನಿಕರ ಆಸೆಗಳನ್ನು ಯಾವಾಗ ನೆರವೇರಿಸಲಿಲ್ಲವೋ ಆ ಸಂದರ್ಭದಲ್ಲಿ ಹೂಡಿಕೆದಾರರು ಕಂಪನಿ ವಿರುದ್ಧ ದೂರು ನೀಡಿದ್ದರು. ಹೀಗಾಗಿ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಇವೆಲ್ಲವೂ ಸಿಸಿಬಿ ಪೊಲೀಸರಿಗೆ ವರ್ಗಾವಣೆಯಾಗಿತ್ತು. ಒಟ್ಟಿನಲ್ಲಿ ಆರೋಪಿ ಪಟ್ಟಿಯಲ್ಲಿರುವಂತವರು ಕಂಪನಿಯ ನಿರ್ದೇಶಕರಾಗಿದ್ದಾರೆ. ಹೀಗಾಗಿ ಕಂಪನಿ, ಅಲಿಖಾನ್ ಹಾಗೂ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಅಂತ ಸ್ಪಷ್ಟಪಡಿಸಿದ್ರು.
ಕಂಪನಿ ವಿರುದ್ಧ ತನಿಖೆ ಮುಂದುವರಿಸಿ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಬೇಕು. ಅದನ್ನು ಬಿಟ್ಟು ಇವರು ಯಾವುದೋ ಒಂದು ಇಲ್ಲಸಲ್ಲದ ಫೋಟೋಗಳನ್ನು ತೋರಿಸಿ, ಯಾವುದೋ ಸಂದರ್ಭದಲ್ಲಿ ವ್ಯಕ್ತಿ ಜೊತೆ ರೆಡ್ಡಿ ಇದ್ದಂತಹ ಫೋಟೋವನ್ನು ಸಿಸಿಬಿ ಪೊಲೀಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಂಬಿಡೆಂಟ್ ಕಂಪನಿಯಿಂದ ಹಣ ವರ್ಗಾವಣೆ ಮಾಡಿರುವ ವ್ಯಕ್ತಿ ರಮೇಶ್ ಎಂಬಾತನನ್ನು ಬಂಧಿಸುತ್ತಾರೆ.
ಬಳ್ಳಾರಿ ರಾಜ್ ಮಹಲ್ ಪ್ಯಾಲೇಸ್ ಮಾಲೀಕರಾದಂತಹ ರಮೇಶ್ ನನ್ನು ಕಳೆದ ಶುಕ್ರವಾರ ಬಂಧಿಸಿ ಅಕ್ರಮವಾಗಿ ಕಸ್ಟಡಿಯಲ್ಲಿಟ್ಟುಕೊಂಡು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. ಇದೀಗ ನಾವು ಎ1 ಆರೋಪಿ ರಮೇಶ್ ಗೂ ನೀಡಿದ್ದೇವೆ ಅಂತ ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv