ತುಮಕೂರು: ವಿಧಾನಸಭಾ ಚುನಾವಣೆಗೆ (Assembly Election) ಡೇಟ್ ಫಿಕ್ಸ್ ಆಗಿದೆ. ಹೀಗಾಗಿ ಎಲ್ಲಾ ಪಕ್ಷಗಳು ತಮ್ಮ ಪ್ರಚಾರ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲಿವೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳು ಕೂಡಾ ಖುಷಿ ಖುಷಿಯಲ್ಲಿ ಪ್ರಚಾರದಲ್ಲಿ ತೊಡಗಲಿದ್ದಾರೆ.
ಆದರೆ ಇಲ್ಲೊಬ್ಬ ಹಾಲಿ ಶಾಸಕರಿಗೆ ಮಾತ್ರ ಚುನಾವಣೆಗೆ ಡೇಟ್ ಫಿಕ್ಸ್ ಆದ ಬೆನ್ನಲ್ಲೇ ಭಾರೀ ಟೆನ್ಶನ್ ಎದುರಾಗಿದೆ. ತುಮಕೂರು (Tumakuru) ಗ್ರಾಮಾಂತರ ಕ್ಷೇತ್ರದ ಜೆಡಿಎಸ್ (JDS) ಶಾಸಕ ಡಿಸಿ ಗೌರಿಶಂಕರ್‌ಗೆ (DC Gourishankar) ಶಾಸಕ ಸ್ಥಾನ ಅನರ್ಹತೆಯ ಭೀತಿ ಕಾಡುತ್ತಿದೆ. ಇದನ್ನೂ ಓದಿ: ವಲಸಿಗರ ಘರ್ ವಾಪಸಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‍ಗೆ ಆತಂಕ- ಟಿಕೆಟ್ ಫೈನಲ್ ಮಾಡಲು ಪರದಾಟ
2018ರ ಚುನಾವಣೆಯಲ್ಲಿ ಮತದಾರರಿಗೆ ವಿಮಾ ಪಾಲಿಸಿಯ ನಕಲಿ ಬಾಂಡ್ ವಿತರಿಸಿದ ಕೇಸ್‌ಗೆ ಸಂಬಂಧಿಸಿದಂತೆ ಈಗ ಹೈಕೋರ್ಟ್‌ನಲ್ಲಿ ಅಂತಿಮ ತೀರ್ಪು ಹೊರಬೀಳಲಿದೆ. ಗೌರಿಶಂಕರ್ ವಿರುದ್ಧದ ಆರೋಪ ಸಾಬೀತಾದರೆ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ. ಅಷ್ಟೇ ಅಲ್ಲ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಹೈಕೋರ್ಟ್ ತೀರ್ಪು ಹೊರ ಬೀಳುತ್ತಿರುವ ಹಿನ್ನೆಲೆಯಲ್ಲಿ ಗೌರಿಶಂಕರ್ ಎದೆಯಲ್ಲಿ ಢವಢವ ಶುರುವಾಗಿದೆ.
ಗ್ರಾಮಾಂತರ ಕ್ಷೇತ್ರದ 16 ಸಾವಿರ ಮಕ್ಕಳಿಗೆ ನಕಲಿ ಬಾಂಡ್ ವಿತರಿಸಿ ಪೋಷಕರಿಗೆ ಆಮಿಷ ಒಡ್ಡಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಕೋರ್ಟ್ ಮೊರೆ ಹೋಗಿದ್ದರು. ಗೌರಿಶಂಕರ್ ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಸುರೇಶ್ ಗೌಡರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸುದೀರ್ಘ 5 ವರ್ಷಗಳ ಕಾಲ ವಿಚಾರಣೆ ನಡೆಸಿರುವ ಹೈಕೋರ್ಟ್ ಇಂದು ಅಂತಿಮ ತೀರ್ಪು ನೀಡಲಿದೆ. ಇದನ್ನೂ ಓದಿ: ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಟಿಕೆಟ್ ಫೈಟ್‍ನ ಲಾಭ ಪಡೆಯಲಿದೆಯೇ ಬಿಜೆಪಿ?