ಕೊಪ್ಪಳ: ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ 500 ಹಾಗೂ 2 ಸಾವಿರ ರೂ. ನಕಲಿ ನೋಟುಗಳು ಪತ್ತೆಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.
Advertisement
ಇಲ್ಲಿನ ಗಂಗಾವತಿ ನಗರದ ಹಿರೇಜಂತಕಲ್ ಐತಿಹಾಸಿಕ ದೇವಸ್ಥಾನದ ಪ್ರಸನ್ನ ಪಂಪಾತಿಯ ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ದೊರೆತಿವೆ. ದೇವಸ್ಥಾನದ ಆಡಳಿತಾಧಿಕಾರಿ ಗಂಗಾವತಿಯ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿ ಕಾಣಿಕೆ ಹುಂಡಿಯಲ್ಲಿನ ಹಣ ಸಂಗ್ರಹಿಸಲು ಮುಂದಾಗಿದ್ರು. ನಂವೆಬರ್ 8 ರಂದು 500 ಮತ್ತು 1000 ಮುಖಬೆಲೆಯ ನೋಟುಗಳು ನಿಷೇಧವಾಗಿದೆ. ಆದ್ರೆ ಹುಂಡಿ ತೆಗೆದಾಗ ನಿಷೇಧಿತ 500 ರೂಪಾಯಿ ಹಾಗೂ ನಕಲಿ 2 ಸಾವಿರ ಮುಖಬೆಲೆಯ ನೋಟುಗಳು ಪತ್ತೆಯಾಗಿದೆ.
Advertisement
Advertisement
ಹುಂಡಿಯಲ್ಲಿ ಪತ್ತೆಯಾದ 2000 ಮುಖಬೆಲೆಯ ಹಾಗೂ ಹಳೇ 500 ರೂ. ನೋಟು ಮಕ್ಕಳು ಆಡುವ ಆಟಿಕೆ ನೋಟುಗಳಾಗಿವೆ. ಆಟಿಕೆಯ ಎರಡು ಸಾವಿರದ ನೋಟು ಗಾತ್ರದಲ್ಲಿ ಚಿಕ್ಕದಾಗಿದ್ದು, ಬಹುತೇಕ ಅಸಲಿ ನೋಟಿನ ವಿನ್ಯಾಸವನ್ನೇ ಹೋಲುತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಮಕ್ಕಳು ಹುಂಡಿಯಲ್ಲಿ ಆಟಿಕೆ ನೋಟುಗಳನ್ನು ಹಾಕಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹುಂಡಿಯಲ್ಲಿ ಒಟ್ಟು 38,770 ರೂಪಾಯಿ ಹಣ ಸಂಗ್ರಹವಾಗಿದ್ದು, ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ತಹಶೀಲ್ದಾರ್ ಎಲ್.ಡಿ ಚಂದ್ರಕಾಂತ್ ಮಾಹಿತಿ ನೀಡಿದ್ರು.