ನವದೆಹಲಿ: ಅಮೆರಿಕಾದ ಕ್ಯಾಲಿಫೊರ್ನಿಯಾದಲ್ಲಿ ಬರ್ಕ್‍ಲೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಫಲ ರಾಜಕಾರಣಿ ಎಂದು ಕರೆಯುವ ಮೂಲಕ ಕೇಂದ್ರ ಪ್ರಸಾರ ಖಾತೆಯ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ.
2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ಮೋದಿ ನೇತೃತ್ವದ ಬಿಜೆಪಿ ಪಕ್ಷ ಐತಿಹಾಸಿಕ ಗೆಲುವನ್ನು ಪಡೆಯುವುದರ ಮೂಲಕ ಭಾರತದಲ್ಲಿ ವಂಶ ರಾಜಕಾರಣ ಅಂತ್ಯ ಕಂಡಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
Advertisement
ವಂಶ ರಾಜಕಾರಣದ ಬಗ್ಗೆ ರಾಹುಲ್ ಆಡಿದ ಮಾತುಗಳು ಅಸಂಬದ್ಧ ಎಂದು ಬಣ್ಣಿಸಿದ ಇರಾನಿ, ಭಾರತದಲ್ಲಿ ಪ್ರಜಾಪ್ರಭುತ್ವ ಅರ್ಹತೆಯಲ್ಲಿ ಆಧಾರದಲ್ಲಿ ನಡೆಯುತ್ತದೆ. ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಬಿಜೆಪಿ ಅಧ್ಯಕ್ಷ ಯಾವುದೇ ವಂಶ ರಾಜಕರಾಣದ ಹಿನ್ನೆಲೆಯಿಂದ ಬಂದವರಲ್ಲ ಎಂದರು.
Advertisement
ರಾಹುಲ್ ತಮ್ಮ ರಾಜಕೀಯ ನಾಯಕತ್ವದ ವಿಫಲತೆಯ ಕುರಿತು ಮಾತನಾಡಲು ಪ್ರಸಿದ್ಧ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡಿರುವುದು ವಿಪರ್ಯಾಸದ ಸಂಗತಿ. ರಾಹುಲ್ ತಮ್ಮ ಜೀವನದ ಬೆಳವಣಿಗೆಯಲ್ಲಿ ತನ್ನ ಸುತ್ತಮುತ್ತಲು ರಾಜವಂಶಸ್ಥ ವ್ಯಕ್ತಿಗಳನ್ನು ಹೊಂದಿರುವುದನ್ನು ಮರೆತಿದ್ದಾರೆ ಎಂದರು.
Advertisement
ಪ್ರಸ್ತುತ ಎರಡು ವಾರಗಳ ಕಾಲ ಅಮೇರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ವಿಶ್ವಪ್ರಸಿದ್ಧ ಕ್ಯಾಲಿಫೊರ್ನಿಯಾದ ಬರ್ಕ್ ಲೇ ವಿಶ್ವವಿದ್ಯಾಲಯದಲ್ಲಿ ‘ಪ್ರಚಲಿತ ಭಾರತ ಮತ್ತು ವಿಶ್ವದ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರದ ಮುಂದಿನ ಹಾದಿ’ ವಿಚಾರದ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.
Advertisement
The fact that Mr. Gandhi chose to belittle PM Modi is not surprising, in fact is expected : Smt. @smritiiranihttps://t.co/pcU8t7KJOz
— BJP (@BJP4India) September 12, 2017
Smt. @smritiirani is addressing a press conference at BJP HQ. Watch LIVE at https://t.co/jtwD1yPhm4 pic.twitter.com/PmHm8asd9E
— BJP (@BJP4India) September 12, 2017