– ರಾಬರಿ ಗ್ಯಾಂಗ್‌ನ ಮಾಸ್ಟರ್ ಮೈಂಡ್‌ನ ಮನೆ ಬುಲ್ಡೋಜರ್‌ನಿಂದ ನೆಲಸಮ
– ಬಂಧನದಿಂದ ದೇಶಾದ್ಯಂತ 65 ಪ್ರಕರಣಗಳು ಬೆಳಕಿಗೆ
ಬೆಂಗಳೂರು: ಸಿಲಿಕಾನ್ ಸಿಟಿಯ (Silicon City) ಪೊಲೀಸರು ಹುಡುಕಾಟ ನಡೆಸಿದ್ದ ರಾಬರಿ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಫಹೀಮ್‌ನನ್ನು ಉತ್ತರ ಪ್ರದೇಶದ ಮುರ್ದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಫಹೀಮ್ ಅಲಿಯಾಸ್ ಎಟಿಎಂ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಏರ್ ಇಂಡಿಯಾದೊಂದಿಗೆ ವಿಸ್ತಾರ ವಿಲೀನ – ದೋಹಾದಿಂದ ಮುಂಬೈಗೆ ಮೊದಲ ವಿಮಾನ ಹಾರಾಟ
ಇಡೀ ಭಾರತದಾದ್ಯಂತ ಮನೆಗಳ್ಳತನ ಮಾಡುತ್ತಿದ್ದ ಫಹೀಮ್‌ಗಾಗಿ ವಿವಿಧ ರಾಜ್ಯದ ಪೊಲೀಸರು ಹುಡುಕಾಟ ನಡೆಸಿದ್ದರು. ಜೈಲು ಸೇರಿದ್ದರೂ ಕೂಡ ಪೆರೋಲ್ ಮೇಲೆ ಹೊರ ಬಂದು ಮತ್ತೆ ಕಳ್ಳತನಕ್ಕೆ ಇಳಿದಿದ್ದ. ಏ.24 ರಂದು ಮುಸುಕುಧಾರಿಯಾಗಿ ಬಂದು ಸಹಕಾರನಗರದಲ್ಲಿರುವ ಡಾ.ಉಮಾಶಂಕರ್ ಮನೆಗೆ ನುಗ್ಗಿ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ. ಈ ವೇಳೆ ವೈದ್ಯನಿಗೆ ಗನ್ ತೋರಿಸಿ ಪರಾರಿಯಾಗಿದ್ದ.
ಈ ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿಗಳ ಹುಡುಕಾಟ ನಡೆಸಿದ್ದ ಪೊಲೀಸರು ಮೂವರನ್ನು ಬಂಧಿಸಿದ್ದರು. ಇನ್ನೂ ಎ1 ಆರೋಪಿಯಾಗಿರುವ ಫಹೀಮ್‌ನಿಗಾಗಿ ಬಲೆ ಬೀಸಿದ್ದರು.
ತಲೆಮರೆಸಿಕೊಂಡಿದ್ದ ಫಹೀಮ್‌ನನ್ನು ಸದ್ಯ ಉತ್ತರ ಪ್ರದೇಶದ (Uttar Pradesh) ಮುರ್ದಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ಆತನ ಮನೆಯನ್ನು ಬುಲ್ಡೋಜರ್‌ನಿಂದ ನೆಲಸಮಗೊಳಿಸಿದ್ದಾರೆ. ಈತನ ಬಂಧನದಿಂದ ದೇಶಾದ್ಯಂತ 65 ಪ್ರಕರಣಗಳು ಬೆಳಕಿಗೆ ಬಂದಿವೆ. ಬಾಡಿ ವಾರಂಟ್ ಮೇಲೆ ಕೊಡಿಗಹಳ್ಳಿ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.ಇದನ್ನೂ ಓದಿ: ರೆಬೆಲ್ ಸ್ಟಾರ್ ಮನೆಯಲ್ಲಿ ಸಂಭ್ರಮ – ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟ ಅವಿವಾ