ಬೆಂಗಳೂರು: 15ನೇ ಆವೃತ್ತಿ ಐಪಿಎಲ್‍ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕನ್ನಾಗಿ ಸೌತ್ ಆಫ್ರಿಕಾದ ಆಟಗಾರ ಫಾಫ್ ಡು ಪ್ಲೆಸಿಸ್‍ನ್ನು ಫ್ರಾಂಚೈಸ್ ನೇಮಕ ಮಾಡಿದೆ.
Advertisement
14ನೇ ಆವೃತ್ತಿ ಐಪಿಎಲ್ ಬಳಿಕ ಆರ್ಸಿಬಿ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದರು. ಆ ಬಳಿಕ ಇದೀಗ ಆರ್ಸಿಬಿ ಫ್ರಾಂಚೈಸ್ ಡು ಫ್ಲೆಸಿಸ್‍ನ್ನು ನಾಯಕನ್ನಾಗಿ ನೇಮಿಸಿ ಇಂದು ಅಧಿಕೃತವಾಗಿ ತಿಳಿಸಿದೆ. ಇದನ್ನೂ ಓದಿ: ಭಾರತ Vs ಶ್ರೀಲಂಕಾ ಟೆಸ್ಟ್ – ಅಪ್ಪು ಫೋಟೋ ಜೊತೆ ಚಿನ್ನಸ್ವಾಮಿಯಲ್ಲಿ ಕಾಣಿಸಿಕೊಂಡ ಸುದೀಪ್
Advertisement
Advertisement
ಪ್ಲೆಸಿಸ್ ಈ ಹಿಂದಿನ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರರಾಗಿದ್ದರು. ಆದರೆ ಆಟಗಾರರ ಮೆಗಾ ಹರಾಜಿನಲ್ಲಿ ಚೆನ್ನೈ ತಂಡ ಪ್ಲೆಸಿಸ್‍ರನ್ನು ಹರಾಜಿಗೆ ಬಿಟ್ಟು ಕೊಟ್ಟಿತ್ತು. ಆರ್ಸಿಬಿ ತಂಡ ಹರಾಜಿನಲ್ಲಿ 7 ಕೋಟಿ ರೂ. ನೀಡಿ ಪ್ಲೆಸಿಸ್‍ರನ್ನು ಖರೀದಿಸಿತ್ತು. ಆ ಬಳಿಕ ಇದೀಗ ನಾಯಕನ ಪಟ್ಟ ಕಟ್ಟಿದೆ. ಇದನ್ನೂ ಓದಿ: ಡೇ – ನೈಟ್ ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರು ಸಜ್ಜು – 2 ವರ್ಷಗಳ ಬಳಿಕ ಚಿನ್ನಸ್ವಾಮಿಯಲ್ಲಿ ಟೀಂ ಇಂಡಿಯಾ ಕಾದಾಟ
Advertisement
https://twitter.com/RCBTweets/status/1502603973848494087
ಪ್ಲೆಸಿಸ್ ಸೌತ್ ಆಫ್ರಿಕಾ ತಂಡವನ್ನು ಒಟ್ಟು 115 ಪಂದ್ಯಗಳಲ್ಲಿ ಮುನ್ನಡೆಸಿ 81 ಬಾರಿ ಗೆಲ್ಲಿಸಿದ್ದಾರೆ. 40 ಟಿ20 ಪಂದ್ಯಗಳಲ್ಲಿ 25 ಪಂದ್ಯ ಗೆದ್ದಿರುವ ರೆಕಾರ್ಡ್ ಪ್ಲೆಸಿಸ್ ನಾಯಕತ್ವದಲ್ಲಿದೆ. ಇದೀಗ ಆರ್ಸಿಬಿ ಕೊಹ್ಲಿ ಬಳಿಕ ಪ್ಲೆಸಿಸ್‍ರನ್ನು ನಾಯಕನ್ನಾಗಿ ಆಯ್ಕೆ ಮಾಡಿದೆ. ಈವರೆಗಿನ 14 ಆವೃತ್ತಿಗಳಲ್ಲಿ ಒಮ್ಮೆಯೂ ಕಪ್ ಗೆಲ್ಲಲು ಸಫಲವಾಗದ ಆರ್ಸಿಬಿ ಈ ಬಾರಿ ಪ್ಲೆಸಿಸ್ ನಾಯಕತ್ವದಲ್ಲಿ ಕಪ್ ಗೆಲ್ಲಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.