ಬೆಂಗಳೂರು: ಆರ್‌ಸಿಬಿ (RCB) ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಅವೇಶ್ ಖಾನ್ (Avesh Khan) ಮೈದಾನದಲ್ಲೇ ಹೆಲ್ಮೆಟ್ ಕಿತ್ತೆಸೆದು ಆಕ್ರಮಣಕಾರಿ ವರ್ತನೆ ತೋರಿದ್ದಕ್ಕಾಗಿ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ.
ಇದರೊಂದಿಗೆ ಆರ್‌ಸಿಬಿ ತಂಡ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಐಪಿಎಲ್ ಆಡಳಿತ ಮಂಡಳಿ ನಾಯಕ ಫಾಫ್ ಡುಪ್ಲೆಸಿಸ್‌ಗೆ (Faf du Plessis) ಭಾರೀ ದಂಡ ವಿಧಿಸಿದೆ. ಆರ್‌ಸಿಬಿ ತಂಡವು ನಿಗದಿತ ಸಮಯದಲ್ಲಿ ತಮ್ಮ ಕೋಟಾವನ್ನ ಪೂರ್ಣಗೊಳಿಸಲು ವಿಫಲವಾದ ಹಿನ್ನೆಲೆಯಲ್ಲಿ ಡುಪ್ಲೆಸಿಸ್‌ಗೆ 12 ಲಕ್ಷ ರೂ. ದಂಡ ವಿಧಿಸಿದೆ. ಇದನ್ನೂ ಓದಿ: IPL 2023: ಈ ಬಾರಿ ಹೊಸ ರೂಲ್ಸ್‌ಗಳೇನು ಗೊತ್ತಾ? – ಫ್ಯಾನ್ಸ್ ತಿಳಿಯಲೇಬೇಕಾದ ಸಂಗತಿಗಳಿವು
ಇನ್ನೂ ಲಕ್ನೋ ತಂಡದ ವೇಗಿ ಅವೇಶ್ ಖಾನ್ ಕೊನೆಯ ಎಸೆತವನ್ನು ಎದುರಿಸಲಾಗದೇ ಒಂದು ರನ್ ಬೈಸ್ ಕದ್ದು ಗೆಲುವು ಸಾಧಿಸಿದ ಬಳಿಕ ಅತ್ಯುತ್ಸಾಹದಲ್ಲಿ ತಮ್ಮ ಹೆಲ್ಮೆಟ್ ಅನ್ನು ಕಿತ್ತು ಮೈದಾನಕ್ಕೆ ಎಸೆತದರು. ಇದು ಆಕ್ರಮಣಕಾರಿ ವರ್ತನೆಯಾಗಿದ್ದು, ಐಪಿಎಲ್ ನೀತಿ ಸಂಹಿತೆ 2.2ರ ಪ್ರಕಾರ ಅಪರಾಧವಾಗಿದ್ದು, ರೆಫೆರಿಯಿಂದ ವಾಗ್ದಂಡನೆ ವಿಧಿಸಲಾಯಿತು. ಬಳಿಕ ಅವೇಶ್ ಖಾನ್ ಕ್ಷಮೆಕೋರಿದರು. ಇದನ್ನೂ ಓದಿ: IPL 2023: ಸೈಲೆಂಟಾಗಿರ್ಬೇಕ್ ಅಷ್ಟೇ – RCB ಫ್ಯಾನ್ಸ್‌ಗೆ ಗಂಭೀರ್ ವಾರ್ನಿಂಗ್
IPL ಹೊಸ ರೂಲ್ಸ್ ಹೇಳೋದೇನು?
ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಹಲವು ಹೊಸ ನಿಯಮಗಳನ್ನ (IPL NewRules) ತರಲಾಗಿದೆ. ಆ ನಿಯಮದ ಪ್ರಕಾರ ಐಪಿಎಲ್‌ನಲ್ಲಿ ಒಂದು ಪಂದ್ಯಕ್ಕೆ 3 ಗಂಟೆ ಸಮಯ ನಿಗದಿಯಾಗಿರುತ್ತೆ. ಹಾಗಾಗಿ ಪ್ರತಿ ತಂಡ 90 ನಿಮಿಷಗಳ ಒಳಗೆ 20 ಓವರ್ಗಳ ಕೋಟಾ ಮುಗಿಸಬೇಕಿರುತ್ತದೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದಲ್ಲಿ, ಪ್ರತಿ ಓವರ್‌ನಲ್ಲಿ ಹೆಚ್ಚುವರಿ ಆಟಗಾರರನ್ನ 30 ಯಾರ್ಡ್ ವೃತ್ತದೊಳಗೆ ಇರಿಸಬೇಕಾಗುತ್ತದೆ. ಜೊತೆಗೆ ದಂಡಕ್ಕೂ ಒಳಗಾಗಬೇಕಾಗುತ್ತದೆ ಎಂದು ಹೇಳಿದೆ.