ಚೆನ್ನೈ: ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು(Tamil Nadu) ಬಿಜೆಪಿ ಅಧ್ಯಕ್ಷ ಅಣ್ಣಾಮಲೈ(Annamalai) ಅವರು ಧರಿಸುತ್ತಿರುವ 5 ಲಕ್ಷ ರೂ. ಮೌಲ್ಯ ವಾಚ್ ಈಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಇಂಧನ ಖಾತೆಯ ಸಚಿವ ವಿ ಸೆಂಥಿಲ್ ಬಾಲಾಜಿ ಅವರು, “ನಮ್ಮ ಬಳಿ ನಾಲ್ಕು ಮೇಕೆಗಳಿವೆ ಎಂದು ಹೇಳುವ ರಾಜ್ಯ ಬಿಜೆಪಿ ಮುಖ್ಯಸ್ಥರು 5 ಲಕ್ಷ ರೂಪಾಯಿಗೆ ಬೆಲೆಬಾಳುವ ವಾಚ್ ಖರೀದಿಸಿದ್ದು ಹೇಗೆ” ಎಂದು ಪ್ರಶ್ನಿಸುವ ಮೂಲಕ ಚರ್ಚೆಯನ್ನು ಹುಟ್ಟುಹಾಕಿದ್ದರು.
Advertisement
Since @arivalayam wants to fight on the issue of corruption with me, I’m more than ready to do that.
The details of my Rafale watch, which was purchased in May 2021, along with its bill (before I became TN BJP President), All of my lifetime Income Tax statements, … (1/5)
— K.Annamalai (@annamalai_k) December 18, 2022
Advertisement
ಈ ಪ್ರಶ್ನೆಯನ್ನು ಅಣ್ಣಾಮಲೈ ನಿರ್ಲಕ್ಷಿಸಬಹುದು ಎಂದು ರಾಜ್ಯ ಬಿಜೆಪಿ ನಾಯಕರು ಊಹಿಸಿದ್ದರು. ಆದರೆ ತನ್ನ ವ್ಯಕ್ತಿತ್ವದ ಬಗ್ಗೆ ಆರೋಪ ಬಂದ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಂಡ ಅಣ್ಣಾಮಲೈ ಉತ್ತರ ನೀಡಿದ್ದಾರೆ.
Advertisement
ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದಿರುವ ಇವರು ನಾನು ಹಣವನ್ನು ಪಾವತಿ ಮಾಡಿಯೇ ಈ ವಾಚ್ ಖರೀದಿಸಿದ್ದೇನೆ. ನಾನು ದೇಶ ಭಕ್ತನಾಗಿದ್ದು ರಫೇಲ್ ಜೆಟ್ ಹಾರಿಸಲು ಸಾಧ್ಯವಿಲ್ಲದ ಕಾರಣ ಈ ವಾಚನ್ನು(Rafale watch) ಖರೀದಿಸಿದ್ದೇನೆ. ನಾನು ಸಾಯುವವರೆಗೂ ಈ ವಾಚ್ ನನ್ನ ಬಳಿಯೇ ಇರಲಿದೆ ಎಂದು ತಿರುಗೇಟು ನೀಡಿದ್ದಾರೆ.
Advertisement
Including the no of sheep & cows I have – will be released on the day I’ll be starting to travel across by foot in Tamil Nadu to meet our people who adore our Hon PM Thiru @narendramodi avl – which will be very soon. (3/5)
— K.Annamalai (@annamalai_k) December 18, 2022
ಅಣ್ಣಮಲೈ ಹೇಳಿದ್ದೇನು?
ಈ ರಫೇಲ್ ವಾಚನ್ನು ನಾನು ತಮಿಳುನಾಡು ಬಿಜೆಪಿ ಅಧ್ಯಕ್ಷನಾಗುವ ಮೊದಲು ಮೇ, 2021 ರಲ್ಲಿ ಖರೀದಿ ಮಾಡಿದ್ದೇನೆ. ಈ ವಾಚ್ ಖರೀದಿಯ ಬಿಲ್ ಜೊತೆಗೆ ನನ್ನ ಎಲ್ಲಾ ಜೀವಮಾನದ ಆದಾಯ ತೆರಿಗೆ ಪಾವತಿಗಳು, 10 ವರ್ಷದ ನನ್ನ ಎಲ್ಲಾ ಬ್ಯಾಂಕ್ ಬ್ಯಾಲೆನ್ಸ್ ಫೋಟೋಕಾಪಿಗಳು ತೋರಿಸುತ್ತೇನೆ. ಇದನ್ನೂ ಓದಿ: ಕೋವಿಡ್ ಮಾರ್ಗಸೂಚಿ ಅನುಸರಿಸಿ ಇಲ್ಲಾ ಜೋಡೋ ಯಾತ್ರೆ ನಿಲ್ಲಿಸಿ – ಕಾಂಗ್ರೆಸ್‌ಗೆ ಕೇಂದ್ರ ಸೂಚನೆ
If anybody can find 1 paise of property more than what I have declared anywhere in the world, then all of my property will be given to the Govt.
Now I leave it to my TN brothers & sisters to decide whether they want to seek this from the @arivalayam party leaders as well. (5/5)
— K.Annamalai (@annamalai_k) December 18, 2022
2011ರ ಆಗಸ್ಟ್‌ನಿಂದ ಐಪಿಎಸ್ ಅಧಿಕಾರಿಯಾಗಿ ರಾಜೀನಾಮೆ ನೀಡುವವರೆಗೂ ನನ್ನ ಎಲ್ಲಾ ಗಳಿಕೆಗಳು ಮತ್ತು ನಾನು ರಾಜೀನಾಮೆ ನೀಡುವವರೆಗೆ ಬ್ಯಾಂಕ್ ಬ್ಯಾಲೆನ್ಸ್ ವಿವರ, ಕುರಿ ಮತ್ತು ಹಸುಗಳ ಸಂಖ್ಯೆ ಸೇರಿದಂತೆ ನಾನು ಹೊಂದಿರುವ ಎಲ್ಲಾ ಸ್ಥಿರಾಸ್ತಿಗಳ ವಿವರವನ್ನು ತಮಿಳುನಾಡಿನಲ್ಲಿ ನಡೆಸಲಿರುವ ಪಾದಯಾತ್ರೆಯ ಆರಂಭದ ದಿನ ಬಿಡುಗಡೆ ಮಾಡುತ್ತೇನೆ. ಯಾರಾದರೂ ನನ್ನ ಆಸ್ತಿಗಿಂತ 1 ಪೈಸೆ ಆಸ್ತಿ ಹೆಚ್ಚಿದೆ ಎಂದು ಸಾಬೀತು ಪಡಿಸಿದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ನೀಡುತ್ತೇನೆ. ಅಷ್ಟೇ ಅಲ್ಲದೇ ಡಿಎಂಕೆ ನಾಯಕರು ಈ ರೀತಿಯಾಗಿ ತಮ್ಮ ಆಸ್ತಿಗಳ ವಿವರನ್ನು ಬಹಿರಂಗ ಪಡಿಸಲಿ ಎಂದು ಸವಾಲು ಎಸೆದಿದ್ದಾರೆ.
ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ದುಬಾರಿ ವಾಚ್ ಧರಿಸುತ್ತಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ದುಬಾರಿ ವಾಚ್ ಧರಿಸುತ್ತಾರೆ ಎಂಬ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಈಗ ಸ್ಟಾಲಿನ್ ಅವರ ಪುತ್ರ ಉದಯನಿಧಿ 14 ಲಕ್ಷ ರೂಪಾಯಿ ಮೌಲ್ಯದ ವಾಚ್ ಧರಿಸಿರುವುದು ಕಂಡುಬಂದಿದೆ ಎಂದು ಬಿಜೆಪಿ ಮುಖಂಡ ಎಸ್.ಜಿ.ಸೂರ್ಯ ಆರೋಪಿಸಿದ್ದಾರೆ. ಅವರಿಗೆ ಹಣ ಎಲ್ಲಿಂದ ಬಂತು? ಅವರ ವೃತ್ತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.