ಹಾಸನ: ಜಿಲ್ಲೆಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಇದಕ್ಕೂ ಮೊದಲು ವಾಸ್ತು, ಶಾಸ್ತ್ರ ಕೇಳದೆ ಒಂದಡಿಯನ್ನೂ ಇಡದ ಸಚಿವ ಹೆಚ್.ಡಿ ರೇವಣ್ಣಗೆ ಇಂದು ಶಾಕ್ ಆಗಿತ್ತು.
ಹೌದು, ಪ್ರಜ್ವಲ್ ನಾಮಪತ್ರಕ್ಕೂ ಮುನ್ನ ಅಂದ್ರೆ ಇಂದು ಬೆಳಗ್ಗಿನಿಂದಲೇ ಸಚಿವ ಎಚ್.ಡಿ ರೇವಣ್ಣ ಕುಟುಂಬ ಪೂಜೆ – ಪುನಸ್ಕಾರಗಳಲ್ಲಿ ತೊಡಗಿಕೊಂಡಿತ್ತು. ಪುತ್ರನ ನಾಮಪತ್ರದಲ್ಲೂ ವಾಸ್ತು ನೋಡಿ ಕ್ಷೇತ್ರ ಭೇಟಿ ಮಾಡುತ್ತಿದ್ದ ರೇವಣ್ಣ ಸಿಟ್ಟು ಮಾಡಿಕೊಂಡರು.
ಲಕ್ಷ್ಮೀನರಸಿಂಹಸ್ವಾಮಿ ದೇಗುಲದಲ್ಲಿ ನಡೆದ ಮೊದಲ ಪೂಜೆಯಲ್ಲಿ ಮಂಗಳಾರತಿ ಸರಿ ಆಗಿಲ್ಲ ಎಂದು ಮತ್ತೆ ದೇವಸ್ಥಾನಕ್ಕೆ ಹೋಗಿ ರೇವಣ್ಣ ಮತ್ತೊಮ್ಮೆ ಮಂಗಳಾರತಿ ಪಡೆದಿದ್ದಾರೆ. ಇತ್ತ ಹೊಳೆನರಸೀಪುರ ಲಕ್ಷ್ಮಿ ನರಸಿಂಹ ದೇಗುಲದಲ್ಲಿ ಎರಡೆರಡು ಬಾರಿ ರೇವಣ್ಣ, ಈಡುಗಾಯಿ ಒಡೆದಿದ್ದಾರೆ. ಪ್ರಜ್ವಲ್ ರೇವಣ್ಣ ಮೊದಲ ಪ್ರಯತ್ನದಲ್ಲಿ ಈಡುಗಾಯಿ ಒಡೆದರು. ರೇವಣ್ಣ ಮೊದಲ ಪ್ರಯತ್ನದಲ್ಲಿ ಈಡುಗಾಯಿ ಒಡೆದಿರಲಿಲ್ಲ. ಹೀಗಾಗಿ ಎರಡನೇ ಪ್ರಯತ್ನದಲ್ಲಿ ಈಡುಗಾಯಿ ಒಡೆದಿದ್ದಾರೆ.
ಇಂದು ಬೆಳಗ್ಗೆಯೇ 5.30ಕ್ಕೆ ಹೊಳೆನರಸೀಪುರದಲ್ಲಿರುವ ಮನೆಯಲ್ಲಿ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಲಕ್ಷ್ಮಿನರಸಿಂಹ ದೇಗಲಕ್ಕೆ ತೆರಳಿದ್ದರು.