ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತ್‍ನಲ್ಲಿ ರೋರೋ ಸಮುದ್ರಯಾನಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗುಜರಾತ್ ರಾಜ್ಯ ಜನತೆಗೆ ದೀಪಾವಳಿಯ ಉಡುಗೊರೆಯಾಗಿದ್ದು, ದೇಶಕ್ಕೆ ಮಹತ್ವ ಯೋಜನೆಯಾಗಿದೆ ಎಂದು ಹೇಳಿದರು.
ಗುಜರಾತ್‍ಗೆ ಅಕ್ಟೋಬರ್ ತಿಂಗಳಿನಲ್ಲಿ ಪ್ರಧಾನಿ ಮೋದಿಯವರ ಮೂರನೇ ಭೇಟಿ ಇದಾಗಿದ್ದು, 1,140 ಕೋಟಿ ರೂ. ಮೌಲ್ಯದ ಹೊಸ ಯೋಜನೆಗಳಿಗೆ ಚಾಲನೆಯನ್ನು ನೀಡಿದರು. ಇದರಲ್ಲಿ ಪ್ರಮುಖವಾಗಿ 600 ಕೋಟಿ ರೂ. ಮೌಲ್ಯದ ರೋರೋ ಸಮುದ್ರಯಾನ ದೋಣಿ ಸೇವೆಯನ್ನು ಘೋಗಾ ಮತ್ತು ದಹೇಜ್ ನಗರಗಳ ಉದ್ಘಾಟಿಸಿದರು.
Advertisement
Advertisement
ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಅಭಿವೃದ್ಧಿ ಯೋಜನೆಯಗಳನ್ನು ಕೈಗೊಳ್ಳಲು ತನಗೆ ಕೇಂದ್ರ ಸರ್ಕಾರದಿಂದ ಬೆಂಬಲ ದೊರೆತಿರಲಿಲ್ಲ ಆದರೆ ಕಳೆದ ಮೂರು ವರ್ಷಗಳಿಂದ ಗುಜರಾತ್ ಅಭಿವೃದ್ಧಿಗೆ ಬೇಕಾದ ಹಲವು ಯೋಜನೆಯಗಳನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು.
Advertisement
ಭಾರತದ ಮೊದಲ ಯೋಜನೆ: ಭಾರತದಲ್ಲಿ ಮೊದಲ ಬಾರಿಗೆ ಇಂತಹ ಯೋಜನೆಯನ್ನು ಆರಂಭಿಸಲಾಗಿದ್ದು, ಆಧುನಿಕ ತಂತ್ರಜ್ಞಾನದಿಂದ ಹಡಗನ್ನು ನಿರ್ಮಾಣ ಮಾಡಲಾಗಿದೆ. 1960ರಲ್ಲಿ ಈ ಯೋಜನೆಯ ಆರಂಭಕ್ಕೆ ಚಿಂತನೆಯನ್ನು ಕೈಗೊಳ್ಳಲಾಯಿತು ಆದರೆ 2012ರಲ್ಲಿ ಯೋಜನೆಯ ಆರಂಭಕ್ಕೆ ಮೋದಿ ಶಂಕುಸ್ಥಾಪನೆಯನ್ನು ಮಾಡಿದ್ದರು. ಈ ಯೋಜನೆಯು ಮೋದಿಯವರ ಕನಸಿನ ಯೋಜನೆಯಾಗಿದೆ.
Advertisement
ಎಷ್ಟು ಸಮಯ ಉಳಿಯುತ್ತೆ? ರೋರೋ ಸಮುದ್ರಯಾನ ಯೋಜನೆ ಆರಂಭಕ್ಕೂ ಗುಜರಾತ್‍ನ ಭವನಗರ್ ಜಿಲ್ಲೆ ಘೋಗಾ ನಗರದಿಂದ ದಹೇಜ್ ನಗರಗಳ ಮಧ್ಯೆ ಸಂಪರ್ಕ ಸಾಧಸಿಲು 310 ಕಿ.ಮೀ ದೂರದ ರಸ್ತೆ ಮಾರ್ಗವನ್ನು ಕ್ರಮಿಸಬೇಕಿತ್ತು. ಆದರೆ ಪ್ರಸ್ತುತ ರೋರೋ ಹಡಗಿನ ಮೂಲಕ ಕೇವಲ 30 ಕಿ.ಮೀ ದೂರವನ್ನು ಹೊಂದಿದೆ. ಇದರಿಂದ ಪ್ರಯಾಣಿಕರು ಸುಮಾರು 8 ಗಂಟೆಯ ಅವಧಿಯ ಬದಲು ಒಂದೇ ಗಂಟೆಯಲ್ಲಿ ತಮ್ಮ ಪ್ರಯಾಣ ಮಾಡಿ ಮತ್ತೊಂದು
ಎಷ್ಟು ಜನ ಪ್ರಯಾಣಿಸಬಹುದು?
ಈ ರೋರೋ ಹಡಗಿನಲ್ಲಿ ಒಂದೇ ಬಾರಿಗೆ 250 ಪ್ರಯಾಣಿಕರು ಪ್ರಯಾಣಿಸಬಹುದು. ಅಷ್ಟೇ ಅಲ್ಲದೇ ಕಾರು, ಬಸ್, ಟ್ರಕ್ ಸೇರಿದಂತೆ ಒಟ್ಟು 100 ವಾಹನಗಳನ್ನು ಸಾಗಿಸಬಹುದಾಗಿದೆ. ಯೋಜನೆಯ ಆರಂಭಿಕ ಹಂತವಾಗಿ ಕೇವಲ ಪ್ರಯಾಣಿಕರನನ್ನು ಮಾತ್ರ ರೋರೋ ದೋಣಿಯಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ.
Ghogha-Dahej Ferry Service will boost connectivity and infrastructure in Gujarat. pic.twitter.com/Hed5BoaT9V
— Narendra Modi (@narendramodi) October 21, 2017
A glimpse into PM @narendramodi sir's dream project #GoghaDahej @shipmin_india @mansukhmandviya @nitin_gadkari @VibrantGujarat @CMOGuj pic.twitter.com/40KRv5WbcK
— GMB_Ports (@Ports_GMB) October 19, 2017
PM @narendramodi boarding the Ghogha-Dahej Ro-Ro Ferry Service at Ghogha Sea Ferry Point, Gujarat pic.twitter.com/feuVPWoua6
— PIB India (@PIB_India) October 22, 2017
PM @narendramodi being presented the first boarding pass of Ghogha-Dahej Ro-Ro Ferry Service at Ghogha Sea Ferry Point, Gujarat pic.twitter.com/wkeaXDBh5l
— PIB India (@PIB_India) October 22, 2017
PM @narendramodi performing 'Poojan' at Ghogha Sea Ferry Point to mark the inauguration of Ghogha-Dahej Ro-Ro Ferry Service in Gujarat pic.twitter.com/JadfhtgCEK
— PIB India (@PIB_India) October 22, 2017