-ರಾಮದಾಸ್, ವಿ.ಹೆಚ್.ರಾಜೀವ್ ಬೆಂಬಲಿಗರ ಫೇಸ್ ಬುಕ್ ವಾರ್
ಮೈಸೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷದ ನಾಯಕರುಗಳು ಒಬ್ಬರನೊಬ್ಬರನ್ನು ನಿಂದಿಸುವುದು ಮತ್ತು ಆರೋಪಗಳನ್ನು ಮಾಡುವುದು ಸಹಜವಾಗಿರುತ್ತದೆ. ಆದರೆ ಬಿಜೆಪಿಯ ಇಬ್ಬರು ಮುಖಂಡರ ಬೆಂಬಲಿಗರಲ್ಲಿ ಫೇಸ್‍ಬುಕ್ ವಾರ್ ಆರಂಭಗೊಂಡಿದೆ.
Advertisement
ಕೆ.ಆರ್. ಕ್ಷೇತ್ರದ ಬಿಜೆಪಿ ಮುಖಂಡರಾದ ರಾಮದಾಸ್ ಹಾಗೂ ವಿ.ಹೆಚ್.ರಾಜೀವ್ ಬೆಂಬಲಿಗರ ಫೇಸ್ ಬುಕ್ ವಾರ್ ಜೋರಾಗಿದೆ. ಕೆ.ಆರ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಾಜೀವ್ ಹಾಗೂ ಇನ್ನೊಬ್ಬ ಟಿಕೆಟ್ ಆಕಾಂಕ್ಷಿಯಾಗಿರುವ ಫಣೀಶ್ ಅವರನ್ನು ಮಾಜಿ ಸಚಿವ ರಾಮದಾಸ್ ಅವರ ಬೆಂಬಲಿಗರಾಗಿರುವ ನಾಗರಾಜ್ ಪೈ ಎಂಬವರು ಫೇಸ್ ಬುಕ್ ಪೇಜ್ ನಲ್ಲಿ ನಿಂದಿಸಿದ್ದಾರೆ.
Advertisement
Advertisement
ಎಂಎಲ್‍ಎ ಆಗೋಕು ಯೋಗ್ಯತೆ ಬೇಕು. ಟೀ ಪುಡಿ ಮಾರೋರೆಲ್ಲ ಶಾಸಕರು ಆಗೋಕ್ಕೆ ಆಗಲ್ಲ. ಗಣಪತಿ ಹಬ್ಬಕ್ಕೆ ದುಡ್ಡು ಕೊಟ್ಟು ಫೋಟೋ ತೆಗೆಸಿಕೊಳ್ಳೊರು ಅಭ್ಯರ್ಥಿ ಅಂತೆ ಎಂದು ಬಿಜೆಪಿ ಮುಖಂಡರನ್ನು ನಾಗರಾಜ್ ಪೈ ಟೀಕಿಸಿದ್ದಾರೆ. ನಾಗರಾಜ್ ಪೈ ಪೋಸ್ಟ್ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ತೋರಿಸುತ್ತಿದೆ.
Advertisement
ಇನ್ನೂ ಈ ಪೋಸ್ಟ್ ಗೆ ಯಾವಾಗ ಟೀಕೆ ಶುರುವಾದವೋ ತಕ್ಷಣ ಎಚ್ಚೆತ್ತು ನಾಗರಾಜ್ ಪೈ ತಮ್ಮ ಪೋಸ್ಟ್ ಅಳಿಸಿ ಹಾಕಿದ್ದಾರೆ. ನಾಗರಾಜ್ ಪೈ ವಿರುದ್ದ ಬಿಜೆಪಿ ಮುಖಂಡ ರಾಜೀವ್ ಕೆಂಡಾಮಂಡಲರಾಗಿದ್ದಾರೆ ಎಂದು ಹೇಳಲಾಗಿದೆ.