Connect with us

ಜಾಸ್ತಿ ಪೊಗರು ಮಾಡ್ಬೇಡ.. ಬೀದಿ ಹೆಣ ಆಗ್ತಿಯಾ – ಹಿಂದೂ ಯುವಕನಿಗೆ ಫೇಸ್‍ಬುಕ್ ಥ್ರೆಟ್

ಜಾಸ್ತಿ ಪೊಗರು ಮಾಡ್ಬೇಡ.. ಬೀದಿ ಹೆಣ ಆಗ್ತಿಯಾ – ಹಿಂದೂ ಯುವಕನಿಗೆ ಫೇಸ್‍ಬುಕ್ ಥ್ರೆಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಹತ್ಯೆ ನಡೆದ ಬೆನ್ನಲ್ಲೇ ಮತ್ತೊಂದು ಕೊಲೆಗೆ ಫೇಸ್ಬುಕ್ ಮೂಲಕ ಬಹಿರಂಗ ಬೆದರಿಕೆ ಹಾಕಲಾಗಿದೆ.

`ಟ್ರೂ ಮೀಡಿಯಾ ನೆಟ್ವರ್ಕ್’ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಸುಬ್ಬು ಎಂಬ ಯವಕನಿಗೆ ಈ ಬೆದರಿಕೆ ಹಾಕಲಾಗಿದೆ. ತೊಡೆಯಲ್ಲಿ ಕಾಲು ಕಿಲೊ ಮಾಂಸ ಇಲ್ಲ. ಪೊಗರು ಜಾಸ್ತಿ ಮಾಡ್ಬೇಡ. ನೀನು ಎಲ್ಲಾದ್ರು ಬೀದಿ ಹೆಣವಾಗ್ತೀಯ ಅಷ್ಟೇ. ಮರ್ಯಾದಿಯಾಗಿ ಕುಟುಂಬ ಸಾಕಲು ಕಲಿ. ಮತ್ತೆ ಮತ್ತೆ ಜಿಹಾದಿ ಜಿಹಾದಿ ಅಂತ ಬೊಬ್ಬೆ ಹೊಡೆದರೆ ತಾಳ್ಮೆ ಕಳೆದುಕೊಂಡು ನಿನ್ನ ಬೀದಿ ಹೆಣ ಮಾಡಿ ಬಿಸಾಕ್ತಾರೆ ಅಷ್ಟೇ ಎಂದು ಮತ್ತೊಬ್ಬ ಹಿಂದು ಕಾರ್ಯಕರ್ತನ ಹತ್ಯೆ ಮಾಡುವುದಾಗಿ ಬಹಿರಂಗ ಎಚ್ಚರಿಕೆ ನೀಡಿದ್ದು ಜಿಲ್ಲೆಯ ಜನರಲ್ಲಿ ಭಯದ ವಾತಾವರಣವನ್ನು ಉಂಟುಮಾಡಿದೆ.

ಸಾಮಾಜಿಕ ಜಾಲತಾಣಗಳ ಅತಿರೇಕದ ವರ್ತನೆ ಬಗ್ಗೆ ಪೊಲೀಸರು ಗಮನಿಸಬೇಕಾಗಿದೆ. ದೀಪಕ್ ರಾವ್ ವಿರುದ್ಧವೂ ಹತ್ಯೆಗೆ ಮೊದಲೇ ಬೆದರಿಕೆ ಹಾಕಿದ್ದ ಅಂಶ ಬಯಲಾಗಿದೆ. ಇದೀಗ ಆ ವಿಚಾರದಲ್ಲಿ ವಿರುದ್ಧ ಕೋಮಿನವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಕಾದಾಡುತ್ತಿದ್ದಾರೆ.

Advertisement
Advertisement