ವಾಷಿಂಗ್ಟನ್: ಉದ್ಯಮಿಯೊಬ್ಬ ತಾನೂ ಫೇಸ್‍ಬುಕ್ ತೆರೆದರೆ ಕೆನ್ನೆಗೆ ಬಾರಿಸಲು ಮಹಿಳೆಯನ್ನು ನೇಮಿಸಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಜಗತ್ತಿನಾದ್ಯಂತ 2.85 ಶತಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿರುವ ಫೇಸ್‍ಬುಕ್ ಜನಪ್ರಿಯ ಜಾಲತಾಣವಾಗಿದೆ. ಆದರೆ ಈ ಭಾರತೀಯ ಅಮೆರಿಕನ್ ತಾನು ಪತ್ರಿ ಬಾರಿ ಫೇಸ್‍ಬುಕ್ ತೆರೆದಾಗ ತಮ್ಮ ಕೆನ್ನೆಗೆ ಬಾರಿಸಲು ಮಹಿಳೆಯನ್ನು ನೇಮಿಕೊಂಡಿದ್ದಾರೆ.
Advertisement
Advertisement
ಪ್ಲಾವೋಕ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಮನೀಶ್ ಸೇಠಿ ತಾವು ಕೆಲಸ ಮಾಡುವಾಗ ಅಪ್ಪಿತಪ್ಪಿ ಫೇಸ್‍ಬುಕ್ ತೆರೆದರೆ ಕೂಡಲೇ ತಮ್ಮ ಕೆನ್ನೆಗೆ ಬಾರಿಸಲು ಕಾರಾ ಎನ್ನುವ ಹೆಸರಿನ ಮಹಿಳೆಯನ್ನು ನೇಮಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಲು ಆದೇಶಿದ ಪಾಕ್ ನ್ಯಾಯಮೂರ್ತಿ
Advertisement
Advertisement
ಕರಾಗೆ ಈ ಕೆಲಸಕ್ಕೆ ಪ್ರತಿ ತಿಂಗಳು (8 ಡಾಲರ್)594.78 ರೂಪಾಯಿ ಸಂಬಳ ನಿಗದಿ ಮಾಡಲಾಗಿದೆ. ಇದರಿಂದ ತನ್ನ ಉತ್ಪಾದಕತೆಯ ಶೇ.98 ರಷ್ಟು ಹೆಚ್ಚಿದೆ ಎಂದು ಮನೀಶ್ ಹೇಳಿದ್ದಾರೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೂಡಾ ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಾಲಕ ಮದ್ಯಪಾನ ಮಾಡಿದ್ರೆ ಕಾರು ಚಲಿಸಲ್ಲ-ಅಮೆರಿಕಾ ಹೊಸ ವ್ಯವಸ್ಥೆ