ಡೆಹ್ರಾಡೂನ್: ಫೇಸ್‌ಬುಕ್‌ನಲ್ಲಿ (FaceBook) ಪರಿಚಯವಾದ ಯುವಕನೊಬ್ಬ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ (Marriage) ಭರವಸೆ ನೀಡಿ, ಆಕೆಯಿಂದ ಖಾಸಗಿ ವೀಡಿಯೋಗಳನ್ನು (Private Video) ಕಳಿಸಿಕೊಂಡ ನಂತರ ತನ್ನ ಸ್ನೇಹಿತರೊಂದಿಗೂ ದೈಹಿಕ ಸಂಪರ್ಕ ಬೆಳೆಸುವಂತೆ ಕಿರುಕುಳ ನೀಡಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ನಡೆದಿದೆ.
Advertisement
ಯುವಕ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಹುಡುಗಿ ನೀಡಿದ ದೂರಿನ ಮೇರೆಗೆ ದಿನೇಶಪುರ ಪೊಲೀಸ್ (Uttarakhand Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಐಪಿಸಿ ಸೆಕ್ಷನ್ ((IPC Section) 376 (ಬಲವಂತದ ಸಂಭೋಗ), 304 (ಕೊಲೆ ಎಂದು ಪರಿಗಣಿಸಲಾದ ಆಪರಾಧಿಕ ಮಾನವ ಹತ್ಯೆ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement
Advertisement
ಏನಿದು ಫೇಸ್‌ಬುಕ್ ಪ್ರೇಮ ಪರಿಚಯ?
3 ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ (FaceBook) ಯುವಕ ಹಾಗೂ ಹುಡುಗಿಯ ಪರಿಚಯವಾಗಿದೆ. ನಂತರ ಸ್ನೇಹ ಪ್ರೀತಿಗೆ ತಿರುಗಿದೆ. ಇದೇ ವೇಳೆ ಯುವಕ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ, ಆಕೆ ಸ್ನಾನ ಗೃಹದಲ್ಲಿ ನಿಂತು ಖಾಸಗಿ ವೀಡಿಯೋ ಹಾಗೂ ಫೋಟೋಗಳನ್ನು ಕಳುಹಿಸುವಂತೆ ಕೇಳಿಕೊಂಡಿದ್ದಾನೆ. ಆಕೆ ಎಂಎಂಎಸ್ (MMS) ನಲ್ಲಿ ಫೋಟೋ ವೀಡಿಯೋಗಳನ್ನು ಕಳುಹಿಸಿದ ನಂತರ ಬ್ಲಾಕ್ ಮೇಲ್ (Blackmail) ಮಾಡಲು ಶುರು ಮಾಡಿದ್ದಾನೆ. ಅಲ್ಲದೇ ಮದುವೆ (Marriage) ಪ್ರಸ್ತಾಪ ನಿರಾಕರಿಸಿ ತನ್ನ ಸ್ನೇಹಿತರ ಜೊತೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಡ ಹೇರಲು ಮುಂದಾಗಿದ್ದಾನೆ. ಇದಕ್ಕೆ ಹುಡುಗಿ ಒಪ್ಪದೇ ಇದ್ದರಿಂದ ಆಕೆಯ ಖಾಸಗಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಯಬಿಟ್ಟಿದ್ದಾನೆ. ಇದರಿಂದ ಮನನೊಂದ ಹುಡುಗಿ ಪೋಷಕರಿಗೆ ವಿಷಯ ತಿಳಿಸಿ ದೂರು ದಾಖಲಿಸಿದ್ದಾಳೆ.
Advertisement
ಉತ್ತರಾಖಂಡದ ಉಧಮ್ ಸಿಂಗ್ ನಗರದ ದಿನೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.