ವಾಷಿಂಗ್ಟನ್: ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‍ಬರ್ಗ್ ಸಹೋದರಿ ರಾಂಡಿ ಜುಕರ್‍ಬರ್ಗ್ ಇತ್ತೀಚೆಗೆ ಅಲಾಸ್ಕಾ ಏರ್‍ಲೈನ್ಸ್ ವಿಮಾನದಲ್ಲಿ ಅಮೆರಿಕದ ಲಾಸ್ ಏಂಜಲೀಸ್ ನಿಂದ ಮೆಕ್ಸಿಕೊಗೆ ಪ್ರಯಾಣಿಸುವ ವೇಳೆ ಸಹಪ್ರಯಾಣಿಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪ ಮಾಡಿದ್ದಾರೆ.
Advertisement
ಈ ಕುರಿತು ಸ್ವತಃ ಮಾರ್ಕ್ ಸಹೋದರಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬುಧವಾರ ಮಾಹಿತಿ ನೀಡಿದ್ದಾರೆ. ಪ್ರಯಾಣದ ವೇಳೆ ಪಕ್ಕದಲ್ಲಿ ಕುಳಿತ್ತಿದ್ದ ಸಹ ಪ್ರಯಾಣಿಕ ಮಹಿಳೆಯರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡುತ್ತಿದ್ದ. ಸಹೋದ್ಯೋಗಿಯೊಂದಿಗೆ ಪ್ರಯಾಣಿಸುವಾಗ ನೀವು ಅವರ ಬಗ್ಗೆ ಆಸೆಪಟ್ಟಿದ್ದೀರಾ ಎಂದೆಲ್ಲಾ ಕೇಳಿದ. ಬೇರೆ ಹುಡುಗಿಯರ ಅಂಗಾಂಗದ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಿದ್ದ. ಈ ಕುರಿತು ವಿಮಾನದಲ್ಲಿನ ಸಿಬ್ಬಂದಿಗಳಿಗೆ ಮಾಹಿತಿ ನೀಡಿದೆ. ಆದರೆ ಆತ ಖಾಯಂ ಪ್ರಯಾಣಿಕ ಎಂದು ಆತನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಆತನ ಪಕ್ಕ ಕೂರಲು ಇಷ್ಟವಿಲ್ಲ ಎಂದಿದ್ದಕ್ಕೆ ಹಿಂದಿನ ಸೀಟ್‍ನಲ್ಲಿ ಕೂರುವಂತೆ ಹೇಳಿದರು ಎಂದು ರಾಂಡಿ ಜುಕರ್‍ಬರ್ಗ್ ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ವಿಮಾನಯಾನ ಸಂಸ್ಥೆಯ ಕಾರ್ಯನಿರ್ವಹಕರಿಗೆ ತನಿಖೆ ನಡೆಸುವಂತೆ ಬರೆದಿರುವ ಪತ್ರವನ್ನೂ ಹಾಕಿದ್ದಾರೆ.
Advertisement
ಅಲಾಸ್ಕಾ ಏರ್‍ಲೈನ್ಸ್ ಈ ಘಟನೆಯ ಬಗ್ಗೆ ಮಾಹಿತಿ ಪಡೆದು ರಾಂಡಿ ಅವರನ್ನು ಸಂಪರ್ಕಿಸಿದ್ದಾರೆ. ತನಿಖೆ ಮುಗಿಯುವವರೆಗೆ ಆರೋಪಿಯ ವಿಮಾನ ಪ್ರಯಾಣ ಹಕ್ಕನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಹೇಳಿದ್ರು. ಮೊದಲಿಗೆ ಈ ರೀತಿ ನಡೆಯಲೇಬಾರದಿತ್ತು. ಇದನ್ನ ಗಂಭೀರವಾಗಿ ಪರಿಗಣಿಸಿರುವುದಕ್ಕೆ ಧನ್ಯವಾದ ಎಂದು ರಾಂಡಿ ಹೇಳಿದ್ದಾರೆ.
Advertisement
Advertisement
https://www.facebook.com/photo.php?fbid=10104252140827491&set=a.616059824011.2209273.4617&type=3&theater