ವಾಷಿಂಗ್ಟನ್: ಈ ಹಿಂದೆ ಫೇಸ್‌ಬುಕ್ ಎಂದು ಕರೆಯಲಾಗುತ್ತಿದ್ದ ಮೆಟಾ ಕಂಪನಿಯ ಉದ್ಯೋಗಿಗಳು ಇನ್ನು ಮುಂದೆ ಕೇವಲ ಉದ್ಯೋಗಿಗಳಲ್ಲ. ಅವರನ್ನು ಇನ್ನು ಮೆಟಾ ಮೇಟ್ಸ್ ಎಂದು ಕರೆಯಲಾಗುತ್ತದೆ.
ಹೌದು, ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ತನ್ನ ಉದ್ಯೋಗಿಗಳನ್ನು ಮೆಟಾಮೇಟ್ಸ್ ಎನ್ನಲು ಬಯಸುತ್ತಾರೆ ಎಂದಿದ್ದಾರೆ. ಇದರೊಂದಿಗೆ ಕಂಪನಿಯ ಹೊಸ ಧ್ಯೇಯವಾಕ್ಯವನ್ನೂ ತಿಳಿಸಿದ್ದಾರೆ. ಮೆಟಾ, ಮೆಟಾಮೇಟ್ಸ್, ಮೀ ಎಂಬುದು ಕಂಪನಿಯ ಹೊಸ ಧ್ಯೇಯವಾಕ್ಯವಾಗಲಿದೆ. ಇದನ್ನೂ ಓದಿ: ವಾಟ್ಸಪ್‌ಗೂ ಬರಲಿದೆ ಫೇಸ್‌ಬುಕ್‌ನಂತಹ ಕವರ್ ಫೋಟೋ ಫೀಚರ್
Advertisement
Advertisement
ಮೆಟಾ, ಮೆಟಾಮೇಟ್ಸ್, ಮಿ ಎಂದರೆ ಕಂಪನಿ ಹಾಗೂ ಮಿಷನ್‌ನ ಉತ್ತಮ ಮೇಲ್ವಿಚಾರಕರು. ಇದು ನಮ್ಮ ಸಾಮೂಹಿಕ ಯಶಸ್ಸಿಗೆ, ಕಂಪನಿ ಸದಸ್ಯರ ಜವಾಬ್ದಾರಿಯುತ ಕಾರ್ಯಕ್ಕೆ, ಕಾಳಜಿಗೆ ಈ ಹೆಸರು ನೀಡಲಾಗುತ್ತಿದೆ ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ. ಇದನ್ನೂ ಓದಿ: ಮಸ್ಕ್‌ಗೆ ಅಂಬಾನಿ ಸೆಡ್ಡು – ಜಿಯೋದಿಂದ ಬರಲಿದೆ ಸ್ಯಾಟಲೈಟ್ ಇಂಟರ್‌ನೆಟ್
Advertisement
ಮೆಟಾ ಇನ್ನು ಮುಂದೆ ತನ್ನ ಉದ್ಯೋಗಿಗಳನ್ನು ಉಲ್ಲೇಖಿಸುವಾಗ ಮೆಟಾಮೇಟ್ಸ್ ಎಂದು ಕರೆಯಲಿದೆ. ಈ ರೀತಿ ವಿಭಿನ್ನ ಹೆಸರಿನಿಂದ ಉದ್ಯೋಗಿಗಳನ್ನು ಕರೆಯುತ್ತಿರುವುದು ಫೇಸ್‌ಬುಕ್ ಮೊದಲ ಟೆಕ್ ಕಂಪನಿಯಲ್ಲ. ಗೂಗಲ್ ತನ್ನ ಉದ್ಯೋಗಿಗಳನ್ನು ಗೂಗ್ಲರ್ಸ್ ಎಂದು ಕರೆದರೆ ಮೈಕ್ರೋಸಾಫ್ಟ್ ತನ್ನ ಉದ್ಯೋಗಿಗಳನ್ನು ಮೈಕ್ರೋಸಾಟೀಸ್ ಎಂದು ಕರೆಯುತ್ತದೆ.