ನವದೆಹಲಿ: ಗಣರಾಜ್ಯೋತ್ಸವದ ವೇಳೆ ವಿಧ್ವಂಸಕ ಕೃತ್ಯ ನಡೆಸಲು ಉಗ್ರಗಾಮಿ ಸಂಘಟನೆಗಳು ಪ್ಲಾನ್ ಮಾಡಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ದೆಹಲಿಯಲ್ಲಿ ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಲಾಗಿದೆ.
ಜೈಶ್ ಈ ಮೊಹಮ್ಮದ್ ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಇಬ್ಬರು ಶಂಕಿತರನ್ನು ಭದ್ರತಾ ಪಡೆ ಬಂಧಿಸಿದೆ. ಗಣರಾಜ್ಯೋತ್ಸವ ದಿನ ಇಬ್ಬರು ವಿಧ್ವಂಸಕ ಕೃತ್ಯ ನಡೆಸಲು ಪ್ಲಾನ್ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಟೈಟ್ ಸೆಕ್ಯೂರಿಟಿಯನ್ನು ಹಾಕಲಾಗಿದೆ.
Advertisement
ಬಂಧನಕ್ಕೆ ಒಳಗಾದವರ ವಿಚಾರಣೆ ವೇಳೆ ಲಜ್‍ಪತ್ ನಗರ್ ಮಾರುಕಟ್ಟೆ, ಹಜ್ ಮಂದಿರ, ತುರ್ಕ್‍ಮನ್ ಗೇಟ್, ಇಂಡಿಯಾ ಗೇಟ್, ಐಜಿಎಲ್ ಗ್ಯಾಸ್ ಪೈಪ್ ಲೈನ್ ಬಳಿ ಕೃತ್ಯ ಎಸಗಲು ಪ್ಲಾನ್ ಮಾಡಿದ್ದರು ಎಂದು ವರದಿಯಾಗಿದೆ. ಇದನ್ನು ಓದಿ: ದೇಶದ ಹಬ್ಬಕ್ಕೆ ಕ್ಷಣಗಣನೆ : ಸಿಂಗಾರಗೊಂಡಿದೆ ರಾಜಪಥ್: ಈ ಬಾರಿಯ ಪರೇಡ್ ವಿಶೇಷತೆ ಏನು?
Advertisement
Advertisement
ಹೇಗಿದೆ ಭದ್ರತೆ?
ಟ್ರಾಫಿಕ್ ಸಿಬ್ಬಂದಿ ಸೇರಿದಂತೆ ಒಟ್ಟು 25 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿ ಕ್ಯಾಮೆರಾದ ಜೊತೆ ಫೇಸ್ ರೆಕಗ್ನಿಷನ್ ಕ್ಯಾಮೆರಾ, ವಿರೋಧಿ ವಿಮಾನಗಳನ್ನು ಹೊಡೆಯಬಲ್ಲ ಗನ್ ತಂಡ, ಸ್ನೈಪರ್ಸ್ ತಂಡವನ್ನು ಬಳಸಲಾಗುತ್ತಿದೆ. ಪರೇಡ್ ನಡೆಯುವ 8 ಕಿಮೀ ಸುತ್ತ ಬಿಗಿಭದ್ರತೆಯನ್ನು ಏರ್ಪಡಿಸಲಾಗಿದೆ. ಇದನ್ನು ಓದಿ: ಫಸ್ಟ್ ಟೈಂ ಆರ್‌ಡಿಯಲ್ಲಿ ಪುರುಷ ದಳವನ್ನು ಮುನ್ನಡೆಸಲಿದ್ದಾರೆ ಮಹಿಳಾ ಅಧಿಕಾರಿ
Advertisement
sಸ್ನೈಪರ್ಸ್ ಗಳನ್ನು ಅತಿ ಎತ್ತರದ ಕಟ್ಟಡಗಳ ಮೇಲೆ ನಿಯೋಜಿಸಲಾಗಿದ್ದು, ನೂರಾರು ಸಿಸಿಟಿವಿಗಳು ಪರೇಡ್ ನಡೆಯುವ ಪ್ರದೇಶವನ್ನು ಸೆರೆ ಹಿಡಿಯಲಿದೆ. ಒಂದೊಮ್ಮೆ ದಾಳಿ ನಡೆದರೂ ವಿರೋಧಿಗಳ ವಿರುದ್ಧ ಪ್ರತಿ ದಾಳಿ ನಡೆಸಲು ಕೌಂಟರ್ ಡ್ರೋಣ್ ತಂತ್ರಜ್ಞಾನವನ್ನು ಅಳಡಿಸಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತು, ವ್ಯಕ್ತಿ ಕಂಡು ಬಂದರೂ ಕ್ಷಣ ಮಾತ್ರದಲ್ಲಿ ಮಾಹಿತಿ ಲಭಿಸಲಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ: ಮೋದಿ ಜೊತೆ ಗಣರಾಜ್ಯೋತ್ಸವ ವೀಕ್ಷಿಸಲು ಬೆಂಗ್ಳೂರು ವಿದ್ಯಾರ್ಥಿನಿಗೆ ಬಂತು ಆಹ್ವಾನ
ದೆಹಲಿಯ ಹೆಚ್ಚು ಜನಸಂದಣಿ ಹೊಂದಿರುವ ಮಾರುಕಟ್ಟೆ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಮೆಟ್ರೋ ಮತ್ತು ಗುರುತಿಸಿದ ಇತರೇ ಸ್ಥಳಗಳಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಅಲ್ಲದೇ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಬದಲಾವಣೆಯಾದ ಮಾರ್ಗಗಳನ್ನು ನಿರ್ವಹಣೆ ಮಾಡುತ್ತಾರೆ. ಸಾರ್ವಜನಿಕರ ಸಂಚಾರಿ ಸ್ಥಳಗಳಲ್ಲಿ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ರಾಜಪಥ್ ರಸ್ತೆಯಲ್ಲಿ ಮೊದಲ ಬಾರಿ ಪ್ರತಿಧ್ವನಿಸಲಿದೆ ಕನ್ನಡದ ಹಾಡು
Night checking and patrolling #RepublicDay @DelhiPolice @LtGovDelhi pic.twitter.com/byGisKJRBj
— DCP West Delhi (@DCPWestDelhi) January 25, 2019
Intensive checks are being conducted everyday to ensure an incident free #RepublicDay. @DelhiPolice @LtGovDelhi pic.twitter.com/h5fPuOTyK7
— DCP West Delhi (@DCPWestDelhi) January 22, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv