ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್‌ ಕಿತ್ತಾಟ

Public TV
2 Min Read
face off breaks out between Pakistani Police and Pakistani army at Laki Marwat of Khyber Pakhtunkhwa

ಇಸ್ಲಾಮಾಬಾದ್‌: ಭಾರತದ (India) ವಿರುದ್ಧ ಯುದ್ಧಕ್ಕೆ ಸಿದ್ಧವಾಗುತ್ತಿರುವ ಪಾಕಿಸ್ತಾನ ಸೇನೆಗೆ (Pakistan Army) ಅಲ್ಲಿನ ಪೊಲೀಸರೇ (Police) ಶಾಕ್‌ ನೀಡಿದ್ದಾರೆ.

ಖೈಬರ್ ಪಖ್ತುಂಖ್ವಾದ ಲಕಿ ಮಾರ್ವಾತ್‌ನಲ್ಲಿ ಪಾಕಿಸ್ತಾನ ಸೇನೆ ಮತ್ತು ಪಶ್ತೂನ್‌ ಪೊಲೀಸರು (Pashtun Police) ಮುಖಾಮುಖಿಯಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.

ಪಶ್ತೂನ್‌ ಪೊಲೀಸರು ಸೈನಿಕರನ್ನು ಅಡ್ಡ ಹಾಕಿ, ಇಲ್ಲಿಗೆ ನೀವು ಯಾಕೆ ಬಂದಿದ್ದೀರಿ. ನಿಮಗೆ ಹುಚ್ಚು ಹಿಡಿದಿದ್ಯಾ? ನೀವು ಇಲ್ಲಿ ಏನು ಮಾಡುತ್ತಿದ್ದೀರಿ? ನಿಮ್ಮ ಜನರಲ್ ಬಂದರೂ ಸಹ ನೀವು ಇನ್ನೂ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಗದರಿದ್ದಾರೆ.

ಪಾಕ್‌ ಸೈನಿಕರನ್ನು ಪೊಲೀಸರು ಕೆಣಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗಿದೆ. ಮುಂದಿನ ದಿನಗಳಲ್ಲಿ ಪೊಲೀಸರು ಮತ್ತು ಸೇನೆ ಮಧ್ಯೆ ನಡೆಯವ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.‌ ಇದನ್ನೂ ಓದಿ: ಭಾರತದ ವಿರುದ್ಧ ವಿಷ ಕಾರುತ್ತಿದ್ದ ಅಫ್ರಿದಿ ಬಾಯಿ ಬಂದ್‌!

ಕಿತ್ತಾಟಕ್ಕೆ ಮೂಲ ಕಾರಣ ಏನು?
ಪಶ್ತೂನ್‌ಗಳು ಇರಾನಿನ ಜನಾಂಗೀಯ ಗುಂಪಾಗಿದ್ದು ಇವರನ್ನು ಪಖ್ತೂನ್‌ಗಳು ಅಥವಾ ಪಠಾಣ್‌ಗಳು ಎಂದೂ ಕರೆಯುತ್ತಾರೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಪಶ್ತೂನ್‌ಗಳು ಪೂರ್ವ ಇರಾನಿನ ಭಾಷೆಯಾದ ಪಾಷ್ಟೋವನ್ನು ಮಾತನಾಡುತ್ತಾರೆ ಮತ್ತು ಸುನ್ನಿ ಮುಸ್ಲಿಮರಾಗಿದ್ದಾರೆ. ಇದನ್ನೂ ಓದಿ: Haveri | ಮಾರ್ಗ ಮಧ್ಯೆ ಸಾರಿಗೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಡ್ರೈವರ್

ಪಶ್ತೂನ್‌ಗಳು ಪಾಕಿಸ್ತಾನವನ್ನು ವಿರೋಧಿಸಲು ಮುಖ್ಯ ಕಾರಣ ಡುರಾಂಡ್‌ ಗಡಿ (Durand Line) ರೇಖೆ. ಪಾಕಿಸ್ತಾನ ಮತ್ತು ಅಫ್ಘಾನ್‌ ಮಧ್ಯೆ 2,670 ಕಿ.ಮೀ ಉದ್ದದ ಗಡಿ ರೇಖೆ ಹಾದು ಹೋಗಿದೆ. ಅಫ್ಘಾನಿಸ್ತಾನದಲ್ಲಿ ಪಶ್ತೂನ್‌ ಬುಡಕಟ್ಟು ಜನಸಂಖ್ಯೆಯ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇತ್ತ ಪಾಕಿಸ್ತಾನದಲ್ಲೂ ಪಶ್ತೂನ್‌ ಜನ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇಲ್ಲಿ ಕೆಲ ಸಂಬಂಧಿಕರು ಅಫ್ಘಾನಿಸ್ತಾನ ಭಾಗದಲ್ಲಿದ್ದರೆ ಇನ್ನು ಕೆಲವರು ಪಾಕಿಸ್ತಾನದಲ್ಲಿದ್ದಾರೆ. ಈ ಕಾರಣಕ್ಕೆ ಅಫ್ಘಾನಿಸ್ತಾನ ಇಲ್ಲಿಯವರೆಗೆ ಅದು ಗಡಿ ರೇಖೆ ಎಂಬುದನ್ನು ಒಪ್ಪಿಕೊಂಡಿಲ್ಲ.

ಇತ್ತೀಚಿನ ದಿನಗಳಲ್ಲಿ ಕಿತ್ತಾಟ ಜಾಸ್ತಿಯಾಗಲು ಕಾರಣ ಫಾಟಾ ಪ್ರ್ಯಾಂತ್ಯದ ಬಿಕ್ಕಟ್ಟು. 1947ರಲ್ಲಿ ಪಾಕಿಸ್ತಾನ ರಚನೆಯಾದ ಬಳಿಕ 2017ರವರೆಗೆ ಈ Federally Administered Tribal Areas ಎಂದು ಕರೆಸಿಕೊಳ್ಳುವ ಪ್ರದೇಶದ ನಿಯಂತ್ರಣ ಪಾಕ್‌ ಬಳಿ ಇರಲಿಲ್ಲ. 2018ರಲ್ಲಿ ಪಾಕ್‌ ಸಂಸತ್ತು ಮಸೂದೆ ಪಾಸ್‌ ಮಾಡಿ ಅದು ತನ್ನ ಭಾಗ ಎಂದು ಘೋಷಿಸಿತು. ಈ ಪ್ರದೇಶವನ್ನು ಖೈಬರ್ ಪಖ್ತುಂಕ್ವಾದ ಜೊತೆ ವಿಲೀನಗೊಳಿಸಿತು. ಪಾಕಿಸ್ತಾನದ ಈ ನಿರ್ಧಾರ ತಾಲಿಬಾನ್‌ ಮತ್ತು ಪಶ್ತೂನ್‌ ಜನಾಂಗದವರನ್ನು ಕೆರಳಿಸಿದ್ದು ಈ ವಿಚಾರದ ಬಗ್ಗೆ ಆಗಾಗ ಗಲಾಟೆ ನಡೆಯುತ್ತಿರುತ್ತದೆ.

Share This Article