ತಿರುವನಂತಪುರಂ: ವಿಶ್ವದ ಅತ್ಯಂತ ದುಬಾರಿ ಬ್ರಿಟಿಷ್ ರಾಯಲ್ ನೌಕಾಪಡೆಯ F-35B ಫೈಟರ್ ಜೆಟ್ ವಿಮಾನವು ಮಂಗಳವಾರ (ಜು.22) ಕೇರಳದಿಂದ (Kerala) ಹೊರಡಲಿದೆ.
ಕಳೆದ 5 ವಾರಗಳಿಂದ ಕೇರಳದ ತಿರುವನಂತಪುರ ಏರ್ಪೋರ್ಟ್ನಲ್ಲಿದ್ದ (Thiruvananthapuram International Airport) ವಿಶ್ವದ ಅತ್ಯಂತ ದುಬಾರಿ ಯುದ್ಧ ವಿಮಾನ ಇದೀಗ ಟೇಕ್ ಆಫ್ಗೆ ಸಿದ್ಧವಾಗಿದೆ. ಯುದ್ಧ ವಿಮಾನದ ಹೈಡ್ರಾಲಿಕ್ ಸಿಸ್ಟಮ್ನಲ್ಲಿದ್ದ ದೋಷವನ್ನು ಬ್ರಿಟನ್ ಎಂಜಿನಿಯರುಗಳು ಸರಿಪಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ʻದೃಶ್ಯಂʼ ಸಿನಿಮಾ ಸ್ಟೈಲ್ನಲ್ಲಿ ಕೊಲೆ – ಪ್ರಿಯಕರನ ಜೊತೆಗೂಡಿ ಗಂಡನನ್ನ ಕೊಂದು ಟೈಲ್ಸ್ ಕೆಳಗೆ ಹೂತಿದ್ದ ಪತ್ನಿ
ತಾಂತ್ರಿಕ ದೋಷದಿಂದಾಗಿ ಜೂ.14ರಂದು ತಿರುವನಂತಪುರ ಇಂಟರ್ ನ್ಯಾಷನಲ್ ಏರ್ಪೋರ್ಟ್ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಬ್ರಿಟನ್, ಭಾರತದ ಅನುಮತಿ ಕೇಳಿತ್ತು. ಭಾರತವು ತಕ್ಷಣವೇ ಅನುಮತಿ ನೀಡಿದ್ದರಿಂದ ತಿರುವನಂತಪುರ ಏರ್ಪೋರ್ಟ್ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿತ್ತು. ಆದರೆ, ತಕ್ಷಣಕ್ಕೆ ವಿಮಾನವನ್ನು ರಿಪೇರಿ ಮಾಡಲು ಬ್ರಿಟನ್ ಇಂಜಿನಿಯರ್ಗಳಿಗೆ, ತಜ್ಞರಿಗೆ ಸಾಧ್ಯವಾಗಿರಲಿಲ್ಲ. ಒಂದು ತಿಂಗಳಿಗೂ ಹೆಚ್ಚು ಕಾಲ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಇದ್ದ ಯುದ್ಧ ವಿಮಾನದ ದುರಸ್ತಿ ಕಾರ್ಯ ಕೊನೆಗೂ ಯಶಸ್ವಿಯಾಗಿದೆ.
ಮೂಲಗಳ ಪ್ರಕಾರ, ತಾಂತ್ರಿಕ ದೋಷವನ್ನು ಸದ್ಯ ಸರಿಪಡಿಸಲಾಗಿದ್ದು, ಪ್ರಾಯೋಗಿಕ ಹಾರಾಟಕ್ಕಾಗಿ ಫೈಟರ್ ಜೆಟ್ನ್ನು ಹ್ಯಾಂಗರ್ನಿಂದ ಹೊರಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಈ ಪ್ರಯೋಗದ ಫಲಿತಾಂಶದ ಆಧಾರದ ಮೇಲೆ ನಾಳೆ ಇಂಗ್ಲೆಂಡ್ನತ್ತ ಪ್ರಯಾಣ ಬೆಳೆಸಲಿದೆ. ಜುಲೈ ತಿಂಗಳ ಆರಂಭದಲ್ಲಿ ವಿಮಾನದ ದುರಸ್ತಿಗಾಗಿ ಆರ್ಎಎಫ್ಎ 400ಎಂ ಅಟ್ಲಾಸ್ನಲ್ಲಿ ಬಂದ ತಂತ್ರಜ್ಞರ ತಂಡವು ವಿಮಾನವು ಹಾರಾಟಕ್ಕೆ ಅರ್ಹವಾಗಿದೆ ಎಂದು ತಿಳಿಸಿದ್ದರು.
ಎಫ್-35 ವಿಶ್ವದ ಅತ್ಯಂತ ದುಬಾರಿ ಫೈಟರ್ ಜೆಟ್ಗಳಲ್ಲಿ ಒಂದಾಗಿದ್ದು, ಇದರ ಬೆಲೆ 115 ದಶಲಕ್ಷ ಡಾಲರ್ಗಿಂತ ಅಧಿಕವಾಗಿದೆ. ಇದನ್ನು ಕಡಿಮೆ ದೂರದ ಟೇಕ್-ಆಫ್ ಹಾಗೂ ಹೆಚ್ಚು ದೂರದ ಲ್ಯಾಂಡಿಂಗ್ಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ನ್ಯಾಟೋ ವಾಯುಪಡೆಯ ಮೂಲಾಧಾರವಾಗಿದೆ.ಇದನ್ನೂ ಓದಿ: ಪತ್ನಿ ವಿರುದ್ಧ ಅಪಪ್ರಚಾರ ಮಾಡಿದ ವಿಪಕ್ಷಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು: ಸಿಎಂ