ಕಾರಿನ ಮುಂಭಾಗದ ಗ್ಲಾಸಿಗೆ ಬಡಿದು ಸಿಕ್ಕಿಕೊಂಡಿತ್ತು ಯುವತಿಯ ತಲೆ

Public TV
2 Min Read
Eyewitness Of Koramangala Audi Car Accident Speaks To Public TV Bengaluru

ಬೆಂಗಳೂರು: ಕಾರು ಗುದ್ದಿದ ರಭಸಕ್ಕೆ ಹಿಂದುಗಡೆ ಮಧ್ಯಭಾಗದಲ್ಲಿ ಕುಳಿತಿದ್ದ ಯುವತಿಯ ತಲೆ ಮುಂಭಾಗದ ಗ್ಲಾಸಿಗೆ ಬಡಿದು ಸಿಕ್ಕಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ತಡರಾತ್ರಿ 1:30ರ ವೇಳೆಗೆ ಕೋರಮಂಗಲ ಮಂಗಳ ಕಲ್ಯಾಣ ಮಂಟಪದಲ್ಲಿ 7 ಮಂದಿಯನ್ನು ಬಲಿ ತೆಗೆದುಕೊಂಡ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೇಗವಾಗಿ ಬಂದ ಕಾರು ಫುಟ್‍ಪಾತ್ ಹತ್ತಿ ಪಕ್ಕದ ಕಟ್ಟಡದ ಕಾಂಪೌಂಡಿಗೆ ಬಡಿದು ನಂತರ ವಿದ್ಯುತ್ ಕಂಬಕ್ಕೆ ಗುದ್ದಿ ಹಿಂದಕ್ಕೆ ಬಂದಿದೆ. ಅಪಘಾತದ ರಭಸಕ್ಕೆ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಡಿ ಕಾರಿನ ಮುಂಭಾಗ ಸಂಪೂರ್ಣ ಅಪ್ಪಚ್ಚಿಯಾಗಿದೆ. ಪಬ್ಲಿಕ್ ಟಿವಿಗೆ ಪ್ರತ್ಯಕ್ಷದರ್ಶಿ ಪ್ರಭು ಅಪಘಾತದ ನಂತರ ಏನಾಯ್ತು ಎಂಬುದನ್ನು ವಿವರಿಸಿದ್ದಾರೆ.

ಪ್ರತ್ಯಕ್ಷದರ್ಶಿಯ ಮಾತು
ನಾನು ಓಲಾ ಕ್ಯಾಬ್ ಓಡಿಸುತ್ತಿದ್ದು ಕಾರು ಪಾರ್ಕ್ ಮಾಡಿ ರೂಮಲ್ಲಿ ನಿದ್ದೆ ಮಾಡುತ್ತಿದ್ದೆ. ರಾತ್ರಿ 1:34ಕ್ಕೆ ಜೋರಾಗಿ ಶಬ್ಧ ಕೇಳಿತು. ಕೂಡಲೇ ಎದ್ದು ನೋಡಿದಾಗ ಕಾರಿನಲ್ಲಿ ದಟ್ಟ ಹೊಗೆ ಬರುತ್ತಿತ್ತು. ಇದನ್ನೂ ಓದಿ : ಕೋರಮಂಗಲದಲ್ಲಿ ಭೀಕರ ಅಪಘಾತ – ಹೊಸೂರು ಶಾಸಕನ ಪುತ್ರ ಸಾವು

ತಕ್ಷಣ ರಸ್ತೆಯಲ್ಲಿ ಬರ್ತಿದ್ದ ಕೆಲವು ವಾಹನ ತಡೆದು ಕಾರಿನಲ್ಲಿ ಇದ್ದವರ ರಕ್ಷಣೆಗೆ ಯತ್ನಿಸಿದೆವು. ಈ ವೇಳೆ ಕೆಲವರು ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದರು.

ಗುದ್ದಿದ ರಭಸಕ್ಕೆ ಗಾಡಿಯ ಬಾಗಿಲು ತೆಗೆಯಲು ಸಾಧ್ಯವಾಗಿರಲಿಲ್ಲ. ಲಾಕ್ ಆಗಿತ್ತು. 20 ನಿಮಿಷ ಪ್ರಯತ್ನಪಟ್ಟ ಬಳಿಕ ಡೋರ್ ಓಪನ್ ಮಾಡಿದ್ದೆವು. ಈ ವೇಳೆ ಒಬ್ಬ ವ್ಯಕ್ತಿ ಕೆಮ್ಮುತ್ತಿದ್ದರು. ಉಳಿದವರಲ್ಲಿ ಯಾರಿಗೂ ಪ್ರಜ್ಞೆಯೇ ಇರಲಿಲ್ಲ.

bengaluru Koramangala Accident Audi q 3

ಸ್ಥಳಕ್ಕೆ ಬಂದ ಕೆಲವರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅದರಲ್ಲೂ ಹಿಂದುಗಡೆ ಮಧ್ಯಭಾಗದಲ್ಲಿ ಕುಳಿತಿದ್ದ ಯುವತಿ ತಲೆ ಮುಂಭಾಗದ ಗ್ಲಾಸಿಗೆ ಬಡಿದು ಸಿಕ್ಕಿಕೊಂಡಿತ್ತು. ಕಾರಿನಲ್ಲಿದ್ದವರು ನೈಟ್ ಡ್ರೆಸ್ ಧರಿಸಿದ್ದರು ಮತ್ತು ಅವರ ಕೈ ಕಾಲು ಕಟ್ ಆಗಿತ್ತು. ವಿಪರೀತ ರಕ್ತ ಸುರಿಯುತ್ತಿತ್ತು. ಎಂದು ಘಟನೆಯನ್ನು ವಿವರಿಸಿದರು.  ದನ್ನೂ ಓದಿ: ಭೀಕರ ಅಪಘಾತವಾದರೂ ಆಡಿ ಕಾರಿನ ಏರ್ ಬ್ಯಾಗ್ ಓಪನ್ ಆಗಿಲ್ಲ ಯಾಕೆ?

ಈ ಅಪಘಾತದ ಬಗ್ಗೆ ಕ್ಯಾಬ್ ಚಾಲಕ ಸತೀಶ್ ದೂರು ನೀಡಿದ ಹಿನ್ನೆಲೆಯಲ್ಲಿ ಆಡುಗೋಡಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *