ಶ್ರೀಹರಿಕೋಟಾ: ಗಡಿಯಲ್ಲಿ ರಾತ್ರಿಯ ವೇಳೆ ಕುತಂತ್ರ ಮಾಡುತ್ತಿರುವ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲು ಭಾರತ (India) ಈಗ ಬೇಹುಗಾರಿಕಾ ಉಪಗ್ರಹವನ್ನು (Spy Satellite) ಉಡಾವಣೆ ಮಾಡುತ್ತಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) EOS-9 ರೇಡಾರ್ ಇಮೇಜಿಂಗ್ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಭಾನುವಾರ ಬೆಳಗ್ಗೆ 5:59ಕ್ಕೆ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಈ ಉಪಗ್ರಹ ನಭಕ್ಕೆ ಚಿಮ್ಮಲಿದೆ.
ಬೆಂಗಳೂರಿನಲ್ಲಿರುವ ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರವು ಗೂಢಚಾರ ಉಪಗ್ರವನ್ನು ನಿರ್ಮಿಸಿದೆ. ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೇಡಾರ್ ಅನ್ನು ಉಪಗ್ರಹ ಹೊಂದಿದ್ದು, ಇದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಮತ್ತು ಕಡಿಮೆ ಬೆಳಕಿನಲ್ಲೂ ಭೂಮಿಯ ಮೇಲ್ಮೈಯ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ.
ಇಸ್ರೋ 101ನೇ ದೊಡ್ಡ ರಾಕೆಟ್ ಉಡಾವಣೆ ಇದಾಗಿದ್ದು 1,696 ಕಿಲೋಗ್ರಾಂ ತೂಕದ EOS-9 ರಾಡಾರ್ ಇಮೇಜಿಂಗ್ ಉಪಗ್ರಹವು ಭೂಮಿಯ ಮೇಲ್ಮೈಯಿಂದ 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಳ್ಳಲಿದೆ. ಇದನ್ನೂ ಓದಿ: ಪಾಕ್ ವಿರುದ್ಧ ‘ಬ್ರಹ್ಮೋಸ್’ ಪರಾಕ್ರಮ – ಬ್ರಹ್ಮೋಸ್ ಕ್ಷಿಪಣಿಗಾಗಿ 18 ರಾಷ್ಟ್ರಗಳಿಂದ ಬೇಡಿಕೆ
ಈಗಾಗಲೇ ಬಾಹ್ಯಾಕಾಶಕ್ಕೆ ಭಾರತ ಹಾರಿಸಿದ 57 ಕ್ಕೂ ಹೆಚ್ಚು ಉಪಗ್ರಹಗಳ ಸಮೂಹಕ್ಕೆ EOS-9 ಸೇರ್ಪಡೆಯಾಗಲಿದೆ. ಇವುಗಳಲ್ಲಿ ಕಕ್ಷೆಯಲ್ಲಿರುವ ನಾಲ್ಕು ರೇಡಾರ್ ಉಪಗ್ರಹಗಳು ಸೇರಿವೆ.
Watch this timelapse of PSLV-C61 / EOS-09 — marking ISRO’s 101st launch — as PSLV is moved from the Payload Integration Facility (PIF) to the Mobile Service Tower (MST) at SDSC-SHAR, Sriharikota for further integration.
A step closer to launch on 18 May at 5:59 IST!#PSLVC61… pic.twitter.com/9uEI4oZzlo
— ISRO (@isro) May 15, 2025
ಉಪಗ್ರಹದ ವಿಶೇಷತೆ ಏನು?
ಸಾಧಾರಣವಾಗಿ ಮೋಡಗಳು, ಬಿರುಗಾಳಿ, ರಾತ್ರಿಯ ವೇಳೆ ಹೆಚ್ಚಿನ ಉಪಗ್ರಹಗಳಿಗೆ ಸರಿಯಾಗಿ ಚಿತ್ರಗಳನ್ನು ಸೆರೆ ಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ ಈ ಉಪಗ್ರಹ ಮೋಡಗಳು, ಮಳೆ, ಮಂಜು ಸೇರಿದಂತೆ ಎಲ್ಲಾ ರೀತಿಯ ಹವಾಮಾನದಲ್ಲೂ ಹಗಲು ಮತ್ತು ರಾತ್ರಿ ಸ್ಷಷ್ಟವಾದ ಚಿತ್ರಗಳನ್ನು ಸೆರೆ ಹಿಡಿಯವ ಸಾಮರ್ಥ್ಯ ಹೊಂದಿದೆ.
EOS-09 ನಲ್ಲಿರುವ Synthetic Aperture Radar ಎಷ್ಟು ಶಕ್ತಿಶಾಲಿ ಎಂದರೆ ಭೂ ಪ್ರದೇಶ, ಸಸ್ಯಗಳು ಮತ್ತು ಮಾನವ ನಿರ್ಮಿತ ಡೇರೆಗಳನ್ನು ಸಹ ವರ್ಗೀಕರಣ ಮಾಡಿ ಫಲಿತಾಂಶ ನೀಡುತ್ತದೆ. ಹೀಗಾಗಿ ಇನ್ನು ಮುಂದೆ ಗಡಿಯಲ್ಲಿ ಯಾವುದೇ ಸಮಯದಲ್ಲಿ ಅನುಮಾನಾಸ್ಪದ ಚಟುಟವಿಕೆ ನಡೆದರೂ ಅದರ ಸಂಪೂರ್ಣ ಚಿತ್ರಗಳು ಕ್ಯಾಮೆರಾದಲ್ಲಿ ಸೆರೆಯಾಗಲಿದೆ.
10 ರಿಂದ 225 ಕಿಮೀ ವರೆಗಿನ ವಿಶಾಲವಾದ ಜಾಗಗಳನ್ನು ಸ್ಕ್ಯಾನ್ ಮಾಡುತ್ತದೆ. ದೊಡ್ಡ ಪ್ರಮಾಣದ ವಿಪತ್ತು ನಡೆದಾಗ ಉದಾಹರಣೆ ಪ್ರವಾಹ, ಚಂಡಮಾರುತಗಳು, ಭೂಕುಸಿತ ನಡೆದಾಗ ಅದರ ನೈಜ ಚಿತ್ರಣವನ್ನು ವೀಕ್ಷಿಸಬಹುದು. ಇದನ್ನೂ ಓದಿ: ಪಾಕಿಸ್ತಾನ ಪರ ಬೇಹುಗಾರಿಕೆ – ಭಾರತದ ಯೂಟ್ಯೂಬರ್ ಬಂಧನ
ಈ ಉಪಗ್ರಹ ಗಡಿಯನ್ನು ಕಾಯುತ್ತದೆ ಎಂದು ಹೇಳಿದರೂ ತಪ್ಪಾಗಲಾರದು. ಅಕ್ರಮ ಸಮುದ್ರ ಚಟುವಟಿಕೆಯನ್ನು ಮೇಲ್ವಿಚಾರಣೆ, ತೈಲ ಸೋರಿಕೆಗಳನ್ನು ಪತ್ತೆ, ಭಾರತದ 7,500 ಕಿಮೀ ಉದ್ದದ ಕರಾವಳಿಯಲ್ಲಿ ಹಡಗುಗಳನ್ನು ಪತ್ತೆ ಹಚ್ಚುತ್ತದೆ.