ಹಾಸನ: 28 ನೇ ವರ್ಷದ ಹುಟ್ಟುಹಬ್ಬ ಅಚರಿಸಿಕೊಳ್ಳುತ್ತಿರುವ ಜೆಡಿಎಸ್ ಪಕ್ಷದ ಯುವ ಮುಖಂಡ ಹಾಗೂ ಸಚಿವ ಎಚ್‍ಡಿ ರೇವಣ್ಣ ಪುತ್ರ ತಮ್ಮ ಜನ್ಮದಿನದ ವಿಶೇಷವಾಗಿ ನೇತ್ರದಾನ ಮಾಡಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಜಿಲ್ಲೆ ಹೊಳೆನರಸೀಪುರದಲ್ಲಿ ತಮ್ಮ ನಿವಾಸಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡದ ಪ್ರಜ್ವಲ್ ರೇವಣ್ಣ, ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡರು. ಇದೇ ವಿಶೇಷವಾಗಿ ತಮ್ಮ ನೇತ್ರದಾನ ಮಾಡುವ ಪತ್ರಕ್ಕೆ ಸಹಿ ಹಾಕಿದ ಪ್ರಜ್ವಲ್ ಹಲವರಿಗೆ ಆದರ್ಶವಾದರು. ಕಾರ್ಯಕ್ರಮದ ವೇಳೆ ಪುತ್ರನಿಗೆ ಸಚಿವ ರೇವಣ್ಣ ಹಾಗು ಭವಾನಿ ರೇವಣ್ಣ ಶುಭಹಾರೈಸಿದರು.
ಪ್ರಜ್ವಲ್ ನೇತ್ರದಾನಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ ನೂರಾರು ಅಭಿಮಾನಿಗಳು ಕೂಡ ನೇತ್ರದಾನ ಪತ್ರಕ್ಕೆ ಸಹಿ ಹಾಕಿದರು. ಬಳಿಕ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪ್ರಜ್ವಲ್ ಅಭಿಮಾನಿಗಳು ಹಾಗೂ ಬೆಂಬಲಿಗರೊಂದಿಗೆ ಕೇಕ್ ಕತ್ತರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆ ಶುಭಹಾರೈಸಿದರು.
ಈ ವೇಳೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಜನರ ಮಧ್ಯೆ ಇರಲು ನನಗೆ ತುಂಬಾ ಸಂತೋಷವಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಶುಭಹಾರೈಕೆ ಮಾಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ತಮ್ಮ ರಾಜಕೀಯ ಜೀವನ ಕುರಿತು ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೆನೆ. ಪಕ್ಷ ಸಂಘಟನೆಗಾಗಿ ಹೊಸ ಸಂಕಲ್ಪ ಮಾಡಿಕೊಂಡಿದ್ದೇನೆ. ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರ ಕುಂದು ಕೊರತೆ ವಿಚಾರಿಸುವ ಒಂದು ಅಂಶ ನನ್ನ ಮನಸ್ಸಿನಲ್ಲಿದೆ ಎಂದು ಹೇಳಿದ್ದರು.
ಇದೇ ವೇಳೆ ಲೋಕಸಭೆಗೆ ಸ್ಪರ್ಧೆ ಕುರಿತು ಮಾತನಾಡಿ, ಈ ಕುರಿತು ಇದುವರೆಗೂ ನಾನು ಯಾರೊಂದಿಗೂ ಮಾತನಾಡಿಲ್ಲ. ಈ ವಿಚಾರದಲ್ಲಿ ಚರ್ಚಿಸಲು ದೇವೇಗೌಡರೊಂದಿಗೂ ಚರ್ಚಿಸುವ ಅವಕಾಶವೂ ಸಿಕ್ಕಿಲ್ಲ. ಯಾವುದೇ ಮಾತುಕತೆ ನಡೆದಿಲ್ಲ. ಮೊದಲು ಪಕ್ಷ ಸಂಘಟನೆಗೆ ನಾನು ತೊಡಗಿಸಿಕೊಂಡಿದ್ದೇನೆ. ನಾನು ಚುನಾವಣೆಗೆ ಹೋಗುವ ಮುನ್ನ ಪಕ್ಷದಲ್ಲಿ ಕೆಳಮಟ್ಟದ ಸಂಘಟನೆ ಅವಶ್ಯಕತೆ ಇದೆ. ಸದ್ಯ ನಾನು ಪಕ್ಷ ಸಂಘಟನೆ ಕುರಿತು ಗಮನಹರಿಸುತ್ತೇನೆ. ಚುನಾವಣೆ ಸ್ಪರ್ಧೆಯ ವಿಚಾರ ದೊಡ್ಡವರಿಗೆ ಬಿಟ್ಟಿದ್ದು. ನನ್ನ ಅವರು ಯಾವುದಕ್ಕೆ ಬಳಸಿಕೊಳ್ಳುತ್ತಾರೆ ಅದಕ್ಕೆ ನಾನು ಸಿದ್ಧವಾಗಿರುತ್ತೇನೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews